ಅಜ್ಮೀರ್ ಷರೀಫ್ ದರ್ಗಾಕ್ಕೆ ಅರ್ಪಿಸುವ ಪವಿತ್ರ ಚಾದರ್ ನೀಡಿದ ಪ್ರಧಾನಿ ಮೋದಿ
ಮೋದಿ ಅವರು ಹಂಚಿಕೊಂಡ ಚಿತ್ರಗಳಲ್ಲಿ, ಪ್ರಧಾನಿ ಅವರು ನಿಯೋಗದೊಂದಿಗೆ ಮಾತನಾಡುತ್ತಿರುವುದು ಮತ್ತು ಅವರಿಗೆ ‘ಚಾದರ್’ ನೀಡುತ್ತಿರುವುದನ್ನು ಕಾಣಬಹುದು. ಸುಮಾರು 10 ಸದಸ್ಯರನ್ನೊಳಗೊಂಡ ನಿಯೋಗವು ಪ್ರಧಾನಮಂತ್ರಿ ಮತ್ತು ಚಾದರ್ ಜತೆ ಪೋಸ್ ನೀಡಿದೆ.
ದೆಹಲಿ ಜನವರಿ 11: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ಮುಸ್ಲಿಂ ಸಮುದಾಯದ ನಿಯೋಗದೊಂದಿಗೆ ಸಂವಾದ ನಡೆಸಿದ್ದು ಅವರಿಗೆ ಅಜ್ಮೀರ್ ಷರೀಫ್ ದರ್ಗಾಕ್ಕೆ (Ajmer Sharif Dargah) ಅರ್ಪಿಸಲು ಉದ್ದೇಶಿಸಿರುವ ‘ಚಾದರ್’ (chadar)ಅನ್ನು ಉಡುಗೊರೆಯಾಗಿ ನೀಡಿದರು. ಈ ಸಭೆಯು ಗೌರವಾನ್ವಿತ ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಅವರ ಪುಣ್ಯಸ್ಮರಣೆಯ ಕಾರ್ಯಕ್ರಮದ ಭಾಗವಾಗಿತ್ತು. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡ ಮೋದಿ, “ಮುಸ್ಲಿಂ ಸಮುದಾಯದ ನಿಯೋಗವನ್ನು ಭೇಟಿಯಾದೆ. ನಮ್ಮ ಸಂವಾದದ ಸಮಯದಲ್ಲಿ, ನಾನು ಪವಿತ್ರ ಚಾದರ್ ಅನ್ನು ನೀಡಿದ್ದು ಇದನ್ನು ಗೌರವಾನ್ವಿತ ಅಜ್ಮೀರ್ ಷರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಉರೂಸ್ ಸಮಯದಲ್ಲಿ ಇರಿಸಲಾಗುವುದು ಎಂದಿದ್ದಾರೆ.
ಮೋದಿ ಅವರು ಹಂಚಿಕೊಂಡ ಚಿತ್ರಗಳಲ್ಲಿ, ಪ್ರಧಾನಿ ಅವರು ನಿಯೋಗದೊಂದಿಗೆ ಮಾತನಾಡುತ್ತಿರುವುದು ಮತ್ತು ಅವರಿಗೆ ‘ಚಾದರ್’ ನೀಡುತ್ತಿರುವುದನ್ನು ಕಾಣಬಹುದು. ಸುಮಾರು 10 ಸದಸ್ಯರನ್ನೊಳಗೊಂಡ ನಿಯೋಗವು ಪ್ರಧಾನಮಂತ್ರಿ ಮತ್ತು ಚಾದರ್ ಜತೆ ಪೋಸ್ ನೀಡಿದೆ.
