AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮಮಂದಿರ ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಿದ ಶಂಕರಾಚಾರ್ಯರ 4 ಪೀಠಗಳು

ಅಲ್ಲಿಗೆ ಹೋಗದೇ ಇರುವುದು ಯಾವುದೇ ದ್ವೇಷ ಅಥವಾ ಸಿಟ್ಟಿನಿಂದಲ್ಲ. ಆದರೆ ಶಾಸ್ತ್ರ-ವಿಧಿಯನ್ನು (ಶಾಸ್ತ್ರಗಳ ಆಚರಣೆಗಳು) ಅನುಸರಿಸುವುದು ಮತ್ತು ಅವುಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವುದು ಶಂಕರಾಚಾರ್ಯರ ಕರ್ತವ್ಯವಾಗಿದೆ. ಇಲ್ಲಿ ಶಾಸ್ತ್ರ-ವಿಧಿಯನ್ನು ಕಡೆಗಣಿಸಲಾಗುತ್ತಿದೆ. ದೇವಾಲಯವು ಇನ್ನೂ ಅಪೂರ್ಣವಾಗಿರುವಾಗ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಮಾಡುತ್ತಿರುವುದು ದೊಡ್ಡ  ಸಮಸ್ಯೆ.

ರಾಮಮಂದಿರ ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಿದ ಶಂಕರಾಚಾರ್ಯರ 4 ಪೀಠಗಳು
ಅವಿಮುಕ್ತೇಶ್ವರಾನಂದ ಸರಸ್ವತಿ- ನಿಶ್ಚಲಾನಂದ ಸರಸ್ವತಿ
ರಶ್ಮಿ ಕಲ್ಲಕಟ್ಟ
|

Updated on: Jan 11, 2024 | 5:35 PM

Share

ಲಕ್ನೋ ಜನವರಿ 11:  ಜನವರಿ 22 ರಂದು ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ (Ram mandir) ನಡೆಯಲಿರುವ  ರಾಮಲಲ್ಲಾ  ಪ್ರಾಣ ಪ್ರತಿಷ್ಠಾ  (Consecration of the idol)ಕಾರ್ಯಕ್ರಮ ಹಾಜರಾಗಲು ಪುರಿಯ ಗೋವರ್ಧನ ಮಠದ ಮಠಾಧೀಶರು ನಿರಾಕರಿಸಿದ ದಿನಗಳ ನಂತರ, ಉತ್ತರಾಖಂಡದ ಜ್ಯೋತಿರ್ ಮಠದ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಶಂಕರಾಚಾರ್ಯರ 4 ಪೀಠಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ. ವಿಶೇಷವಾಗಿ ದೇವಾಲಯದ ನಿರ್ಮಾಣವು ಅಪೂರ್ಣವಾಗಿರುವುದರಿಂದ ಈ ಸಮಾರಂಭವನ್ನು “ಶಾಸ್ತ್ರಗಳ ವಿರುದ್ಧ” ಅಥವಾ ಪವಿತ್ರ ಹಿಂದೂ ಧರ್ಮಗ್ರಂಥಗಳಿಗೆ ವಿರುದ್ಧವಾಗಿ ನಡೆಸಲಾಗುತ್ತಿದೆ ಎಂದು ಅವರು ಮಂಗಳವಾರ ತಮ್ಮ ಅಧಿಕೃತ ಹ್ಯಾಂಡಲ್‌ನಲ್ಲಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಹೇಳಿದ್ದಾರೆ.

