AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Australia elections 2022: ಆಸ್ಟ್ರೇಲಿಯಾ ಚುನಾವಣೆ; ಮಾರಿಸನ್- ಆಲ್ಬನೀಸ್ ನಡುವೆ ಪ್ರಧಾನಿ ಗದ್ದುಗೆಗೆ ತೀವ್ರ ಪೈಪೋಟಿ

Scott Morrison | Anthony Albanese: ಆಸ್ಟ್ರೇಲಿಯಾ ಸಂಯುಕ್ತ ರಾಷ್ಟ್ರಗಳ ಚುನಾವಣೆ ನಡೆಯುತ್ತಿದ್ದು ಇಂದು ಅಂದರೆ ಶನಿವಾರ (ಮೇ.21) ಮತದಾನ ನಡೆಯುತ್ತಿದೆ. ಹೊಸ ಸರ್ಕಾರ ರಚಿಸಲು ಆಡಳಿತಾರೂಢ ಲಿಬರಲ್-ನ್ಯಾಷನಲ್ ಒಕ್ಕೂಟ ಹಾಗೂ ವಿರೋಧ ಪಕ್ಷವಾದ ಲೇಬರ್ ಪಕ್ಷದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

Australia elections 2022: ಆಸ್ಟ್ರೇಲಿಯಾ ಚುನಾವಣೆ; ಮಾರಿಸನ್- ಆಲ್ಬನೀಸ್ ನಡುವೆ ಪ್ರಧಾನಿ ಗದ್ದುಗೆಗೆ ತೀವ್ರ ಪೈಪೋಟಿ
ಸ್ಕಾಟ್ ಮಾರಿಸನ್ (ಎಡ) ಮತ್ತು ಆಂಥೋನಿ ಆಲ್ಬನೀಸ್​ (ಬಲ)
TV9 Web
| Updated By: shivaprasad.hs|

Updated on: May 21, 2022 | 1:59 PM

Share

ಕ್ಯಾನ್‌ಬೆರಾ: ಆಸ್ಟ್ರೇಲಿಯದ ಫೆಡರಲ್ ಚುನಾವಣೆ (Australia’s federal election) ನಡೆಯುತ್ತಿದ್ದು ಇಂದು ಅಂದರೆ ಶನಿವಾರ (ಮೇ.21) ಮತದಾನ ನಡೆಯುತ್ತಿದೆ. ಹೊಸ ಸರ್ಕಾರ ರಚಿಸಲು ಆಡಳಿತಾರೂಢ ಲಿಬರಲ್-ನ್ಯಾಷನಲ್ ಒಕ್ಕೂಟ ಹಾಗೂ ವಿರೋಧ ಪಕ್ಷವಾದ ಲೇಬರ್ ಪಕ್ಷದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆಸ್ಟ್ರೇಲಿಯನ್ ಚುನಾವಣಾ ಆಯೋಗದ (AEC) ಪ್ರಕಾರ ದೇಶಾದ್ಯಂತ 7,000 ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ 80 ಲಕ್ಷಕ್ಕೂ ಹೆಚ್ಚು ಆಸ್ಟ್ರೇಲಿಯನ್ನರು ತಮ್ಮ ಮತ ಚಲಾಯಿಸುವ ನಿರೀಕ್ಷೆಯಿದೆ. ದಾಖಲೆ ಸಂಖ್ಯೆಯಲ್ಲಿ ಮತದಾರರು ಈಗಾಗಲೇ ತಮ್ಮ ಮತಗಳನ್ನು ಚಲಾಯಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಶನಿವಾರ ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಬಹುಮತ ಹೊಂದಿರುವ ಸರ್ಕಾರವನ್ನು ರಚಿಸಲು ಸಂಸತ್ತಿನ ಕೆಳಮನೆಯಾಗಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನ 151 ಸ್ಥಾನಗಳಲ್ಲಿ ಕನಿಷ್ಠ 76 ಸ್ಥಾನಗಳನ್ನು ಗೆಲ್ಲಬೇಕಿದೆ.

ಶುಕ್ರವಾರ ರಾತ್ರಿ ಪ್ರಕಟವಾದ ಆಸ್ಟ್ರೇಲಿಯಾದ ಸಮೀಕ್ಷೆ ಪ್ರಕಾರ, ಲೇಬರ್ ಪಕ್ಷ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ (Scott Morrison) ಮತ್ತು ಲೇಬರ್ ನಾಯಕ ಆಂಥೋನಿ ಅಲ್ಬನೀಸ್ (Anthony Albanese) ಅವರು ವೈಯಕ್ತಿಕ ಹಣಾಹಣಿಯಲ್ಲಿ ಟೈ ಮಾಡಿಕೊಂಡಿರುವುದಾಗಿ ಸಮೀಕ್ಷೆ ತಿಳಿಸಿದೆ.

ಶೇ. 36 ರಷ್ಟು ಮತದಾರರು ಲೇಬರ್‌ ಪಕ್ಷಕ್ಕೆ ಮತ್ತು ಶೇ.35 ಪ್ರತಿಶತದಷ್ಟು ಲಿಬರಲ್​ ಒಕ್ಕೂಟಕ್ಕೆ ಮತ ಹಾಕಲು ಉದ್ದೇಶಿಸಿದ್ದಾರೆ ಎಂದು ಸಮೀಕ್ಷೆಯು ಹೇಳಿದೆ. ಲೇಬರ್ ಅಥವಾ ಲಿಬರಲ್​ ಒಕ್ಕೂಟವು ಸ್ಪಷ್ಟ ಬಹುಮತವನ್ನು ರಚಿಸಲು ಅಗತ್ಯವಾದ ಸ್ಥಾನಗಳನ್ನು ಗೆಲ್ಲದಿದ್ದರೆ ಚುನಾವಣಾ ಫಲಿತಾಂಶವನ್ನು ‘ಹಂಗ್ ಪಾರ್ಲಿಮೆಂಟ್’ ಎಂದು ಘೋಷಿಸಲಾಗುತ್ತದೆ.

