Azadi Ka Amrit Mahotsav: ಉತ್ತರಾಖಂಡದಲ್ಲಿ 13 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಐಟಿಬಿಪಿ ಪಡೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 08, 2022 | 9:54 AM

ಉತ್ತರಾಖಂಡದಲ್ಲಿ 13,000 ಅಡಿ ಎತ್ತರದಲ್ಲಿ ಹರ್ ಘರ್ ತಿರಂಗ ಅಭಿಯಾನವನ್ನು ಪ್ರಾರಂಭಿಸುವ ಮೂಲಕ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆ ಮಾಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್​ನಲ್ಲಿ ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Azadi Ka Amrit Mahotsav: ಉತ್ತರಾಖಂಡದಲ್ಲಿ 13 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಐಟಿಬಿಪಿ ಪಡೆ
ITBP
Follow us on

ಭಾರತೀಯ ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ಉತ್ತರಾಖಂಡದಲ್ಲಿ 13,000 ಅಡಿ ಎತ್ತರದಲ್ಲಿ ಹರ್ ಘರ್ ತಿರಂಗ ಅಭಿಯಾನವನ್ನು ಪ್ರಾರಂಭಿಸುವ ಮೂಲಕ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆ ಮಾಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್​ನಲ್ಲಿ ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವು ರಾಷ್ಟ್ರದ ಗಡಿ ಗಸ್ತು ಏಜೆನ್ಸಿಯ ಜಾಗರೂಕತೆ ಮತ್ತು ಕಣ್ಗಾವಲು ಸಾಮರ್ಥ್ಯಗಳನ್ನು ವಿವರಿಸುತ್ತದೆ.

ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಬಗ್ಗೆ ಮತ್ತು ರಾಷ್ಟ್ರದಲ್ಲಿ ಒಗ್ಗಟಿನಲ್ಲಿರುವ ವಿಚಾರಗಳನ್ನು ತಿಳಿಸಿದ್ದಾರೆ.   ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹುರುಪಿನಿಂದ ಆಚರಿಸಲು ಸೈನಿಕರು ಗುರುತಿಸಿದ ಹರ್ ಘರ್ ತಿರಂಗ ಅಭಿಯಾನದ ಸುಂದರ ಕ್ಷಣಗಳು ಇದು.

ಇದನ್ನೂ ಓದಿ
One Day Trip:ಒತ್ತಡ ಬದಿಗಿಟ್ಟು, ಬೆಂಗಳೂರಿನಿಂದ ಈ ಸ್ಥಳಗಳಿಗೆ ಒಂದು ದಿನದ ಟ್ರಿಪ್​ ಹೋಗಿ
World Milk Day 2022: ಹಾಲಿನ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಹೇಗೆ ಇಲ್ಲಿದೆ ಓದಿ
World No Tobacco Day 2022: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ; ವಿಶ್ವ ಧೂಮಪಾನ ರಹಿತ ದಿನವನ್ನು ಏಕೆ ಆಚರಿಸುತ್ತಾರೆ ಇಲ್ಲಿದೆ ಓದಿ
Travel: ಬೇಸಿಗೆ ರಜೆಯಲ್ಲಿ ಅಗ್ಗದ ಕುಟುಂಬ ಪ್ರವಾಸ ಮಾಡಲು ಈ ಸ್ಥಳಗಳಿಗೆ ಭೇಟಿ ನೀಡಿ..!

