AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮಮಂದಿರ ರಮಾನಂದ ಪಂಥಕ್ಕೆ ಸೇರಿದ್ದು, ಸನ್ಯಾಸಿಗಳು, ಶೈವರು ಅಥವಾ ಶಾಕ್ತರಿಗಲ್ಲ: ಚಂಪತ್ ರಾಯ್

ಹೊಸ ದೇವಸ್ಥಾನದಲ್ಲಿ ಪೂಜಾ ವಿಧಾನದ ಬಗ್ಗೆ ಕೇಳಿದಾಗ, ಇದು ರಾಮಮಂದಿರವಾಗಿರುವುದರಿಂದ, ರಮಾನಂದರ ಸಂಪ್ರದಾಯವನ್ನು ಅನುಸರಿಸಲಾಗುವುದು. ದೇವಾಲಯವು ರಮಾನಂದ ಪಂಥಕ್ಕೆ ಸೇರಿದ್ದು, ಸನ್ಯಾಸಿಗಳಿಗೋ, ಶೈವ ಅಥವಾ ಶಾಕ್ತರಿಗೆ ಸೇರಿದ್ದಲ್ಲ ಎಂದುಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.

ರಾಮಮಂದಿರ ರಮಾನಂದ ಪಂಥಕ್ಕೆ ಸೇರಿದ್ದು, ಸನ್ಯಾಸಿಗಳು, ಶೈವರು ಅಥವಾ ಶಾಕ್ತರಿಗಲ್ಲ: ಚಂಪತ್ ರಾಯ್
ಚಂಪತ್ ರಾಯ್
ರಶ್ಮಿ ಕಲ್ಲಕಟ್ಟ
|

Updated on: Jan 11, 2024 | 6:39 PM

Share

ದೆಹಲಿ ಜನವರಿ 11: ಅಯೋಧ್ಯೆಯಲ್ಲಿನ (Ayodhya) ರಾಮಮಂದಿರ (Rammandir) ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಯಾವುದೇ ಆತುರವಿಲ್ಲ, ಏಕೆಂದರೆ ಅಡಿಪಾಯವನ್ನು ಮಾತ್ರ ನಿರ್ಮಿಸಲು 18 ತಿಂಗಳು ತೆಗೆದುಕೊಂಡಿತು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ (Champat Rai) ಹೇಳಿದ್ದಾರೆ. ಅಮರ್ ಉಜಾಲಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಯ್, ಈ ಮೊದಲು, ಇದನ್ನು 18 ತಿಂಗಳಲ್ಲಿ ನಿರ್ಮಿಸಲಾಗುವುದು ಎಂಬ ಕಲ್ಪನೆ ಇತ್ತು. ಆದ್ದರಿಂದ, ಅಡಿಪಾಯವನ್ನು 18 ತಿಂಗಳಲ್ಲಿ ನಿರ್ಮಿಸಬಹುದು. ಇನ್ನು ಮೂರು ವರ್ಷಗಳಲ್ಲಿ ನಿರ್ಮಾಣ ಆಗಲಿದೆ ಎಂಬ ಆಲೋಚನೆ ಇತ್ತು. ನಾವು ಜುಲೈ 2020 ರಿಂದ ಪ್ರಾರಂಭಿಸಿದರೆ, 2023 ಕ್ಕೆ ಮೂರುವರೆ ವರ್ಷಗಳು ಕಳೆದಿವೆ. ಈಗ, ಯಾರಾದರೂ ಅದನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕೆಂದು ನಿರ್ಧರಿಸಿದರೆ, ಒಂದು ವರ್ಷದ ನಂತರ, ಅವರು ಇನ್ನೂ ಅಪೂರ್ಣ ಎಂದು ಹೇಳಬೇಕಾಗುತ್ತದೆ ಎಂದಿದ್ದಾರೆ.

ಹೊಸ ದೇವಸ್ಥಾನದಲ್ಲಿ ಪೂಜಾ ವಿಧಾನದ ಬಗ್ಗೆ ಕೇಳಿದಾಗ, ಇದು ರಾಮಮಂದಿರವಾಗಿರುವುದರಿಂದ, ರಮಾನಂದರ ಸಂಪ್ರದಾಯವನ್ನು ಅನುಸರಿಸಲಾಗುವುದು ಎಂದು ರಾಯ್ ಹೇಳಿದ್ದಾರೆ. ದೇವಾಲಯವು ರಮಾನಂದ ಪಂಥಕ್ಕೆ ಸೇರಿದ್ದು, ಸನ್ಯಾಸಿಗಳಿಗೋ, ಶೈವ ಅಥವಾ ಶಾಕ್ತರಿಗೆ ಸೇರಿದ್ದಲ್ಲ ಎಂದು ಅವರು ಹೇಳಿದ್ದಾರೆ.

