ಮಹಾರಾಷ್ಟ್ರದ ಔರಂಗಾಬಾದ್​ ಹೆಸರು ಬದಲಿಸಲು ಮುಂದಾದ ಶಿವಸೇನೆ; ಕಾಂಗ್ರೆಸ್ ಅಸಮಾಧಾನ

ನಗರದ ಹೆಸರು ಬದಲಾವಣೆ ವಿಚಾರದಲ್ಲಿ ಶಿವಸೇನೆಯ ಬದ್ಧತೆಯನ್ನು ಪ್ರಶ್ನಿಸಿರುವ ಬಿಜೆಪಿಗೂ ‘ಸಾಮ್ನಾ’ ತಿರುಗೇಟು ನೀಡಿದೆ. ಪಾಕಿಸ್ತಾನದಲ್ಲಿ ದೇವಾಲಯಗಳ ಧ್ವಂಸವಾಗುತ್ತಿದೆ. ನೀವು ಆ ಕೃತ್ಯಗಳತ್ತ ಗಮನಹರಿಸಿ. ರಾಜ್ಯಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಅವಕಾಶ ಹುಡುಕುವುದು ಬೇಡ ಎಂದಿದೆ.

ಮಹಾರಾಷ್ಟ್ರದ ಔರಂಗಾಬಾದ್​ ಹೆಸರು ಬದಲಿಸಲು ಮುಂದಾದ ಶಿವಸೇನೆ; ಕಾಂಗ್ರೆಸ್ ಅಸಮಾಧಾನ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​​ ಠಾಕ್ರೆ
Follow us
TV9 Web
| Updated By: ganapathi bhat

Updated on:Apr 06, 2022 | 11:15 PM

ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್ ನಗರದ ಹೆಸರನ್ನು ಬದಲಾಯಿಸಲು ಶಿವಸೇನೆ ಒಲವು ತೋರಿದೆ. ಔರಂಗಾಬಾದ್ ಹೆಸರನ್ನು ಮರಾಠ ರಾಜ ಛತ್ರಪತಿ ಸಾಂಭಾಜಿ ಮಹಾರಾಜ್ ಹೆಸರಿಗೆ ಬದಲಿಸಬೇಕು ಎಂದು ಶಿವಸೇನೆ ಹೇಳಿದೆ. ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್, ಅಂಥಾ ಯಾವುದೇ ಹೆಜ್ಜೆಯನ್ನು ವಿರೋಧಿಸುವುದಾಗಿ ತಿಳಿಸಿದೆ.

ಈ ಬೆಳವಣಿಗೆಗಳು ಮಿತ್ರಪಕ್ಷಗಳಾದ ಕಾಂಗ್ರೆಸ್, ಶಿವಸೇನೆ ನಡುವೆ ಬಿರುಕು ಮೂಡಿಸುವ ಅಪಾಯ ತೋರಿದೆ. ಆದರೆ, ಕಾಂಗ್ರೆಸ್ ವಿರೋಧದಿಂದ ಶಿವಸೇನೆಯೊಂದಿಗಿನ ಕಾಂಗ್ರೆಸ್ ಮೈತ್ರಿಗೆ ಧಕ್ಕೆ ಉಂಟಾಗಲಿದೆ ಎಂಬ ಆರೋಪವನ್ನು ಶಿವಸೇನೆಯ ಮುಖವಾಣಿ ‘ಸಾಮ್ನಾ’ ಅಲ್ಲಗಳೆದಿದೆ. ಔರಂಗಾಬಾದ್ ನಗರದ ಹೆಸರು ಬದಲಾವಣೆ ಶಿವಸೇನೆಯ ಬಹುವರ್ಷಗಳ ಕನಸು. ಕಾಂಗ್ರೆಸ್ ವಿರೋಧವೂ ಈ ಹಿಂದಿನಿಂದ ಇತ್ತು. ಅದ್ದರಿಂದ, ಹಳೆಯ ವಿಚಾರಗಳು ಇಂದಿನ ಮೈತ್ರಿ ಸರ್ಕಾರಕ್ಕೆ ತೊಂದರೆಯಾಗುತ್ತದೆ ಎಂದು ಊಹಿಸುವುದು ಮೂರ್ಖ ಚಿಂತನೆಯಾಗುತ್ತದೆ ಎಂದು ಹೇಳಿದೆ.

