‘ಆಜಾದಿ ಕಾ ಅಮೃತ್ ಮಹೋತ್ಸವ’ದಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ದಾಖಲೆ ನಿರ್ಮಿಸೋಣ: ಕೇಂದ್ರ ಸಚಿವ ಕಿಶನ್ ರೆಡ್ಡಿ

National Anthem: ಎಲ್ಲಾ ಜನರಲ್ಲಿ ನಾನು ರಾಷ್ಟ್ರಗೀತೆಯನ್ನು ತಮ್ಮ ಫೋನಿನಲ್ಲಿ ಹಾಡುವ ಮೂಲಕ ರಾಷ್ಟ್ರಗಾನ್ ಡಾಟ್ ಇನ್ ನಲ್ಲಿ ಅಪ್ಲೋಡ್ ಮಾಡುವಂತೆ ನಾನು ಎಲ್ಲ ಜನರಿಗೆ ಮನವಿ ಮಾಡುತ್ತೇನೆ ಎಂದು ಸಚಿವ ಕಿಶನ್ ರೆಡ್ಡಿ ಹೇಳಿದ್ದಾರೆ.

ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ದಾಖಲೆ ನಿರ್ಮಿಸೋಣ:  ಕೇಂದ್ರ ಸಚಿವ ಕಿಶನ್ ರೆಡ್ಡಿ
ರಾಷ್ಟ್ರಗೀತೆ ಹಾಡೋಣ ಬನ್ನಿ
Edited By:

Updated on: Aug 09, 2021 | 12:58 PM

ದೆಹಲಿ: ಕೇಂದ್ರ ಸಂಸ್ಕೃತಿ ಇಲಾಖೆ ‘ಆಜಾದಿ ಕಾ ಅಮೃತ್ ಮಹೋತ್ಸವ’ (Azadi ka Amrit Mahotsav) ವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ತೀರ್ಮಾನಿಸಿದೆ. ದೇಶ ಆಗಸ್ಟ್ 15 ರಂದು ‘ಆಜಾದಿ ಕಾ ಅಮೃತ್ ಮಹೋತ್ಸವ’ದಲ್ಲಿ ಭಾಗಿಯಾಗುವ ಸಂದರ್ಭದಲ್ಲಿ, ನಾವೆಲ್ಲರೂ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ದಾಖಲೆ ನಿರ್ಮಿಸೋಣ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ (G Kishan Reddy)  ಹೇಳಿದ್ದಾರೆ.

ನಮ್ಮ ರಾಷ್ಟ್ರಗೀತೆಯನ್ನು ಪ್ರತಿದಿನ ಶಾಲೆಗಳಲ್ಲಿ, ಕಛೇರಿಗಳಲ್ಲಿ ಹಾಡಲಾಗುತ್ತದೆ ಮತ್ತು ಆಗಸ್ಟ್ 15 ರಂದು ನಾವು ತ್ರಿವರ್ಣದೊಂದಿಗೆ ರಾಷ್ಟ್ರಗೀತೆಯನ್ನು ಹಾಡುತ್ತೇವೆ, ಈ ಹಿನ್ನೆಲೆಯಲ್ಲಿ ಈ ಬಾರಿ ಅದರ ವಿಡಿಯೊ ಪ್ರದರ್ಶನವನ್ನು ಕೆಂಪುಕೋಟೆಯಲ್ಲಿ ಮತ್ತು ವಿಮಾನ ನಿಲ್ದಾಣದಲ್ಲಿ ನಡೆಸಲಾಗುತ್ತದೆ. ಅದಕ್ಕಾಗಿಯೇ ಸರ್ಕಾರವು ರಾಷ್ಟ್ರಗೀತೆಯ ಕಾರ್ಯಕ್ರಮವನ್ನು ದೇಶದ ಜನರ ಮುಂದೆ ಇರಿಸಿದೆ.

ಎಲ್ಲಾ ಜನರಲ್ಲಿ ನಾನು ರಾಷ್ಟ್ರಗೀತೆಯನ್ನು ತಮ್ಮ ಫೋನಿನಲ್ಲಿ ಹಾಡುವ ಮೂಲಕ ರಾಷ್ಟ್ರಗಾನ್ ಡಾಟ್ ಇನ್ ನಲ್ಲಿ ಅಪ್ಲೋಡ್ ಮಾಡುವಂತೆ ನಾನು ಎಲ್ಲ ಜನರಿಗೆ ಮನವಿ ಮಾಡುತ್ತೇನೆ.

ನಾನು ಎಲ್ಲ ಜನರನ್ನು ರಾಜಕೀಯ ಹೊರತು ಪಡಿಸಿ ಅದರ ಭಾಗವಾಗಲು ಆಹ್ವಾನಿಸುತ್ತೇನೆ. ಇದು ಜನರ ಹಬ್ಬವಾಗಬೇಕು, ಸರ್ಕಾರದ ಹಬ್ಬವಾಗಬಾರದು. ಎಲ್ಲರೂ ರಾಷ್ಟ್ರಗೀತೆಯಲ್ಲಿ ಭಾಗವಹಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದರು, ಅದಕ್ಕಾಗಿಯೇ ಈ ಕಾರ್ಯಕ್ರಮವನ್ನು ಇರಿಸಲಾಗಿದೆ. ಏಕೆಂದರೆ ದೇಶದ ಜನರಿಗೆ ರಾಷ್ಟ್ರಗೀತೆ ಮತ್ತು ತ್ರಿವರ್ಣ ಧ್ವಜಕ್ಕಿಂತ ಮಿಗಿಲಾದುದು ಏನೂ ಇಲ್ಲ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ .

ರಾಷ್ಟ್ರಗೀತೆ ಅಪ್ ಲೋಡ್ ಮಾಡುವುದು ಹೇಗೆ? 

https://rashtragaan.in/ ಕ್ಲಿಕ್ ಮಾಡಿ.  ಬಲಭಾಗದಲ್ಲಿ  ನಿಮ್ಮ ಮಾಹಿತಿ  ನಮೂದಿಸಲಿರುವ ಲಿಂಕ್ ಕ್ಲಿಕ್ ಮಾಡಿ.  ನಂತರ ರಾಷ್ಟ್ರಗೀತೆಹಾಡಿ ರೆಕಾರ್ಡ್ ಮಾಡಿ. ಅಪ್ ಲೋಡ್ ಮಾಡಿದ ನಂತರ ಸರ್ಟಿಫಿಕೇಟ್ ಡೌನ್​​​ ಲೋಡ್ ಮಾಡಿಕೊಳ್ಳಿ.

ಇದನ್ನೂ ಓದಿ:  Tokyo Olympics: ಪದಕಕ್ಕೆ ಮುತ್ತಿಟ್ಟ ಭಾರತೀಯರಿಗೆ ಇಂದು ಸಂಜೆ ಪ್ರಧಾನಿ ಮೋದಿಯಿಂದ ಸನ್ಮಾನ

(Azadi ka Amrit Mahotsav Let us Sing the National Anthem says Union Minister of Culture G Kishan Reddy)

 

Published On - 12:16 pm, Mon, 9 August 21