ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಸುಧಾರಿಸುವ ಭರವಸೆ ಮೂಡಿದೆ. ಇತ್ತೀಚೆಗೆ ಇಂಡೋನೇಷ್ಯಾದ ಬಾಲಿ ನಗರದಲ್ಲಿ ಜಿ20 ಶೃಂಗಸಭೆ ನಡೆದಿತ್ತು. ಈ ಶೃಂಗಸಭೆಯಲ್ಲಿ ವಿಶ್ವದಾದ್ಯಂತದ ಪ್ರಮುಖ ನಾಯಕರು ಭಾಗವಹಿಸಿದ್ದರು.
ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವುದಾಗಿ ಹೇಳಿದರು. ಈ ಸಮಯದಲ್ಲಿ ನಾವು ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ನಿಕಟ ಆರ್ಥಿಕ ಸಹಕಾರ ಒಪ್ಪಂದದ ಅಂತಿಮಗೊಳಿಸುವಿಕೆಯನ್ನು ಚರ್ಚಿಸಿದ್ದೇವೆ.
ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಆರ್ಥಿಕ ಸಂಬಂಧವನ್ನು ವಿಸ್ತರಿಸುವುದು ಬಹಳ ಮುಖ್ಯವೆಂದು ನಾವು ಪರಿಗಣಿಸುತ್ತೇವೆ ಎಂದು ಅವರು ಹೇಳಿದರು. ಮಾರ್ಚ್‌ನಲ್ಲಿ ಭಾರತಕ್ಕೆ ಭೇಟಿ ನೀಡುವುದಾಗಿ ಆಸ್ಟ್ರೇಲಿಯಾ ಪ್ರಧಾನಿ ತಿಳಿಸಿದ್ದಾರೆ. ನಾವು ಭಾರತಕ್ಕೆ ವ್ಯಾಪಾರ ನಿಯೋಗವನ್ನು ಕರೆದೊಯ್ಯಲಿದ್ದೇವೆ ಮತ್ತು ಇದು ಒಂದು ಪ್ರಮುಖ ಭೇಟಿಯಾಗಿದೆ ಮತ್ತು ನಮ್ಮ ಎರಡು ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸುತ್ತದೆ.
ಮುಂದಿನ ವರ್ಷ ಕ್ವಾಡ್ ಲೀಡರ್ಸ್ ಮೀಟ್‌ಗಾಗಿ ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾಕ್ಕೆ ಭೇಟಿ ನೀಡಲಿದ್ದಾರೆ ಮತ್ತು ನಂತರ ನಾನು ಜಿ 20 ಶೃಂಗಸಭೆಗಾಗಿ ವರ್ಷಾಂತ್ಯದಲ್ಲಿ ಭಾರತಕ್ಕೆ ಮರಳುತ್ತೇನೆ ಎಂದು ಅವರು ಮಾಹಿತಿ ನೀಡಿದರು.
ಮತ್ತಷ್ಟು ಓದಿ:ಮತ್ತಷ್ಟು ಓದಿ:G20 Summit: ಜಿ20 ಶೃಂಗಸಭೆ; ಪ್ರಧಾನಿ ಮೋದಿ ಬಳಿ ಬಂದು ತಬ್ಬಿ, ಕೈ ಕುಲುಕಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್
ಇಂಡೋನೇಷ್ಯಾ ಬುಧವಾರ ಬಾಲಿ ಶೃಂಗಸಭೆಯಲ್ಲಿ ಮುಂಬರುವ ವರ್ಷಕ್ಕೆ ಜಿ 20 ಅಧ್ಯಕ್ಷ ಸ್ಥಾನವನ್ನು ಭಾರತಕ್ಕೆ ಹಸ್ತಾಂತರಿಸಿದೆ. ಇದು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಹೆಮ್ಮೆಯ ವಿಚಾರ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಸಮಾರಂಭದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಅವರು ಬಾಲಿಯಲ್ಲಿ ಎರಡು ದಿನಗಳ ಜಿ 20 ಶೃಂಗಸಭೆಯ ಸಮಾರೋಪದಲ್ಲಿ ಜಿ 20 ಅಧ್ಯಕ್ಷ ಸ್ಥಾನವನ್ನು ಪ್ರಧಾನಿ ಮೋದಿಯವರಿಗೆ ಹಸ್ತಾಂತರಿಸಿದರು.
ಪ್ರತಿಯೊಂದು ದೇಶಗಳ ಪ್ರಯತ್ನದಿಂದ ನಾವು ಜಿ20 ಶೃಂಗಸಭೆಯನ್ನು ಜಾಗತಿಕ ಕಲ್ಯಾಣಕ್ಕೆ ವೇಗವರ್ಧಕವನ್ನಾಗಿ ಮಾಡಬಹುದು ಎಂದು ಪ್ರಧಾನಿ ಮೋದಿ ಹೇಳಿದರು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