ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡು 75 ವರ್ಷಗಳು ಕಳೆದಿದೆ. ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಳು ನಡೆದಿದೆ. ಈ ಸ್ವಾತಂತ್ರ್ಯಕ್ಕಾಗಿ ಅದೆಷ್ಟು ಮಹಾನ್ ನಾಯಕರು ಪ್ರಾಣವನ್ನು ನೀಡಿದ್ದಾರೆ, ಭಾರತದಲ್ಲಿ ಭವ್ಯ ತ್ರಿವರ್ಣ ಧ್ವಜ ಸ್ವಾತಂತ್ರ್ಯವಾಗಿ ಹಾರಾಡಲು ಸಿಕ್ಕ ಸ್ವಾಭಿಮಾನದ ದಿನ ಆಗಸ್ಟ್ 15, ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಆಗಿದೆ. ಹಾಗಾಗಿ ದೇಶ ಪ್ರಧಾನಿ ಮಹತ್ವದ ಒಂದು ಮನವಿಯನ್ನು ಮಾಡಿಕೊಂಡಿದ್ದಾರೆ, ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಬೇಕು, ಅದಕ್ಕಾಗಿ ಹರ್ ಘರ್ ತಿರಂಗಾ ಎಂಬ ಅಭಿಯಾನವನ್ನು ನಡೆಸಿಸಲು ಎಲ್ಲ ರಾಜ್ಯ ಸರ್ಕಾರಗಳಿಗೂ ಸೂಚನೆ ನೀಡಿದ್ದಾರೆ.
ಇದರ ಜೊತೆಗೆ ಪ್ರತಿ ಸರ್ಕಾರಿ ಕಛೇರಿಗಳಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಸಲು ಆದೇಶವನ್ನು ನೀಡದ್ದು, ಈಗಾಗಲೇ ಕೆಲವೊಂದು ರಾಜ್ಯ ಸರ್ಕಾರಗಳು ಇದಕ್ಕಾಗಿ ಸಿದ್ಧತೆಯನ್ನು ಮತ್ತು ಅಭಿಯಾನವನ್ನು ಪ್ರಾರಂಭಿಸಿದೆ, ಜೊತೆಗೆ ಪ್ರತಿಯೊಬ್ಬರ ಸಾಮಾಜಿಕ ಜಾಲತಾಣದಲ್ಲಿ ಡಿಪಿ (ಮುಖಪುಟ)ಯಲ್ಲಿ ರಾಷ್ಟ್ರೀಯ ಧ್ವಜವನ್ನು ಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಭಾರತೀಯ ಕೋಸ್ಟ್ ಗಾರ್ಡ್ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ರಾಷ್ಟ್ರಧ್ವಜವನ್ನು ಸಮುದ್ರದಡಿಯಲ್ಲಿ ಡೆಮೊ ಪ್ರದರ್ಶಿಸಿದೆ. ಭಾರತೀಯ ಕೋಸ್ಟ್ ಗಾರ್ಡ್ ಶನಿವಾರ ಸಂಜೆ ಇದರ ವೀಡಿಯೊವನ್ನು ಟ್ವೀಟ್ ಮಾಡಿದೆ, ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ, ಭಾರತೀಯ ಕೋಸ್ಟ್ ಗಾರ್ಡ್ ಸಮುದ್ರದಲ್ಲಿ ನೀರೊಳಗೆ ಧ್ವಜ ಡೆಮೊವನ್ನು ಪ್ರದರ್ಶಿಸಿತು. ಈ ಜನರ ಮನಸ್ಸಿನಲ್ಲಿ ದೇಶಭಕ್ತಿಯ ಭಾವನೆ ಮತ್ತು ಭಾರತೀಯ ರಾಷ್ಟ್ರಧ್ವಜದ ಬಗ್ಗೆ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ರೀತಿಯ ಅಭಿಯಾನವನ್ನು ಮಾಡಿದ್ದಾರೆ.
“हर घर तिरंगा”#HarGharTiranga
“आज़ादी का अमृत महोत्सव”#AzadiKaAmritMahotsav
As part of 75th years of India’s independence celebration, @IndiaCoastGuard performed underwater flag Demo at Sea. This initiative is to invoke the feeling of patriotism in the hearts of the people. pic.twitter.com/wAOADF2tfX
— Indian Coast Guard (@IndiaCoastGuard) July 29, 2022
ಭಾರತದ ಆಜಾದಿ ಕಾ ಅಮೃತ್ ಮಹೋತ್ಸವಕ್ಕೆ ಈ ಪೂರಕವಾಗಿ ಇದನ್ನು ಮಾಡಲಾಗಿದೆ. ತಿರಂಗವನ್ನು ಪ್ರತಿ ಮನೆಯಲ್ಲಿ ಹಾರಿಸಲು ಜನರಿಗೆ ಜುಲೈ 22 ರಂದು ಪಿಎಂ ನರೇಂದ್ರ ಮೋದಿ ಅವರು ‘ಹರ್ ಘರ್ ತಿರಂಗ’ ಅಭಿಯಾನವನ್ನು ಪ್ರಾರಂಭಿಸಿದರು.
Published On - 1:28 pm, Thu, 4 August 22