ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮ ಲಲ್ಲಾ ಮೂರ್ತಿ: ಇಲ್ಲಿದೆ ಮೊದಲ ಚಿತ್ರ

|

Updated on: Jan 19, 2024 | 6:51 AM

Lalla’s idol in garbha griha: ಈಗಾಗಲೇ ಚಿಕ್ಕ ಗುಡಿಯಲ್ಲಿ ಪೂಜಿಸಲಾಗುತ್ತಿರುವ ರಾಮ ಲಲ್ಲಾ ವಿಗ್ರಹವನ್ನೂ ಜನವರಿ 20ರಂದು ಗರ್ಭಗುಡಿಗೆ ತರಲಾಗುವುದು. ಅದನ್ನೂ ಸಹ ಅದೇ ದಿನ ಅಲ್ಲಿ ಸ್ಥಾಪಿಸಲಾಗುವುದು. ಅದು ಉತ್ಸವ ಮೂರ್ತಿಯಾಗಿರಲಿದ್ದು, ಸ್ಥಿರ ರಾಮ ಲಲ್ಲಾ ವಿಗ್ರಹದ ಬಳಿ ಸ್ಥಿತವಾಗಿರಲಿದೆ.

ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮ ಲಲ್ಲಾ ಮೂರ್ತಿ: ಇಲ್ಲಿದೆ ಮೊದಲ ಚಿತ್ರ
ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮ ಲಲ್ಲಾ ಮೂರ್ತಿ: ಇಲ್ಲಿದೆ ಮೊದಲ ಚಿತ್ರ
Follow us on

ಅಯೋಧ್ಯೆ, ಜನವರಿ 19: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾದ ಭವ್ಯವಾದ ರಾಮಮಂದಿರದಲ್ಲಿ (Ayodhya Ram Mandir) ಭಗವಾನ್ ರಾಮ ಲಾಲ್ಲಾ ಮೂರ್ತಿಯನ್ನು (Ram Lalla Idol) ಗುರುವಾರ ಪ್ರತಿಷ್ಠಾಪಿಸಲಾಯಿತು. ಈ ಮೂರ್ತಿಗೆ ಪ್ರಾಣ ಪ್ರತಿಷ್ಠೆಯ ಕಾರ್ಯ ಜನವರಿ 22ರಂದು ನಡೆಯಲಿದೆ. ರಾಮ ಲಾಲ್ಲಾ ಮೂರ್ತಿಯನ್ನು ಗುರುವಾರ ಗರ್ಭಗುಡಿಗೆ ತರಲಾಯಿತು. ಇದಾದ ನಂತರ ಕುಶಲಕರ್ಮಿಗಳು ವಿಗ್ರಹವನ್ನು ಪೀಠದ ಮೇಲೆ ಇರಿಸಿದರು. ಈ ಪ್ರಕ್ರಿಯೆಯು ಸುಮಾರು ನಾಲ್ಕು ಗಂಟೆಗಳನ್ನು ತೆಗೆದುಕೊಂಡಿತು. ಇದರ ನಂತರ ವಿಗ್ರಹವನ್ನು ಧಾನ್ಯಗಳು, ಹಣ್ಣುಗಳು, ತುಪ್ಪ ಮತ್ತು ಪರಿಮಳಯುಕ್ತ ನೀರಿನಲ್ಲಿ ಇರಿಸಲಾಯಿತು.

ಪೂಜೆಯ ಸಂಕಲ್ಪದೊಂದಿಗೆ ರಾಮ ಲಲ್ಲಾನನ್ನು ಗರ್ಭಗುಡಿಯಲ್ಲಿ ಕೂರಿಸಲಾಯಿತು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಕೋಶಾಧ್ಯಕ್ಷ ಗೋವಿಂದ ಗಿರಿ ಮಹಾರಾಜ್ ಹೇಳಿದರು.

ರಾಮ ಲಲ್ಲಾ ಹಳೆಯ ವಿಗ್ರಹ ಏನಾಗಲಿದೆ?

