ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಯುದ್ಧನೌಕೆ ವಿಕ್ರಾಂತ್​; ದೇಶಕ್ಕಿದು ಐತಿಹಾಸಿಕ ದಿನ

ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಯುದ್ಧನೌಕೆ ವಿಕ್ರಾಂತ್​; ದೇಶಕ್ಕಿದು ಐತಿಹಾಸಿಕ ದಿನ
ವಿಕ್ರಾಂತ್​ ಯುದ್ಧ ನೌಕೆ

Vikrant: ಯುದ್ಧನೌಕೆಯ ಐದು ದಿನಗಳ ಪ್ರಯೋಗದ ನಂತರ ನಾವೀಗ ಕೊಚ್ಚಿಗೆ ವಾಪಸ್​ ಆಗುತ್ತಿದ್ದೇವೆ. ನಮಗೀಗ ಸಂಪೂರ್ಣ ತೃಪ್ತಿಯಿದೆಎಂದು ಉಪ ನೌಕಾ ಸೇನಾಪತಿ ಎ.ಕೆ.ಚಾವ್ಲಾ ತಿಳಿಸಿದ್ದಾರೆ.

TV9kannada Web Team

| Edited By: Lakshmi Hegde

Aug 09, 2021 | 1:01 PM

ಭಾರತದ ಮೊದಲ ದೇಶೀಯ ವಿಮಾನ ವಾಹಕ ಯುದ್ಧನೌಕೆ (Indigenous Aircraft Carrier (IAC) ವಿಕ್ರಾಂತ್ (Vikrant)​​ ಐದು ದಿನಗಳ ಪರೀಕ್ಷಾರ್ಥ ಸಂಚಾರ ಮುಗಿಸಿ ಹಿಂದಿರುಗಿದೆ. 40,000 ಟನ್​ ಯುದ್ಧನೌಕೆಯ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲು, ಐದು ದಿನಗಳ ಸಮುದ್ರ ಪ್ರಯೋಗ (Sea Trial) ಕಳೆದ ಬುಧವಾರದಿಂದ ಪ್ರಾರಂಭವಾಗಿತ್ತು. ಅಂದಾಜು 23 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ವಿಕ್ರಾಂತ್​ ಯುದ್ಧನೌಕೆ (Vikrant Aircraft Carrier)ಯನ್ನು ತಯಾರಿಸಲಾಗಿದೆ. ಈ ಸ್ವದೇಶಿ ನಿರ್ಮಿತ ವಿಮಾನ ವಾಹಕ ಯುದ್ಧನೌಕೆ ಮುಂದಿನ ವರ್ಷ ಆಗಸ್ಟ್​​ನಿಂದ ಭಾರತೀಯ ನೌಕಾಪಡೆಯನ್ನು ಸೇರಲಿದೆ.

ಈ ಯುದ್ಧ ನೌಕೆಯೀಗ ಯಶಸ್ವಿಯಾಗಿ ಪರೀಕ್ಷಾರ್ಥ ಸಂಚಾರವನ್ನು ಪೂರ್ಣಗೊಳಿಸಿದೆ. ಇದು ಭಾರತದ ಪಾಲಿಗೆ ಐತಿಹಾಸಿಕ ದಿನ ಎಂದು ಉಪ ನೌಕಾ ಸೇನಾಪತಿ ಎ.ಕೆ.ಚಾವ್ಲಾ ತಿಳಿಸಿದ್ದಾರೆ. ಯುದ್ಧನೌಕೆಯ ಐದು ದಿನಗಳ ಪ್ರಯೋಗದ ನಂತರ ನಾವೀಗ ಕೊಚ್ಚಿಗೆ ವಾಪಸ್​ ಆಗುತ್ತಿದ್ದೇವೆ. ನಮಗೀಗ ಸಂಪೂರ್ಣ ತೃಪ್ತಿಯಿದೆ. ಇಡೀ ತಂಡದ ಶ್ರಮದಿಂದ ಇಂಥದ್ದೊಂದು ಮಹತ್ವದ ಕಾರ್ಯ ಸಾಧಿಸಲು ಸಾಧ್ಯವಾಗಿದೆ ಎಂದು ಎ.ಕೆ.ಚಾವ್ಲಾ ತಿಳಿಸಿದ್ದಾರೆ.

ಯುದ್ಧ ನೌಕೆಯ ಸಿಸ್ಟಂ ಪ್ಯಾರಾಮೀಟರ್​ಗಳು ತೃಪ್ತಿದಾಯಕವಾಗಿ ಕೆಲಸ ಮಾಡುತ್ತಿವೆ. ನೌಕೆಯ ಒಟ್ಟಾರೆ ಕಾರ್ಯಕ್ಷಮತೆ, ಹಲ್, ವಿದ್ಯುತ್​ ಉತ್ಪಾದನೆ, ಪೂರೈಕೆ ಸೇರಿ ಎಲ್ಲ ವಿಭಾಗಗಳನ್ನೂ ಪ್ರಯೋಗ ಹಂತದಲ್ಲಿ ಪರೀಕ್ಷಿಸಲಾಗಿದೆ ಎಂದು ನೌಕಾಪಡೆ ಮಾಹಿತಿ ನೀಡಿದೆ. ಈ ಯುದ್ಧನೌಕೆ 262 ಮೀಟರ್​ ಉದ್ದವಾಗಿದ್ದು, 62 ಮೀಟರ್​ ಅಗಲವಾಗಿದೆ. 59 ಮೀಟರ್​ ಎತ್ತರವಿದೆ. ಒಟ್ಟಾರೆ 14 ಡೆಕ್​ಗಳಿವೆ.

ಇದನ್ನೂ ಓದಿ: ಬಿಗ್ ಬಾಸ್​ ಗೆದ್ದ ಮಂಜುಗೆ ವೆಲ್​ಕಮ್​ ಹೇಗಿತ್ತು? ಇಲ್ಲಿದೆ ವಿಡಿಯೋ

Senior Citizens Fixed Deposits: ಹಿರಿಯ ನಾಗರಿಕರಿಗೆ ಶೇ 7.25ರ ತನಕ ಬಡ್ಡಿ ದರ ನೀಡುವ ಟಾಪ್ 5 ಬ್ಯಾಂಕ್​ಗಳಿವು

Follow us on

Most Read Stories

Click on your DTH Provider to Add TV9 Kannada