ಐಟಿಬಿಪಿ ಪಡೆಗಳು ಲಡಾಖ್‌ನಲ್ಲಿ 12,000 ಅಡಿ ಎತ್ತರದಲ್ಲಿ ಭಾರತದ ಧ್ವಜವನ್ನು ಹಾರಿಸಿಲಾಗಿತ್ತು. ಪಡೆಗಳು ಭಾರತದ ಎಲ್ಲಾ ನಾಗರಿಕರಿಗೆ ಈ ಸಂದೇಶವನ್ನು ರವಾನಿಸಿತ್ತು. ಹರ್ ಘರ್ ತಿರಂಗ ಅಭಿಯಾನದಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡರು. ಎಲ್ಲಾ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹರಿಸುವಂತೆ ಸರ್ಕಾರ ಹೇಳಿದೆ. ಸಿಕ್ಕಿಂ, ಉತ್ತರಾಖಂಡ, ಅಸ್ಸಾಂ, ಬಿಹಾರ ಮತ್ತು ಇತರ ರಾಜ್ಯಗಳ ಭಾಗಗಳಲ್ಲಿ ಸ್ಥಳೀಯರ ಸಹಯೋಗದೊಂದಿಗೆ ಪಡೆಗಳಿಂದ ಹಲವಾರು ಜಾಗೃತಿ ಅಭಿಯಾನಗಳು ಮತ್ತು ತ್ರಿವರ್ಣ ವಿತರಣಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Himveers of ITBP Academy, Mussoori ಥಟ್ಯೂಡ್ ಪದವಿ ಕಾಲೇಜು ವಿದ್ಯಾರ್ಥಿಗಳ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತು. ರ್ಯಾಲಿ ಮತ್ತು ಪ್ಲಾಂಟೇಶನ್ ಡ್ರೈವ್ ಅನ್ನು ಸಹ ನಡೆಸಲಾಯಿತು ಎಂದು ಆಗಸ್ಟ್ 6 ರಂದು ಪಡೆಗಳು ಟ್ವೀಟ್ ಮಾಡಿತ್ತು.
ಆಗಸ್ಟ್ 4 ರಂದು, ಐಟಿಬಿಪಿಯು ಫ್ಲಾಗ್ ಫೌಂಡೇಶನ್ ಆಫ್ ಇಂಡಿಯಾ (ಎಫ್‌ಎಫ್‌ಐ) ಸಹಯೋಗದೊಂದಿಗೆ ಮಸ್ಸೌರಿಯ ಐಟಿಬಿಪಿ ಅಕಾಡೆಮಿಯ ನಾಗ್ ಮಂದಿರದ ಬಳಿ 72 ಅಡಿ ಎತ್ತರದ ರಾಷ್ಟ್ರೀಯ ಧ್ವಜವನ್ನು ಹಾರಿಸಿಲಾಗಿತ್ತು. ಐಟಿಬಿಪಿ ಮತ್ತು ಎಫ್‌ಎಫ್‌ಐ ಮೂಲಕ ಸ್ವಾತಂತ್ರ್ಯ ಹೋರಾಟದ ಹುತಾತ್ಮರಿಗೆ ಧ್ವಜವನ್ನು ಅರ್ಪಿಸಲಾಯಿತು.

ಅಭಿಯಾನವನ್ನು ಸುಗಮಗೊಳಿಸಲು, ಸರ್ಕಾರವು ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಜನರಲ್ಲಿ ಧ್ವಜ ಜಾಗೃತಿ ಮತ್ತು ಒಗ್ಗೂಟಿನ ಮಂತ್ರವನ್ನು ಈ ಮೂಲಕ ತಿಳಿಸಿತ್ತು. ಧ್ವಜವನ್ನು ತಯಾರಿಸಲು ಬಳಸಬೇಕಾದ ವಸ್ತುಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದು ಮತ್ತು ತಿರಂಗದ ಗಾತ್ರವನ್ನು ಎಷ್ಟಿರಬೇಕು ಎಂಬುದನ್ನು ಕೂಡ ತಿಳಿಸಿದೆ.

ಪಿಟಿಐ ವರದಿಯ ಪ್ರಕಾರ, ಆಗಸ್ಟ್ 13 ಮತ್ತು 15 ರ ನಡುವೆ ಮೂರು ದಿನಗಳ ಕಾಲ 20 ಕೋಟಿಗೂ ಹೆಚ್ಚು ರಾಷ್ಟ್ರಧ್ವಜಗಳನ್ನು ಮನೆಗಳ ಮೇಲೆ ಹಾರಿಸಲಾಗುವುದು ಎಂದು ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.

ಪಿಟಿಐ ವರದಿಯ ಪ್ರಕಾರ, ಆಗಸ್ಟ್ 13 ಮತ್ತು 15 ರ ನಡುವೆ ಮೂರು ದಿನಗಳ ಕಾಲ 20 ಕೋಟಿಗೂ ಹೆಚ್ಚು ರಾಷ್ಟ್ರಧ್ವಜಗಳನ್ನು ಮನೆಗಳ ಮೇಲೆ ಹಾರಿಸಲಾಗುವುದು ಎಂದು ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.

Published On - 9:54 am, Mon, 8 August 22