ಈಗಾಗಲೇ ಚಿಕ್ಕ ಗುಡಿಯಲ್ಲಿ ಪೂಜಿಸಲಾಗುತ್ತಿರುವ ರಾಮ ಲಲ್ಲಾ ವಿಗ್ರಹವನ್ನೂ ಜನವರಿ 20ರಂದು ಗರ್ಭಗುಡಿಗೆ ತರಲಾಗುವುದು. ಅದನ್ನೂ ಸಹ ಅದೇ ದಿನ ಅಲ್ಲಿ ಸ್ಥಾಪಿಸಲಾಗುವುದು. ಅದು ಉತ್ಸವ ಮೂರ್ತಿಯಾಗಿರಲಿದ್ದು, ಸ್ಥಿರ ರಾಮ ಲಲ್ಲಾ ವಿಗ್ರಹದ ಬಳಿ ಸ್ಥಿತವಾಗಿರಲಿದೆ.

ಗುರುವಾರ ಬೆಳಗ್ಗೆಯಿಂದಲೇ ಗರ್ಭಗುಡಿ ಹಾಗೂ ದೇವಸ್ಥಾನದ ಆವರಣದಲ್ಲಿ ಪೂಜೆಗಳು ಆರಂಭವಾಗಿದ್ದರೂ ವಿದ್ವತ್ ಮುಹೂರ್ತದ ಪ್ರಕಾರ ಮಧ್ಯಾಹ್ನ 1:20ಕ್ಕೆ ಪೂಜೆ ನಡೆಸಲಾಯಿತು. ಶುಭ ಮುಹೂರ್ತದ ಪ್ರಕಾರ, ಮುಖ್ಯ ನಿರ್ಣಯ, ಗಣೇಶಾಂಬಿಕಾ ಪೂಜೆ, ವರುಣ ಪೂಜೆ, ಚತುರ್ವೇದೋಕ್ತ ಪುಣ್ಯಾಹವಾಚನ, ಮಾತೃಕಾ ಪೂಜೆ, ಬಾಸೋರ್ಧಾರ ಪೂಜೆ (ಸಪ್ತಘೃತಮಾತೃಕಾ ಪೂಜೆ), ಆಯುಷ್ಯ ಮಂತ್ರ ಪಠಣ, ನಂದಿಶ್ರಾಧ, ಆಚಾರ್ಯಾದಿತ್ವಿಗ್ವರಣ, ಮಧುಪರ್ಕತ್ವವಿಗ್ವರಣ, ವರಾಹ, ಯಜ್ಞಭೂಮಿ-ಪೂಜನ, ಪಂಚಗವ್ಯಪ್ರೋಕ್ಷಣೆ, ಮಂಟಪ ವಾಸ್ತು ಪೂಜೆ, ವಾಸ್ತು ಬಲಿ, ಮಂಡಪಸೂತ್ರವೇಷ್ಠನ, ಕ್ಷೀರಪ್ರವಾಹ, ಷೋಡಶಸ್ತಂಭ ಪೂಜೆ ಇತ್ಯಾದಿ ನೆರವೇರಿತು. ನಂತರ ಜಲಧಿವಾಸ, ಗಂಧದೈವ, ಸಂಜೆ ಪೂಜೆ, ಆರತಿಕ್ಯಮ ಪೂಜೆ ನೆರವೇರಿತು.

ಇದನ್ನೂ ಓದಿ: 1992ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದಿಂದ ಅಯೋಧ್ಯೆ ರಾಮಮಂದಿರ ನಿರ್ಮಾಣದವರೆಗೆ; ಟೈಮ್​ಲೈನ್

ಬುಧವಾರ ಮುಂಜಾನೆ 200 ಕೆಜಿ ತೂಕದ ನೂತನ ರಾಮ ಲಲ್ಲಾ ವಿಗ್ರಹವನ್ನು ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಸಂಕೀರ್ಣಕ್ಕೆ ತರಲಾಗಿತ್ತು.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