ಭಾರತದಲ್ಲಿ ಮನೆಯಲ್ಲೇ ಗರ್ಭಪಾತ ಮಾಡಿಕೊಳ್ಳುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಳ; ಇದರ ಕಾರಣ, ಅಡ್ಡಪರಿಣಾಮವೇನು?

| Updated By: ಸುಷ್ಮಾ ಚಕ್ರೆ

Updated on: Jun 17, 2022 | 1:14 PM

ಸುಮಾರು ಅರ್ಧದಷ್ಟು ಮಹಿಳೆಯರು (ಶೇ. 48) ಗರ್ಭಪಾತವನ್ನು ಬಯಸಲು ಮುಖ್ಯ ಕಾರಣವೆಂದರೆ ಪ್ಲಾನ್ ಮಾಡದ ಗರ್ಭಧಾರಣೆ. ಶೇ. 10ರಷ್ಟು ಮಹಿಳೆಯರು ತಮ್ಮ ಈಗಿನ ಮಗು ಬಹಳ ಚಿಕ್ಕದಾಗಿರುವುದರಿಂದ ಇಷ್ಟು ಬೇಗ ಇನ್ನೊಂದು ಮಗು ಬೇಡ ಎಂಬ ಕಾರಣಕ್ಕೆ ಗರ್ಭಪಾತ ಮಾಡಿಕೊಳ್ಳುತ್ತಾರೆ

ಭಾರತದಲ್ಲಿ ಮನೆಯಲ್ಲೇ ಗರ್ಭಪಾತ ಮಾಡಿಕೊಳ್ಳುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಳ; ಇದರ ಕಾರಣ, ಅಡ್ಡಪರಿಣಾಮವೇನು?
ಗರ್ಭಿಣಿ ಮಹಿಳೆ
Image Credit source: News18
Follow us on

ನವದೆಹಲಿ: ಗರ್ಭಪಾತ ಮಾಡಿಸಿಕೊಳ್ಳುವುದು ಅಪರಾಧವಾದರೂ ಭಾರತದ ಅದೆಷ್ಟೋ ಮಹಿಳೆಯರು ಮನೆಯಲ್ಲೇ ಗರ್ಭಪಾತ (Abortion) ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಪ್ರತಿ 4 ಗರ್ಭಪಾತಗಳಲ್ಲಿ ಕನಿಷ್ಠ ಒಂದು ಗರ್ಭಪಾತವನ್ನು ಮಹಿಳೆ ತನ್ನ ಮನೆಯಲ್ಲೇ ಸ್ವತಃ ಮಾಡಿಕೊಳ್ಳುತ್ತಿದ್ದಾಳೆ. ಈ ರೀತಿಯ ಅಸುರಕ್ಷಿತ ಗರ್ಭಪಾತದ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅರ್ಧದಷ್ಟು ಮಹಿಳೆಯರು ಗರ್ಭಪಾತ ಮಾಡಿಕೊಳ್ಳಲು ಬಯಸಲು ಮುಖ್ಯ ಕಾರಣವೆಂದರೆ ಅನ್​ಪ್ಲಾನ್ಡ್​ ಗರ್ಭಧಾರಣೆ (Unplanned Pregnancy) ಎಂದು 2019-21ರ ಸರ್ಕಾರಿ ಅಂಕಿಅಂಶಗಳು ತಿಳಿಸಿವೆ.