ಶಂಕರಾಚಾರ್ಯರು 8ನೇ ಶತಮಾನದ ಹಿಂದೂ ಸಂತ ಆದಿ ಶಂಕರರಿಂದ ಸ್ಥಾಪಿಸಲ್ಪಟ್ಟ ಹಿಂದೂ ಧರ್ಮದ ಅದ್ವೈತ ವೇದಾಂತ ಸಂಪ್ರದಾಯದ ಭಾಗವಾಗಿರುವ ನಾಲ್ಕು ಮಠಗಳ ಮಠಾಧೀಶರಾಗಿದ್ದಾರೆ. ಜ್ಯೋತಿರ್ ಮಠ (ಜೋಶಿಮಠ) ಮತ್ತು ಗೋವರ್ಧನ ಮಠ, ಶೃಂಗೇರಿ ಶಾರದ ಪೀಠ (ಶೃಂಗೇರಿ, ಕರ್ನಾಟಕ), ಮತ್ತು ದ್ವಾರಕಾ ಶಾರದ ಪೀಠ (ದ್ವಾರಕಾ, ಗುಜರಾತ್) ಇವೇ ನಾಲ್ಕು ಮಠಗಳು. ಜ್ಯೋತಿರ್ ಮಠದ 46 ನೇ ಶಂಕರಾಚಾರ್ಯರಾದ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ತಮ್ಮ ವಿಡಿಯೊದಲ್ಲಿ, ನಾಲ್ಕು ಶಂಕರಾಚಾರ್ಯರ ಪೀಠದ ನಿರ್ಧಾರವನ್ನು “ಮೋದಿ ವಿರೋಧಿ” ಎಂದು ಅರ್ಥೈಸಬಾರದು. ನಾವು “ಶಾಸ್ತ್ರ ವಿರೋಧಿ” ಆಗಲು ಬಯಸುವುದಿಲ್ಲ ಎಂದಿದ್ದಾರೆ.

ಹೋಗದಿರಲು ಕಾರಣವೇನು?

ಅಲ್ಲಿಗೆ ಹೋಗದೇ ಇರುವುದು ಯಾವುದೇ ದ್ವೇಷ ಅಥವಾ ಸಿಟ್ಟಿನಿಂದಲ್ಲ. ಆದರೆ ಶಾಸ್ತ್ರ-ವಿಧಿಯನ್ನು (ಶಾಸ್ತ್ರಗಳ ಆಚರಣೆಗಳು) ಅನುಸರಿಸುವುದು ಮತ್ತು ಅವುಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವುದು ಶಂಕರಾಚಾರ್ಯರ ಕರ್ತವ್ಯವಾಗಿದೆ. ಇಲ್ಲಿ ಶಾಸ್ತ್ರ-ವಿಧಿಯನ್ನು ಕಡೆಗಣಿಸಲಾಗುತ್ತಿದೆ. ದೇವಾಲಯವು ಇನ್ನೂ ಅಪೂರ್ಣವಾಗಿರುವಾಗ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಮಾಡುತ್ತಿರುವುದು ದೊಡ್ಡ  ಸಮಸ್ಯೆ. ನಾವು ಇದನ್ನು ಹೇಳಿದರೆ, ನಮ್ಮನ್ನು ‘ಮೋದಿ ವಿರೋಧಿ’ ಎಂದು ಕರೆಯಲಾಗುತ್ತದೆ. ಇಲ್ಲಿ ಮೋದಿ ವಿರೋಧಿ ಏನಿದೆ ಎಂದು ಅವರು ಕೇಳಿದ್ದಾರೆ.

ಪುರಿಯ ಗೋವರ್ಧನ ಮಠದ ಮುಖ್ಯಸ್ಥ ನಿಶ್ಚಲಾನಂದ ಸರಸ್ವತಿ ಅವರು “ತಮ್ಮ ಸ್ಥಾನದ ಘನತೆಯ ಬಗ್ಗೆ ಜಾಗೃತರಾಗಿರುವ ಕಾರಣ” ಸಮಾರಂಭದಿಂದ ಹೊರಗುಳಿಯುವುದಾಗಿ ಘೋಷಿಸಿದ ಕೆಲವು ದಿನಗಳ ನಂತರ ಈ ಹೇಳಿಕೆಗಳು ಬಂದಿವೆ. ನಾನು ಅಲ್ಲಿ ಹೋಗಿ ಮಾಡುವುದೇನಿದೆ? ಮೋದಿಜಿ ಉದ್ಘಾಟಿಸಿ ಮೂರ್ತಿಗೆ ನಮಸ್ಕರಿಸುವಾಗ ನಾನು ಅಲ್ಲಿ ನಿಂತು ಚಪ್ಪಾಳೆ ತಟ್ಟಲೇ? ನನಗೆ ಸ್ಥಾನ ಬೇಡ. ನಾನು ಈಗಾಗಲೇ ದೊಡ್ಡ ಸ್ಥಾನ ಹೊಂದಿದ್ದೇನೆ. ನನಗೆ ಕ್ರೆಡಿಟ್ ಅಗತ್ಯವಿಲ್ಲ. ಆದರೆ ಶಂಕರಾಚಾರ್ಯರು ಪ್ರಾಣ ಪತ್ರಿಷ್ಠೆಗೆ ಬಂದು ಏನು ಮಾಡಬೇಕಿದೆ ಎಂದು ಅವರು ಕೇಳಿದ್ದಾರೆ. ಈ ವಿಡಿಯೊವನ್ನು ನಾಗಾಲ್ಯಾಂಡ್ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಮೋದಿ ಅವರು ಧಾರ್ಮಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರೂ, ನಮಗೆ ಅಯೋಧ್ಯೆಯ ಬಗ್ಗೆ ಯಾವುದೇ ದ್ವೇಷವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದು ಅಹಂಕಾರವಲ್ಲ. ಆದರೆ ನನ್ನ ಸ್ಥಾನದ ಘನತೆಯ ಬಗ್ಗೆ ನನಗೆ ಅರಿವಿದೆ, ಅದಕ್ಕಾಗಿಯೇ ನಾನು ಹೋಗುತ್ತಿಲ್ಲ. ನಾನು ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಹೋಗಬಹುದು ಎಂದು ಹೇಳುವ ಆಹ್ವಾನವನ್ನು ನಾನು ಸ್ವೀಕರಿಸಿದ್ದೇನೆ. ನಾನು ಒಬ್ಬ ವ್ಯಕ್ತಿಯನ್ನು ಏಕೆ ಕರೆದುಕೊಂಡು ಹೋಗಬೇಕು ಎಂದು ಅವರು ಕೇಳಿದ್ದಾರೆ.

