ಬ್ಯಾರಿಕೇಡ್​ನಿಂದಾಗಿ ಆಸ್ಪತ್ರೆಗೆ ಕರೆತರುವಲ್ಲಿ ವಿಳಂಬ, ಅಯೋಧ್ಯೆಯ ಬಿಜೆಪಿ ನಾಯಕ ಸಾವು

ಅಯೋಧ್ಯೆಯ ಸ್ಥಳೀಯ ಬಿಜೆಪಿ ನಾಯಕ . ಬಿ.ಡಿ. ದ್ವಿವೇದಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನಿಧನರಾದರು. ಕುಟುಂಬದ ಪ್ರಕಾರ, ಹಲವಾರು ಬ್ಯಾರಿಕೇಡ್‌ಗಳಿಂದಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾಕಷ್ಟು ವಿಳಂಬವಾಯಿತು, ಇದರಿಂದಾಗಿ ಸಕಾಲಿಕ ಚಿಕಿತ್ಸೆ ದೊರೆಯದ ಕಾರಣ ಅವರು ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ..ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ವಿವಿಧ ಸ್ಥಳಗಳಲ್ಲಿ ಆಂಬ್ಯುಲೆನ್ಸ್‌ಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ.

ಬ್ಯಾರಿಕೇಡ್​ನಿಂದಾಗಿ ಆಸ್ಪತ್ರೆಗೆ ಕರೆತರುವಲ್ಲಿ ವಿಳಂಬ, ಅಯೋಧ್ಯೆಯ ಬಿಜೆಪಿ ನಾಯಕ ಸಾವು
ಬ್ಯಾರಿಕೇಡ್​ಗಳು
Image Credit source: Indiatimes

Updated on: Feb 24, 2025 | 10:55 AM

ಅಯೋಧ್ಯೆ, ಫೆಬ್ರವರಿ 24: ಅಯೋಧ್ಯೆಯ ಸ್ಥಳೀಯ ಬಿಜೆಪಿ ನಾಯಕ ಬಿ.ಡಿ. ದ್ವಿವೇದಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನಿಧನರಾದರು. ಕುಟುಂಬದ ಪ್ರಕಾರ, ಹಲವಾರು ಬ್ಯಾರಿಕೇಡ್‌ಗಳಿಂದಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾಕಷ್ಟು ವಿಳಂಬವಾಯಿತು, ಇದರಿಂದಾಗಿ ಸಕಾಲಿಕ ಚಿಕಿತ್ಸೆ ದೊರೆಯದ ಕಾರಣ ಅವರು ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ.

ಬಿಜೆಪಿ ನಾಯಕನ ಮಗ ರಾಹುಲ್ ದ್ವಿವೇದಿ, ‘ನಾವು ಬ್ಯಾರಿಕೇಡ್‌ಗಳನ್ನು ದಾಟಲು ಬಹಳಷ್ಟು ತೊಂದರೆಗಳನ್ನು ಎದುರಿಸಿದೆವು’ ಎಂದು ಹೇಳಿದರು. ನಾವು ಆಸ್ಪತ್ರೆ ತಲುಪಲು ಎರಡು ಗಂಟೆ ಬೇಕಾಯಿತು. ತಲುಪಲು ಒಂದರಿಂದ ಎರಡು ಗಂಟೆಗಳು ಬೇಕಾಗುತ್ತಿದ್ದರಿಂದ ನಾವು ಆಂಬ್ಯುಲೆನ್ಸ್‌ಗೆ ಕರೆ ಮಾಡುವ ಸ್ಥಿತಿಯಲ್ಲಿರಲಿಲ್ಲ.

ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ವಿವಿಧ ಸ್ಥಳಗಳಲ್ಲಿ ಆಂಬ್ಯುಲೆನ್ಸ್‌ಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಯೋಧ್ಯೆಯ ಮೇಯರ್ ಗಿರೀಶ್ ಪತಿ ತ್ರಿಪಾಠಿ ಹೇಳಿದ್ದಾರೆ. ಕುಟುಂಬ ಮತ್ತು ಸಂಬಂಧಿಕರ ಪ್ರಕಾರ, 62 ವರ್ಷದ  ಬಿಡಿ. ದ್ವಿವೇದಿ ಅವರಿಗೆ ಶನಿವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ಎದೆ ನೋವು ಮತ್ತು ಅಸ್ವಸ್ಥತೆ ಅನುಭವವಾಯಿತು.