Met a Muslim community delegation. During our interaction, I presented the sacred Chadar, which will be placed during the Urs of Khwaja Moinuddin Chishti at the esteemed Ajmer Sharif Dargah. pic.twitter.com/eqWIKy7VQ1
— Narendra Modi (@narendramodi) January 11, 2024
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜಮಾಲ್ ಸಿದ್ದಿಕಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ 812 ನೇ ವಾರ್ಷಿಕ ಉರೂಸ್ ಜನವರಿ 8 ರಂದು ಪ್ರಾರಂಭವಾಯಿತು. ಭಿಲ್ವಾರಾದ ಗೋರಿ ಕುಟುಂಬವು ಜನವರಿ 7 ರಂದು ಧ್ವಜಾರೋಹಣ ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸೋಮವಾರ, ಅಜ್ಮೀರ್ ದರ್ಗಾದ ಖಾದಿಮ್‌ಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಜನವರಿ 13 ರಿಂದ 21 ರವರೆಗೆ ದೇಗುಲದಲ್ಲಿ ಉರೂಸ್ ಪಾಲ್ಗೊಳ್ಳುವ ವ್ಯಕ್ತಿಗಳ ಸುರಕ್ಷತೆ ಖಾತರಿಪಡಿಸಲು ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದ್ದಾರೆ ಎಂದು ಸಿಯಾಸತ್ ಡೈಲಿ ವರದಿ ಮಾಡಿದೆ.
ಇದನ್ನೂ ಓದಿ: Mukesh Ambani: ಭಾರತದ ಇತಿಹಾಸದಲ್ಲೇ ನರೇಂದ್ರ ಮೋದಿ ಅತ್ಯಂತ ಯಶಸ್ವಿ ಪ್ರಧಾನಿ: ಮುಕೇಶ್ ಅಂಬಾನಿ ಬಣ್ಣನೆ
ದಿ ಸಿಯಾಸತ್ ಡೈಲಿ ಜತೆ ಮಾತನಾಡಿದ ಅಜ್ಮೀರ್ ಶರೀಫ್ ದರ್ಗಾದ ಖಾದಿಮ್‌ಗಳ ಪ್ರತಿನಿಧಿ ಸಂಸ್ಥೆ ಅಂಜುಮನ್ ಸೈಯದ್ ಝಡ್ಗಾನ್ ಅವರ ಕಾರ್ಯದರ್ಶಿ ಸರ್ವರ್ ಚಿಶ್ತಿ ಅವರು ಹಜರತ್ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಶ್ತಿಯ 812 ನೇ ಉರೂಸ್ ಜನವರಿ 13 ರಿಂದ 21 ನೇ ಜನವರಿವರೆಗೆ ನಡೆಯಲಿದೆ. ಜಾತಿ, ಧರ್ಮ, ಬಣ್ಣ ಮತ್ತು ಧರ್ಮವನ್ನು ಲೆಕ್ಕಿಸದೆ ಉರೂಸ್ ಆಚರಿಸಲು ಜನರು ಬರುತ್ತಾರೆ ಎಂದಿದ್ದಾರೆ. ಮುಂಬರುವ ದಿನಗಳಲ್ಲಿ, ದೆಹಲಿಯಿಂದ ಕಲಂದರ್‌ಗಳು ಅಜ್ಮೀರ್‌ಗೆ ಆಗಮಿಸಿ ದರ್ಗಾದಲ್ಲಿ ತಮ್ಮ ಅರ್ಪಣೆಗಳನ್ನು ಸಲ್ಲಿಸಲು ಸಿದ್ಧರಾಗಿದ್ದಾರೆ. ಇದು ದೀರ್ಘಕಾಲದ ಸಂಪ್ರದಾಯವನ್ನು ಅನುಸರಿಸುತ್ತದೆ. ಅಟಾರಿ ಗಡಿಯಿಂದ ವಿಶೇಷ ರೈಲು ಜನವರಿ 14 ರಂದು ಪಾಕಿಸ್ತಾನಿ ಭಕ್ತರ ನಿಯೋಗವನ್ನು ಅಜ್ಮೀರ್‌ಗೆ ಕರೆತರುವ ನಿರೀಕ್ಷೆಯಿದೆ.
ಔಪಚಾರಿಕ ಉರೂಸ್ ಚಂದ್ರನ ದರ್ಶನದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಭಕ್ತರಿಗಾಗಿ ‘ಜನ್ನತಿ ದರ್ವಾಜ’ವನ್ನು ತೆರೆಯಲಾಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:19 pm, Thu, 11 January 24