ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ದೂರವಿಲ್ಲ : ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು ಇಂದು ಜಮ್ಮು - ಕಾಶ್ಮೀರದ ಉಧಂಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ, ಮಾತನಾಡಿದ್ದಾರೆ. ಮೋದಿ ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ಹಾಗಾಗಿ ಇಲ್ಲಿಯವರೆಗೆ ನಡೆದಿರುವುದು ಕೇವಲ ಟ್ರೇಲರ್. ನಾನು ಹೊಸ ಜಮ್ಮು ಮತ್ತು ಕಾಶ್ಮೀರ ಹಾಗೂ ಅದ್ಭುತವಾದ ಯೋಚನೆಗಳನ್ನು ನೀಡಲು ಕೆಲಸ ಮಾಡುತ್ತೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಸೆಂಬ್ಲಿ ಚುನಾವಣೆ ನಡೆಯುವ ಸಮಯ ದೂರವಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸಿಗುತ್ತದೆ. ನಿಮ್ಮ ಕನಸುಗಳನ್ನು ನಿಮ್ಮ ಶಾಸಕರು ಮತ್ತು ನಿಮ್ಮ ಮಂತ್ರಿಗಳೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡುತ್ತೇನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ದೂರವಿಲ್ಲ : ಪ್ರಧಾನಿ ಮೋದಿ
Follow us
ಅಕ್ಷಯ್​ ಪಲ್ಲಮಜಲು​​
|

Updated on: Apr 12, 2024 | 12:33 PM

ಉಧಂಪುರ, ಏ.12: ‘ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ರಾಜ್ಯ ಸ್ಥಾನಮಾನ ಸಿಗಲಿದೆ, ವಿಧಾನಸಭೆ ಚುನಾವಣೆಗೆ ಸಮಯ ದೂರವಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹೇಳಿದ್ದಾರೆ. ಅವರು ಇಂದು ಜಮ್ಮು – ಕಾಶ್ಮೀರದ ಉಧಂಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ, ಮಾತನಾಡಿದ್ದಾರೆ. ಈ ಚುನಾವಣೆ ಕೇವಲ ಸಂಸದರನ್ನು ಆಯ್ಕೆ ಮಾಡುವ ಚುನಾವಣೆಯಲ್ಲ, ಇದು ದೇಶದಲ್ಲಿ ಪ್ರಬಲ ಸರ್ಕಾರವನ್ನು ರಚಿಸುವ ಚುನಾವಣೆಯಾಗಿದೆ. ಸರ್ಕಾರವು ಪ್ರಬಲವಾದಾಗ ಅದು ಉತ್ತಮ ಕೆಲಸ ಮಾಡುತ್ತದೆ. ನನ್ನನ್ನು ನಂಬಿ ಮತ್ತು 60 ವರ್ಷಗಳ ಸಮಸ್ಯೆಗಳನ್ನು ನಾನು ಪರಿಹರಿಸುತ್ತೇನೆ, ಇಲ್ಲಿನ ತಾಯಂದಿರು ಮತ್ತು ಸಹೋದರಿಯರಿಗೆ ನಾನು ಗೌರವವನ್ನು ಸಲ್ಲಿಸುವ ಅವಕಾಶವನ್ನು ನೀಡಬೇಕು. ನಾನು ಬಡವರಿಗೆ ಭರವಸೆ ನೀಡಿದ್ದೇನೆ. ಎರಡು ಹೊತ್ತಿನ ಊಟದ ಬಗ್ಗೆ ಚಿಂತಿಸಬೇಕಾಗಿಲ್ಲ, ಇಂದು ಜಮ್ಮು ಮತ್ತು ಕಾಶ್ಮೀರದ ಲಕ್ಷಾಂತರ ಕುಟುಂಬಗಳು ಮುಂದಿನ 5 ವರ್ಷಗಳವರೆಗೆ ಉಚಿತ ಪಡಿತರವನ್ನು ಪಡೆಯಲಿದೆ ಎಂದರು.

ಮೋದಿ ಕಿ ಗ್ಯಾರಂಟಿ ಯಾನಿ ಗ್ಯಾರಂಟಿ ಪುರ ಹೋನೇ ಕಿ ಗ್ಯಾರಂಟಿ (ಮೋದಿ ಗ್ಯಾರಂಟಿ ಎಂದರೆ ಗ್ಯಾರಂಟಿಯನ್ನು ಪೂರೈಸುವ ಗ್ಯಾರಂಟಿ) ಈ ಹಿಂದೆ ಕಾಂಗ್ರೆಸ್​​​ನ ದುರ್ಬಲ ಸರ್ಕಾರಗಳು ಶಹಪುರಕಂಡಿ ಅಣೆಕಟ್ಟನ್ನು ದಶಕಗಳಿಂದ ಹೇಗೆ ಸ್ಥಗಿತಗೊಳಿಸಿದ್ದವು ಎಂಬುದು ನಿಮಗೆ ನೆನಪಿದೆ. ಜಮ್ಮುವಿನ ರೈತರ ಹೊಲಗಳು ಒಣಗಿತ್ತು ಮತ್ತು ಹಳ್ಳಿಗಳು ಕತ್ತಲೆಯಲ್ಲಿತ್ತು, ನಮ್ಮ ರವಿಯ ನೀರು ಪಾಕಿಸ್ತಾನಕ್ಕೆ ಹೋಗುತ್ತಿದೆ. ಇದನ್ನೆಲ್ಲ ಸರಿ ಮಾಡಬೇಕಿದೆ. ಈಗಾಗಲೇ ರೈತರ ಬೇಡಿಕೆಗಳನ್ನು ಈಡೇರಿಸಿದ್ದೇನೆ ಎಂದರು.

