
ಡೆಹ್ರಾಡೂನ್, ಅಕ್ಟೋಬರ್ 17: ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರಿನಾಥ ಬಳಿಯ ಕುಬೇರ್ ಭಂಡಾರ್ ಹಿಮನದಿಯಲ್ಲಿ ಭಾರಿ ಹಿಮಪಾತ (Avalanche) ಸಂಭವಿಸಿದೆ. ಇದು ಕಾಂಚನಜುಂಗಾ ನದಿಯ ಮೇಲ್ಭಾಗವನ್ನು ತಲುಪಿದೆ. ಆದರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಈ ಬಗ್ಗೆ ವಿವರಗಳನ್ನು ನೀಡಿರುವ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದ ಕಿಶೋರ್ ಜೋಶಿ, ಬದರಿನಾಥ ರಾಷ್ಟ್ರೀಯ ಹೆದ್ದಾರಿಯಿಂದ ನೂರಾರು ಮೀಟರ್ ಎತ್ತರದಲ್ಲಿ ಹಿಮಪಾತ ಸಂಭವಿಸಿದೆ ಎಂದು ವರದಿಯಾಗಿದೆ. ಇದು ಈ ಪ್ರದೇಶದಲ್ಲಿ ಬಹಳ ಸಾಮಾನ್ಯ ನೈಸರ್ಗಿಕ ವಿದ್ಯಮಾನವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡದ ಹಿಮಪಾತ; ಕೊನೆಯ ಶವ ಪತ್ತೆಯಾಗುವ ಮೂಲಕ ಸಾವಿನ ಸಂಖ್ಯೆ 8ಕ್ಕೆ ಏರಿಕೆ
ಕುಬೇರ್ ಭಂಡಾರ್ ಹಿಮನದಿಯ ಒಂದು ಭಾಗವು ದೊಡ್ಡ ಶಬ್ದದೊಂದಿಗೆ ಕುಸಿದಿದೆ ಎಂದು ಸ್ಥಳೀಯರು ತಿಳಸಿದ್ದಾರೆ. ಕಾಂಚನಜುಂಗಾದ ಬಲ ಮತ್ತು ಎಡ ಬದಿಗಳಲ್ಲಿ ಹಿಮನದಿ ಕರಗುವಿಕೆಯ ಘಟನೆಗಳು ಆಗಾಗ ಸಂಭವಿಸುತ್ತವೆ. ಪ್ರವಾಸಿಗರು ಸಹ ಅವುಗಳನ್ನು ವೀಕ್ಷಿಸುತ್ತಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:02 pm, Fri, 17 October 25