2015-16ರ ವಿಶ್ಲೇಷಣೆ ಪ್ರಕಾರ, ಮಹಿಳೆಯು ಮನೆಯಲ್ಲಿಯೇ ಮಾಡಿಕೊಂಡ ಗರ್ಭಪಾತದ ಪಾಲು ಶೇ.1ರಷ್ಟು ಹೆಚ್ಚಾಗಿದೆ. ಶೇ. 27ರಷ್ಟು ಗರ್ಭಪಾತವನ್ನು ಮಹಿಳೆ ಸ್ವತಃ ಮನೆಯಲ್ಲಿಯೇ ಮಾಡಿಕೊಂಡಿದ್ದಾಳೆ. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೆ ಆಕೆ ಗರ್ಭಪಾತ ಮಾಡಿಕೊಂಡಿದ್ದಾಳೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5 (NHFS-5) ವರದಿಯು ತಿಳಿಸಿದೆ. ನಗರಕ್ಕಿಂತ (ಶೇ. 22.1) ಗ್ರಾಮೀಣ ಪ್ರದೇಶಗಳಲ್ಲಿ (ಶೇ. 28.7) ಮನೆಯಲ್ಲಿಯೇ ಗರ್ಭಪಾತ ಮಾಡಿಕೊಳ್ಳುವ ಅಭ್ಯಾಸವು ಸಾಮಾನ್ಯವಾಗಿಬಿಟ್ಟಿದೆ ಎಂದು ಅಧ್ಯಯನ ಹೇಳಿದೆ. (Source)

ಸುಮಾರು ಅರ್ಧದಷ್ಟು ಮಹಿಳೆಯರು (ಶೇ. 48) ಗರ್ಭಪಾತವನ್ನು ಬಯಸಲು ಮುಖ್ಯ ಕಾರಣವೆಂದರೆ ಪ್ಲಾನ್ ಮಾಡದ ಗರ್ಭಧಾರಣೆ (ಅನ್​ಪ್ಲಾನ್ಡ್​ ಪ್ರೆಗ್ನೆನ್ಸಿ). ಅವರು ಮಗುವನ್ನು ಹೆರಲು ಮಾನಸಿಕವಾಗಿ ಇನ್ನೂ ರೆಡಿಯಾಗಿರುವುದಿಲ್ಲ. ಅನಿರೀಕ್ಷಿತವಾಗಿ ತಾವು ಗರ್ಭಿಣಿಯಾಗಿರುವ ವಿಚಾರ ಗೊತ್ತಾದ ನಂತರ ಅವರು ಗರ್ಭಪಾತ ಮಾಡಿಕೊಳ್ಳಲು ನಿರ್ಧರಿಸುತ್ತಾರೆ.

ಇದನ್ನೂ ಓದಿ
Pregnancy: ಗರ್ಭಾವಸ್ಥೆಯಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?
Pregnancy Diet: ಗರ್ಭಾವಸ್ಥೆಯಲ್ಲಿ ಈ ಆಹಾರಗಳ ಸೇವನೆ ಬೇಡವೇ ಬೇಡ
ಗರ್ಭಾವಸ್ಥೆಯಲ್ಲಿ ಸ್ಟ್ರೆಚ್ ಮಾರ್ಕ್ ಏಕೆ ಉಂಟಾಗುತ್ತದೆ? ವೈದ್ಯರ ಸಲಹೆ ಇಲ್ಲಿದೆ ಗಮನಿಸಿ

ಇದನ್ನೂ ಓದಿ: Viral News: ಗೆಳೆಯನಿಂದ ಗರ್ಭಿಣಿಯಾಗಲೇಬೇಕೆಂಬ ಹಠದಿಂದ ಎಡವಟ್ಟು ಮಾಡಿಕೊಂಡ ಮಹಿಳೆ; ಅಷ್ಟಕ್ಕೂ ಆಗಿದ್ದೇನು?

ಇನ್ನು, ಶೇ. 10ರಷ್ಟು ಮಹಿಳೆಯರು ತಮ್ಮ ಈಗಿನ ಮಗು ಬಹಳ ಚಿಕ್ಕದಾಗಿರುವುದರಿಂದ ಇಷ್ಟು ಬೇಗ ಇನ್ನೊಂದು ಮಗು ಬೇಡ. ಇನ್ನೊಂದು ಮಗುವಾದರೆ ಇಬ್ಬರನ್ನೂ ನೋಡಿಕೊಳ್ಳಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಗರ್ಭಪಾತ ಮಾಡಿಕೊಳ್ಳುತ್ತಾರೆ ಎನ್ನಲಾಗಿದೆ. NHFS-5 ಪ್ರಕಾರ, ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಶೇ.53ರಷ್ಟು ಗರ್ಭಪಾತಗಳನ್ನು ನಡೆಸಲಾಗಿದೆ. ಶೇ. 20ರಷ್ಟು ಗರ್ಭಪಾತವನ್ನು ಸಾರ್ವಜನಿಕ ಆರೋಗ್ಯ ವಲಯದಲ್ಲಿ ನಡೆಸಲಾಗಿದೆ.

ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮಹಿಳೆಯರು ಮನೆಯಲ್ಲೇ ಗರ್ಭಪಾತ ಮಾಡಿಕೊಂಡು ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈ ಗರ್ಭಪಾತ ಮಾಡಿಕೊಳ್ಳಲು ಶೇ. 50ರಷ್ಟು ಪ್ರಕರಣಗಳಲ್ಲಿ ಪ್ಲಾನ್ ಮಾಡದ ಗರ್ಭಧಾರಣೆ ಕಾರಣವಾದರೆ ಇನ್ನು ಶೇ. 14ರಷ್ಟು ಪ್ರಕರಣಗಳಲ್ಲಿ ಗರ್ಭಾವಸ್ಥೆಯಲ್ಲಿನ ತೊಡಕುಗಳು ಕಾರಣ ಎಂದು ಡೇಟಾ ತಿಳಿಸಿದೆ.

ಹೆಚ್ಚಿನ ಗರ್ಭಪಾತಗಳನ್ನು ಮನೆಯಲ್ಲಿ (ಶೇ. 39) ಮತ್ತು ಖಾಸಗಿ ಆರೋಗ್ಯ ವಲಯದಲ್ಲಿ (ಶೇ. 38) ನಡೆಸಲಾಗಿದೆ. ಇನ್ನೂ ಶೇ. 24ರಷ್ಟು ಗರ್ಭಪಾತವನ್ನು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಾಡಿಸಿಕೊಳ್ಳಲಾಗಿದೆ. ಅಸುರಕ್ಷಿತ ಗರ್ಭಪಾತವು ತಾಯಿಯ ಸಾವಿಗೆ ಕಾರಣವಾಗಬಹುದು. 1971ರಿಂದ ಭಾರತದಲ್ಲಿ ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯವನ್ನು (MTP) ಕಾನೂನುಬದ್ಧಗೊಳಿಸಲಾಗಿದ್ದರೂ ಅದರ ಅನುಕೂಲ ಪಡೆಯುವವ ಸಂಖ್ಯೆ ಏರಿಕೆಯಾಗಿಲ್ಲ. ವಿಶೇಷವಾಗಿ ದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಈ ಸೇವೆಯನ್ನು ತಲುಪಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ಸರ್ಕಾರ ಇನ್ನಷ್ಟು ಶ್ರಮಿಸಬೇಕಿದೆ.

ಇದಲ್ಲದೆ, ಭಾರತdಲ್ಲಿ ತಾಯಿಯ ಮರಣ ಅನುಪಾತದ (MMR) ಶೇ. 8ರಷ್ಟು ಪ್ರಕರಣಗಳಿಗೆ ಅಸುರಕ್ಷಿತ ಗರ್ಭಪಾತ ಕಾರಣವಾಗಿದೆ. ಈ ಕಾರ್ಯವಿಧಾನಗಳಿಂದ ಬದುಕುಳಿಯುವವರಲ್ಲಿ ಅನೇಕರು ಸಾಮಾನ್ಯವಾಗಿ ದೀರ್ಘಕಾಲದ ಕಾಯಿಲೆ, ದುರ್ಬಲಗೊಳಿಸುವ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಲ್ಲದೆ, ಈ ರೀತಿಯ ಗರ್ಭಪಾತ ಮುಂದೆ ಮಹಿಳೆಯ ಸಂತಾನೋತ್ಪತ್ತಿ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:12 pm, Fri, 17 June 22