ಇನ್ನು ಇಂಡಿಯಾ ಒಕ್ಕೂಟ ಹಾಗೂ ಕಾಂಗ್ರೆಸ್​​​​ ವಿರುದ್ಧ ಕೀಡಿಕಾರಿದ ಮೋದಿ, ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮತ್ತು ಇತರ ಎಲ್ಲಾ ಪಕ್ಷಗಳು ಜಮ್ಮು ಮತ್ತು ಕಾಶ್ಮೀರವನ್ನು ಆ ಹಳೆಯ ದಿನಗಳಿಗೆ ಹಿಂತಿರುಗಿಸಲು ಬಯಸುತ್ತವೆ. ಜಮ್ಮು ಮತ್ತು ಕಾಶ್ಮೀರಕ್ಕೆ ಯಾರೂ ಹಾನಿ ಮಾಡಿಲ್ಲ. ಈ ಕುಟುಂಬ ನಡೆಸುವ ಪಕ್ಷಗಳು ಕುಟುಂಬದಿಂದ ಮತ್ತು ಕುಟುಂಬಕ್ಕಾಗಿ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​​ ಅಧಿಕಾರಕ್ಕಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ 370 ರ ಗೋಡೆಯನ್ನು ನಿರ್ಮಿಸಿದ್ದಾರೆ. ನಿಮ್ಮ ಆಶೀರ್ವಾದದಿಂದ 370 ನೇ ವಿಧಿಯ ಗೋಡೆಯನ್ನು ಕೆಡವಿದ್ದೇವೆ. ಆ ಗೋಡೆಯ ಅವಶೇಷಗಳನ್ನು ನೆಲದಲ್ಲಿ ಹೂತುಹಾಕಿದೆ. ನಾನು ಭಾರತದ ಯಾವುದೇ ರಾಜಕೀಯ ಪಕ್ಷಕ್ಕೆ, ವಿಶೇಷವಾಗಿ ಕಾಂಗ್ರೆಸ್‌ಗೆ ಮತ್ತೆ ನಿಮಗೆ ಧೈರ್ಯವಿದ್ದರೆ 370 ನೇ ವಿಧಿಯನ್ನು ಮರಳಿ ತರಲಿ ಎಂಬ ಸವಾಲು ಹಾಕುತ್ತೇನೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಮೋದಿ ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ಹಾಗಾಗಿ ಇಲ್ಲಿಯವರೆಗೆ ನಡೆದಿರುವುದು ಕೇವಲ ಟ್ರೇಲರ್. ನಾನು ಹೊಸ ಜಮ್ಮು ಮತ್ತು ಕಾಶ್ಮೀರ ಹಾಗೂ ಅದ್ಭುತವಾದ ಯೋಚನೆಗಳನ್ನು ನೀಡಲು ಕೆಲಸ ಮಾಡುತ್ತೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಸೆಂಬ್ಲಿ ಚುನಾವಣೆ ನಡೆಯುವ ಸಮಯ ದೂರವಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸಿಗುತ್ತದೆ. ನಿಮ್ಮ ಕನಸುಗಳನ್ನು ನಿಮ್ಮ ಶಾಸಕರು ಮತ್ತು ನಿಮ್ಮ ಮಂತ್ರಿಗಳೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡುತ್ತೇನೆ ಎಂದರು.

ಇದನ್ನೂ ಓದಿ: ಉರಿಬಿಸಿಲಲ್ಲಿ ಗದ್ದೆಗೆ ಹೋಗಿ ಗೋಧಿ ಬೆಳೆ ಕಟಾವು ಮಾಡಿದ ಸಂಸದೆ ಹೇಮಾ ಮಾಲಿನಿ

ರಾಮ ಮಂದಿರವು ಬಿಜೆಪಿಗೆ ಚುನಾವಣಾ ವಿಷಯವಾಗಿದೆ ಎಂದು ಕಾಂಗ್ರೆಸ್ ಹೇಳುತ್ತದೆ. ರಾಮಮಂದಿರವು ಎಂದಿಗೂ ಚುನಾವಣಾ ವಿಷಯವಾಗಿರಲಿಲ್ಲ, ಹಾಗೂ ಅದು ಎಂದಿಗೂ ಚುನಾವಣಾ ವಿಷಯವಾಗುವುದಿಲ್ಲ. ಬಿಜೆಪಿ ಹುಟ್ಟುವ ಮೊದಲೇ ರಾಮಮಂದಿರ ಇತ್ತು. ವಿದೇಶಿ ದಾಳಿಕೋರರು ನಮ್ಮ ದೇವಾಲಯಗಳನ್ನು ಧ್ವಂಸ ಮಾಡಿದಾಗ ಭಾರತದ ಜನರು ತಮ್ಮ ಧಾರ್ಮಿಕ ಸ್ಥಳಗಳನ್ನು ಉಳಿಸಲು ಹೋರಾಡಿದರು. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ನಾಯಕರು ದೊಡ್ಡ ಬಂಗಲೆಗಳನ್ನು ಉಳಿಸಿಕೊಳ್ಳಲು ರಾಮ್ ಲಲ್ಲಾನ ಡೇರೆಯಲ್ಲಿ ಇಟ್ಟರು ಎಂದು ಕಾಂಗ್ರೆಸ್​​​​ಗೆ ಮೋದಿ ಟಾಂಗ್​​ ನೀಡಿದರು.