ಇದನ್ನೂ ಓದಿಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನವೇ ಶೃಂಗೇರಿಯಲ್ಲಿ ಶ್ರೀರಾಮ ದೇಗುಲ ಉದ್ಘಾಟನೆ

ಅಪೂರ್ಣ ದೇವಾಲಯ

ಅವಿಮುಕ್ತೇಶ್ವರಾನಂದ ಸರಸ್ವತಿಯವರ ಪ್ರಕಾರ ಪ್ರಾಣಪ್ರತಿಷ್ಠೆಗೆ ಅವಸರ ಮಾಡುವ ಅಗತ್ಯವಿಲ್ಲ ದೇವಾಲಯವು “ಸಂಪೂರ್ಣವಾಗಿ” ಪೂರ್ಣಗೊಳ್ಳುವವರೆಗೆ ಸರ್ಕಾರ ಕಾಯಬಹುದಿತ್ತು. ಶಾಸ್ತ್ರಗಳ ವಿಷಯಕ್ಕೆ ಬಂದಾಗ ಇದು “ಅಜ್ಞಾನದ ದೊಡ್ಡ ಕಾರ್ಯ” ಎಂದು ಹೇಳಿದ್ದಾರೆ. “ನಾವು ಧರ್ಮ ಶಾಸ್ತ್ರಗಳ ಪ್ರಕಾರ ಕಾರ್ಯನಿರ್ವಹಿಸಲು ಬಯಸುತ್ತೇವೆ ಮತ್ತು ನಮ್ಮ ಸಾರ್ವಜನಿಕರು ಅದೇ ರೀತಿ ಮಾಡಬೇಕೆಂದು ಬಯಸುತ್ತೇವೆ. ಏಕೆಂದರೆ ಪುಣ್ಯ-ಪಾಪ (ಒಳ್ಳೆಯ ಕಾರ್ಯಗಳು ಮತ್ತು ದುಷ್ಕೃತ್ಯಗಳು) ನಮಗೆ ಹೇಗೆ ತಿಳಿದಿದೆ. ರಾಮನಿದ್ದಾನೆ ಎಂದು ನಮಗೆ ಯಾರು ಹೇಳಿದ್ದು ಯಾರು? ನಮ್ಮ ಧರ್ಮ ಶಾಸ್ತ್ರಗಳು. ಧಾರ್ಮಿಕ ವ್ಯಕ್ತಿಗಳನ್ನು ಉದ್ದೇಶಪೂರ್ವಕವಾಗಿ ಬದಿಗಿಟ್ಟು, ಪ್ರಾಣಪ್ರತಿಷ್ಠಾ ಕಾರ್ಯಕ್ರಮವನ್ನು ರಾಜಕೀಯಗೊಳಿಸಲಾಗಿದೆ ಎಂದಿದ್ದಾರೆ ಅವಿಮುಕ್ತೇಶ್ವರಾನಂದ ಸರಸ್ವತಿ .

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