ಅವರ ಪತ್ನಿ, ಮಗ ಮತ್ತು ಚಾಲಕ ಅವರನ್ನು ಸ್ಥಳೀಯ ಶ್ರೀರಾಮ್ ಆಸ್ಪತ್ರೆಗೆ ಕರೆದೊಯ್ಯಲು ಹೊರಟರು ಆದರೆ ಅವರ ವಾಹನವನ್ನು ದೇವಕಳಿಯಲ್ಲಿ ನಿಲ್ಲಿಸಲಾಯಿತು. ಕುಟುಂಬ ಸದಸ್ಯರು ಅಲ್ಲಿದ್ದ ಇನ್ಸ್‌ಪೆಕ್ಟರ್ ಮತ್ತು ಪೊಲೀಸ್ ಅಧಿಕಾರಿಗಳನ್ನು ಬ್ಯಾರಿಕೇಡ್​ ತೆರೆಯುವಂತೆ ವಿನಂತಿಸಿದರು.

ಮತ್ತಷ್ಟು ಓದಿ: ರಸ್ತೆ ಬದಿ ಕಾರು ಪಾರ್ಕ್ ಮಾಡಿದ್ದಾತ ಇಡೀ ದಿನವಾದರೂ ಇಳಿಯಲೇ ಇಲ್ಲ: ಹತ್ತಿರ ಹೋಗಿ ನೋಡಿದವರಿಗೆ ಶಾಕ್

ಆದರೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಸುಮಾರು ಒಂದು ಗಂಟೆ 15 ನಿಮಿಷಗಳ ನಂತರ ಬ್ಯಾರಿಕೇಡ್​ಗಳನ್ನು ತೆರೆಯಲಾಯಿತು. ಆದರೆ ಮುಂದೆ ಹಲವಾರು ಬ್ಯಾರಿಕೇಡ್‌ಗಳಿಂದಾಗಿ ವಾಹನವು ಮುಂದೆ ಚಲಿಸಲು ಸಾಧ್ಯವಾಗಲಿಲ್ಲ. ಕುಟುಂಬವು ರಾಮ್ ಪಥ್ ಮೂಲಕ ಉದಯ್ ಚೌಕ್ ತಲುಪಿತು, ಆದರೆ ಅವರನ್ನು ಅಲ್ಲಿಯೂ ತಡೆಯಲಾಯಿತು.

ಇದಾದ ನಂತರ ಕುಟುಂಬವು ಫೈಜಾಬಾದ್‌ನ ಜಿಲ್ಲಾ ಆಸ್ಪತ್ರೆಗೆ ಹೋಗುವುದಾಗಿ ನಿರ್ಧರಿಸಿತು ಆದರೆ ಅಷ್ಟರಲ್ಲಿ ಎರಡು ಗಂಟೆಗಳು ಕಳೆದಿದ್ದವು ಮತ್ತು  ದ್ವಿವೇದಿ ದಾರಿಯಲ್ಲಿ ನಿಧನರಾದರು. ಅಯೋಧ್ಯೆ ಬಿಜೆಪಿ ಮಾಧ್ಯಮ ಉಸ್ತುವಾರಿ ದಿವಾಕರ್ ಸಿಂಗ್, ಡಾ. ದ್ವಿವೇದಿ ಅವರ ನಿಧನವನ್ನು ‘ಅತ್ಯಂತ ದುಃಖಕರ’ ಎಂದು ಕರೆದಿದ್ದಾರೆ. ಡಾ. ದ್ವಿವೇದಿ ಅವರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿದ್ದರೆ, ಕನಿಷ್ಠ ಪಕ್ಷ ತಾವು ಪ್ರಯತ್ನಗಳನ್ನು ಮಾಡಿದ್ದೆವು ಎಂದು ಕುಟುಂಬಕ್ಕೆ ತೃಪ್ತಿಯಾಗುತ್ತಿತ್ತು ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:54 am, Mon, 24 February 25