125 ಸಂತರು, ಸಂಪ್ರದಾಯಗಳ ಮುಖ್ಯಸ್ಥರು, ಎಲ್ಲಾ 13 ಅಖಾಡಗಳು ಮತ್ತು ಎಲ್ಲಾ ಆರು ದರ್ಶನಗಳ ಮಹಾಪುರುಷ-ಧರ್ಮಾಚಾರ್ಯರು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ರಾಯ್ ಹೇಳಿದ್ದಾರೆ.

ಸಿದ್ಧತೆಗಳಿಗೆ ಸಂಬಂಧಿಸಿದ ದೊಡ್ಡ ನಿರ್ಧಾರಗಳು ಬಾಕಿ ಉಳಿದಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಯ್, ಯಾವುದೇ ನಿರ್ಧಾರ ಬಾಕಿ ಇಲ್ಲ. ಎಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.ದೇವಸ್ಥಾನದ ನೆಲ ಮಹಡಿ ಸಿದ್ಧವಾಗಿದೆ. ನೆಲಮಂಗಲದ ಗರ್ಭಗುಡಿ ಸಿದ್ಧವಾಗಿದೆ. ಅದರಲ್ಲಿ ಮಾಡಲು ಏನೂ ಇಲ್ಲ. ಪ್ರತಿಷ್ಠಾಪಿಸಬೇಕಾದ ದೇವರ ಮೂರ್ತಿ ಸಿದ್ಧವಾಗಿದೆ. ಅಲಂಕಾರ ಮಾಡುವುದು ಹೇಗೆ ಎಂಬ ಕೆಲಸ ನಡೆಯುತ್ತಿದೆ. ಪ್ರಾಣ ಪ್ರತಿಷ್ಠಾ ಆಚರಣೆಯು ಒಂದು ವಾರದವರೆಗೆ ಇರುತ್ತದೆ. ಜನವರಿ 16 ರಿಂದ ಆರಂಭವಾಗಲಿದೆ. ಅದನ್ನು ಮಾಡಬೇಕಾದ ಬ್ರಾಹ್ಮಣರ ಗುಂಪು ರಚನೆಯಾಗಿದೆ. ಕುಳಿತಲ್ಲೇ ಪೂಜೆ ಸಲ್ಲಿಸುವ ಸ್ಥಳ ಸಿದ್ಧವಾಗುತ್ತಿದೆ. ಬ್ರಾಹ್ಮಣರು ಬಂದರೆ ಎಲ್ಲಿ ಉಳಿಯುತ್ತಾರೆ, ಅವರಿಗಾಗಿ ವಸತಿ ಸೌಕರ್ಯ ಮಾಡಲಾಗಿದ. ಅವರಿಗೆ ಅಡುಗೆ ಮಾಡಿ ಬಡಿಸುವವರು ಯಾರು?ಇದಕ್ಕೆ ಸಿದ್ಧತೆ ನಡೆದಿದೆ. ದೇವಾಲಯವನ್ನು ಹೂವಿನಿಂದ ಅಲಂಕರಿಸಬೇಕು ಅದೂ ಆಗಿದೆ. ವ್ಯವಸ್ಥೆಗಳು ಬಹುತೇಕ ಪೂರ್ಣಗೊಂಡಿವೆ ಎಂದಿದ್ದಾರೆ.

ಇದನ್ನೂ ಓದಿ: ರಾಮಮಂದಿರ ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಿದ ಶಂಕರಾಚಾರ್ಯರ 4 ಪೀಠಗಳು

ಜನವರಿ 17 ರಂದು ಮೆರವಣಿಗೆಯ ಬಗ್ಗೆ ಚರ್ಚೆ ಇದೆಯೇ? ಎಂದು ಕೇಳಿದಾಗ, 17ರಂದು ಮೆರವಣಿಗೆ ಇಲ್ಲ. ಯಾವಾಗ ಏನಾಗುತ್ತದೆ ಎಂಬುದನ್ನು ನಾವು ನಿರ್ಧರಿಸುತ್ತೇವೆ. 16ರಿಂದ ಪೂಜೆ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ. ದೇವಸ್ಥಾನದ ಅರ್ಚಕ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ರಾಯ್, ಪ್ರಸ್ತುತ ಸತ್ಯೇಂದ್ರ ದಾಸ್ಜಿಯವರು ಪ್ರಧಾನ ಅರ್ಚಕರು. ಅವರಿಗೆ 86 ವರ್ಷ. 50 ವರ್ಷಗಳಿಂದ ಇಲ್ಲಿ ಅರ್ಚಕರಾಗಿದ್ದಾರೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು