AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಯಾಣ: ಪತ್ನಿ ಸಹಾಯ ಪಡೆದು ಪೊಲೀಸ್​ ಕಸ್ಟಡಿಯಿಂದ ತಪ್ಪಿಸಿಕೊಂಡ ಕೈದಿ

ಪತ್ನಿ ಸಹಾಯದಿಂದ ಕೈದಿಯೊಬ್ಬ ಪೊಲೀಸ್​ ಕಸ್ಟಡಿಯಿಂದ ತಪ್ಪಿಸಿಕೊಂಡಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ. ವಂಚನೆ ಮತ್ತು ಇತರ ಅಪರಾಧಗಳ ಆರೋಪಿಯೊಬ್ಬ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಸ್ಕೂಟರ್​ನಲ್ಲಿ ಪತ್ನಿಯ ಜತೆ ಪರಾರಿಯಾಗಿದ್ದಾನೆ.

ಹರ್ಯಾಣ: ಪತ್ನಿ ಸಹಾಯ ಪಡೆದು ಪೊಲೀಸ್​ ಕಸ್ಟಡಿಯಿಂದ ತಪ್ಪಿಸಿಕೊಂಡ ಕೈದಿ
ಪೊಲೀಸ್​Image Credit source: India Today
ನಯನಾ ರಾಜೀವ್
|

Updated on: Jan 19, 2024 | 8:16 AM

Share

ಪತ್ನಿ ಸಹಾಯದಿಂದ ಕೈದಿಯೊಬ್ಬ ಪೊಲೀಸ್​ ಕಸ್ಟಡಿಯಿಂದ ತಪ್ಪಿಸಿಕೊಂಡಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ. ವಂಚನೆ ಮತ್ತು ಇತರ ಅಪರಾಧಗಳ ಆರೋಪಿಯೊಬ್ಬ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಸ್ಕೂಟರ್​ನಲ್ಲಿ ಪತ್ನಿಯ ಜತೆ ಪರಾರಿಯಾಗಿದ್ದಾನೆ.

ಆರೋಪಿಯನ್ನು ಅನಿಲ್ ಅಲಿಯಾಸ್ ಟಿಂಕಲ್ ಎಂದು ಗುರುತಿಸಲಾಗಿದ್ದು, ಜನವರಿ 16 ರಂದು ಮಂಗಳವಾರ ವಿಚಾರಣೆಗಾಗಿ ಹರಿಯಾಣದ ಪಲ್ವಾಲ್‌ನಲ್ಲಿರುವ ಸ್ಥಳೀಯ ನ್ಯಾಯಾಲಯಕ್ಕೆ ಕರೆತರಲಾಗಿತ್ತು.

ಕಳೆದ ವರ್ಷ ಏಪ್ರಿಲ್ 16 ರಂದು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ಅವರನ್ನು ಪೊಲೀಸರು ಬಂಧಿಸಿದ್ದರು ಮತ್ತು ಪ್ರಸ್ತುತ ಏಳು ವಿವಿಧ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿದ್ದಾನೆ.

ನ್ಯಾಯಾಲಯದ ವಿಚಾರಣೆಯ ನಂತರ, ಅನಿಲ್ ಮತ್ತು ಪೊಲೀಸ್ ಅಧಿಕಾರಿಗಳು ಪಲ್ವಾಲ್‌ನ ಹೊಡಾಲ್ ಪ್ರದೇಶವನ್ನು ತಲುಪಲು ಆಟೋ-ರಿಕ್ಷಾವನ್ನು ಹತ್ತಿದ್ದರು. ಅಲ್ಲಿ ಮಥುರಾಗೆ ತೆರಳುವ ಬಸ್​ಗಾಗಿ ಕಾಯುತ್ತಿದ್ದರು, ಈ ಸಮಯದಲ್ಲಿ ಪತ್ನಿ ಸ್ಕೂಟರ್​ನಲ್ಲಿ ಬಂದಿದ್ದಳು, ಪತಿ ಜತೆಗೆ ಸ್ವಲ್ಪ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಹೇಳಿಕೊಂಡಿದ್ದಳು. ಪೊಲೀಸರು ಕೂಡ ಒಪ್ಪಿಕೊಂಡರು.

ಮತ್ತಷ್ಟು ಓದಿ: ಬೆಂಗಳೂರಿನ ರೌಡಿಗಳಿಗೆ ಪಿಸ್ತೂಲ್ ಪೂರೈಸುತ್ತಿದ್ದ ಮಹಾರಾಷ್ಟ್ರದ ಇಬ್ಬರು ಆರೋಪಿಗಳ ಬಂಧನ

ಅವರಿಬ್ಬರು ಓಡಿ ಹೋಗುವ ಮುನ್ನ ಹೋಟೆಲ್​ನಲ್ಲಿ ಗಂಟೆಗಳ ಕಾಲ ಮಾತನಾಡಿದ್ದರು. ಹೆಡ್ ಕಾನ್ಸ್‌ಟೇಬಲ್ ಜ್ಞಾನ್ ಸಿಂಗ್, ಕಾನ್‌ಸ್ಟೆಬಲ್ ವಿವೇಕಾನಂದ ಮತ್ತು ಕಾನ್‌ಸ್ಟೆಬಲ್ ದಿಲೀಪ್ ಮೂವರು ಅವರಿಬ್ಬರನ್ನು ತಡೆಯಲು ಎಷ್ಟು ಪ್ರಯತ್ನಿಸಿದರೂ ತಪ್ಪಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಮಥುರಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಶೈಲೇಶ್ ಕುಮಾರ್ ಪಾಂಡೆ ಅವರು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಅನಿಲ್ ಮತ್ತು ಅವರ ಪತ್ನಿ ವಿರುದ್ಧ ಹೋಡಾಲ್‌ನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