ನಗರದ ಹೆಸರು ಬದಲಾವಣೆ ವಿಚಾರದಲ್ಲಿ ಶಿವಸೇನೆಯ ಬದ್ಧತೆಯನ್ನು ಪ್ರಶ್ನಿಸಿರುವ ಬಿಜೆಪಿಗೂ ‘ಸಾಮ್ನಾ’ ತಿರುಗೇಟು ನೀಡಿದೆ. ಪಾಕಿಸ್ತಾನದಲ್ಲಿ ದೇವಾಲಯಗಳ ಧ್ವಂಸವಾಗುತ್ತಿದೆ. ನೀವು ಆ ಕೃತ್ಯಗಳತ್ತ ಗಮನಹರಿಸಿ. ರಾಜ್ಯಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಅವಕಾಶ ಹುಡುಕುವುದು ಬೇಡ ಎಂದಿದೆ.

ಔರಂಗಾಬಾದ್ ನಗರ ಹೆಸರು ಬದಲಾವಣೆ ವಿಚಾರದ ಹಿನ್ನೆಲೆ ಮೊಘಲ್ ಚಕ್ರವರ್ತಿ ಔರಂಗಜೇಬ್ ಆ ಪ್ರದೇಶದಲ್ಲಿ ತನ್ನ ಕೊನೆಯ ದಿನಗಳನ್ನು ಕಳೆದಿದ್ದ ಎಂಬ ಕಾರಣದಿಂದ ಆ ನಗರಕ್ಕೆ ಔರಂಗಾಬಾದ್ ಎಂಬ ಹೆಸರು ಬಂದಿದೆ. ಶಿವಸೇನೆ ಹಾಗೂ ಬಿಜೆಪಿ ಒಕ್ಕೂಟವು ಔರಂಗಾಬಾದ್ ನಗರಸಭೆಯಲ್ಲಿ ಎರಡು ವರ್ಷ ಆಡಳಿತ ನಡೆಸಿತ್ತು. 1995ರಲ್ಲಿ ಬಿಜೆಪಿ-ಶಿವಸೇನೆ ಒಕ್ಕೂಟದ ಕಾರ್ಪೊರೇಷನ್, ಔರಂಗಾಬಾದ್ ಹೆಸರನ್ನು ಬದಲಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಶಿವಸೇನೆ ಹಾಗೂ ಬಿಜೆಪಿ ಮೈತ್ರಿಕೂಟ ರಾಜ್ಯದ ಆಡಳಿತ ನಡೆಸುತ್ತಿದ್ದಾಗಲೂ ಔರಂಗಾಬಾದ್ ಹೆಸರು ಬದಲಾವಣೆಯ ಕುರಿತು ಬೆಳವಣಿಗೆಗಳಾಗಿದ್ದವು. ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಮನೋಹರ್ ಜೋಶಿ, ಔರಂಗಾಬಾದ್​ನ್ನು ಸಾಂಭಾಜಿನಗರ್ ಎಂದು ಬದಲಾಯಿಸುವಂತೆ ನಿರ್ಣಯ ಮಂಡಿಸಿದ್ದರು. ಸರ್ಕಾರದ ಈ ನಿರ್ಣಯವನ್ನು ಬಾಂಬೆ ಹೈಕೋರ್ಟ್​ನ ಔರಂಗಾಬಾದ್ ನ್ಯಾಯಪೀಠ ಆಕ್ಷೇಪಿಸಿ, ತಿರಸ್ಕರಿಸಿತ್ತು.

Published On - 2:52 pm, Sun, 3 January 21

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