ಇದನ್ನೂ ಓದಿ
Image
Viral Video: ಛಾಯಾಗ್ರಾಹಕರ ಮುಂದೆ ಕಿರುಚುತ್ತಾ ಅರೆ ಬೆತ್ತಲೆಯಾದ ಮಹಿಳೆ: ಮುಂದೆ ಆಗಿದ್ದೇನು?
Image
Ram Nath Kovind: ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸುಧಾರಣೆಗೆ ಕರೆ ನೀಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್
Image
Viral Video: ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟ ಪಾಕ್ ಯುವತಿಯ ಪೋಲ್ ಡಾನ್ಸ್
Image
PM Modi: ವಿದೇಶ ಪ್ರವಾಸಕ್ಕೆ ತೆರಳುವಾಗ ರಾತ್ರಿ ಪ್ರಯಾಣಕ್ಕೆ ಆದ್ಯತೆ ನೀಡುವ ಪ್ರಧಾನಿ ಮೋದಿ; ಕಾರಣವೇನು? 

ಆ ಸಂದರ್ಭದಲ್ಲಿ, ಮಾರಿಸನ್ ಮತ್ತು ಅಲ್ಬನೀಸ್ ಇಬ್ಬರೂ 2010ರಲ್ಲಿ ಲೇಬರ್ ಪಕ್ಷವು ಮಾಡಿದಂತೆ ಮೈನಾರಿಟಿ ಗವರ್ನಮೆಂಟ್​ ರಚಿಸಲು ಬೆಂಬಲವನ್ನು ಕೋರಿ ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಸಂಸದರೊಂದಿಗೆ ಮಾತುಕತೆಗಳನ್ನು ನಡೆಸುತ್ತಾರೆ.

ಆಸ್ಟ್ರೇಲಿಯಾದಲ್ಲಿ 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಆಸ್ಟ್ರೇಲಿಯನ್ನರು ಚುನಾವಣೆಯಲ್ಲಿ ಮತ ಚಲಾಯಿಸುವುದು ಕಡ್ಡಾಯವಾಗಿದೆ. AEC ಪ್ರಕಾರ 17.2 ದಶಲಕ್ಷಕ್ಕೂ ಹೆಚ್ಚು ಜನರು, 96 ಪ್ರತಿಶತ ಅರ್ಹ ಮತದಾರರು ಈ ವರ್ಷ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಆರ್ಥಿಕತೆ, ನಿರುದ್ಯೋಗ, ಹವಾಮಾನ ಬದಲಾವಣೆ, ಆರೋಗ್ಯ ಮತ್ತು ಶಿಕ್ಷಣ ಮೊದಲಾದ ವಿಚಾರಗಳು ಹೆಚ್ಚಾಗಿ ಪ್ರಸ್ತಾಪವಾಗಿವೆ. 2018ರಿಂದ ಆಸ್ಟ್ರೇಲಿಯಾ ಪ್ರಧಾನಿಯಾಗಿರುವ ಮಾರಿಸನ್​ ದೇಶವನ್ನು ಹವಾಮಾನ ವೈಪರೀತ್ಯ, ಕೊವಿಡ್ ಸಾಂಕ್ರಾಮಿಕದಂತಹ ಕಷ್ಟಕಾಲದಲ್ಲಿ ಮುನ್ನಡೆಸಿದಿದ್ದಾರೆ. ಮೊದಲಿಗೆ ಅವರಿಗೆ ಮೆಚ್ಚುಗೆ ಸಿಕ್ಕಿತ್ತಾದರೂ ನಂತರದಲ್ಲಿ ದೂರದೃಷ್ಟಿಯಿಲ್ಲದ ಯೋಜನೆ ರೂಪಿಸಿದ್ದಾರೆಂದು ತೀವ್ರವಾಗಿ ಟೀಕೆಗೆ ತುತ್ತಾಗಿದ್ದಾರೆ. ಅದಾಗ್ಯೂ 2007ರ ನಂತರ ಅಧಿಕಾರಾವಧಿ ಪೂರ್ಣಗೊಳಿಸಿದ ಮೊದಲ ಪ್ರಧಾನಿಯಾಗಿದ್ದಾರೆ ಮಾರಿಸನ್. ವಿರೋಧ ಪಕ್ಷದ ಆಲ್ಬನೀಸ್ ದೀರ್ಘಾವಧಿಯಿಂದ ರಾಜಕಾರಣದಲ್ಲಿದ್ದು ಬದಲಾವಣೆಯ ಭರವಸೆ ನೀಡಿದ್ದಾರೆ. ತೀವ್ರ ಪೈಪೋಟಿ ಇರುವ ಕಾರಣ, ಆಸ್ಟ್ರೇಲಿಯಾದ ಚುನಾವಣೆ ಕುತೂಹಲ ಮೂಡಿಸಿದೆ.

ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!