ಇಂದು ಬಾಬ್ರಿ ಮಸೀದಿ ಧ್ವಂಸ ಕೇಸ್​ನ ಫೈನಲ್ ತೀರ್ಪು!

ಇಂದು ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ ದಿನ. ಯಾಕಂದ್ರೆ, ಬಾಬ್ರಿ ಮಸೀದಿ ಧ್ವಂಸ ಕೇಸ್ ಸಂಬಂಧ ಇಂದು ತೀರ್ಪು ಹೊರ ಬೀಳಲಿದೆ. ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿ. ಮುರುಳಿ ಮನೋಹರ ಜೋಶಿ. ಉಮಾ ಭಾರತಿ ಸೇರಿದಂತೆ 32 ಜನರ ವಿರುದ್ಧ ದಾಖಲಾಗಿದ್ದ ಕೇಸ್ ತೀರ್ಪು ಏನಾಗುತ್ತೆ ಅನ್ನೋದು ಕುತೂಹಲ ಕೆರಳಿಸಿದೆ. ಮಂದಿರ್ ವಹಿ ಬನಾಯೇಂಗೇ.. ಮಂದೀರ್ ವಹೀ ಬನಾಯೇಂಗೇ. ಬರೋಬ್ಬರಿ 28 ವರ್ಷಗಳ ಹಿಂದೆ ಲಾಲ್ ಕೃಷ್ಣ ಅಡ್ವಾಣಿ ಬಾಯಿಂದ ಹೊರ ಬಿದ್ದ ಇದೊಂದು ಘೋಷಣೆ. ಇಡೀ ದೇಶದಲ್ಲೇ […]

ಇಂದು ಬಾಬ್ರಿ ಮಸೀದಿ ಧ್ವಂಸ ಕೇಸ್​ನ ಫೈನಲ್ ತೀರ್ಪು!
Follow us
ಆಯೇಷಾ ಬಾನು
|

Updated on: Sep 30, 2020 | 8:31 AM

ಇಂದು ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ ದಿನ. ಯಾಕಂದ್ರೆ, ಬಾಬ್ರಿ ಮಸೀದಿ ಧ್ವಂಸ ಕೇಸ್ ಸಂಬಂಧ ಇಂದು ತೀರ್ಪು ಹೊರ ಬೀಳಲಿದೆ. ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿ. ಮುರುಳಿ ಮನೋಹರ ಜೋಶಿ. ಉಮಾ ಭಾರತಿ ಸೇರಿದಂತೆ 32 ಜನರ ವಿರುದ್ಧ ದಾಖಲಾಗಿದ್ದ ಕೇಸ್ ತೀರ್ಪು ಏನಾಗುತ್ತೆ ಅನ್ನೋದು ಕುತೂಹಲ ಕೆರಳಿಸಿದೆ.

ಮಂದಿರ್ ವಹಿ ಬನಾಯೇಂಗೇ.. ಮಂದೀರ್ ವಹೀ ಬನಾಯೇಂಗೇ. ಬರೋಬ್ಬರಿ 28 ವರ್ಷಗಳ ಹಿಂದೆ ಲಾಲ್ ಕೃಷ್ಣ ಅಡ್ವಾಣಿ ಬಾಯಿಂದ ಹೊರ ಬಿದ್ದ ಇದೊಂದು ಘೋಷಣೆ. ಇಡೀ ದೇಶದಲ್ಲೇ ದೊಡ್ಡ ಸಂಚಲನ ಮೂಡಿಸಿತ್ತು. ಅಡ್ವಾಣಿ ಆಸೆಯಂತೆಯೇ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲೇ ರಾಮ ಮಂದಿರ ನಿರ್ಮಾಣಕ್ಕೂ ಅಡಿಗಲ್ಲು ಬಿದ್ದಾಯ್ತು. ಆದ್ರೆ ಅಡ್ವಾಣಿ ಬೆನ್ನಿಗೇರಿದ ಸಂಕಷ್ಟ ಇನ್ನೂ ಕಡಿಮೆಯಾಗಿಲ್ಲ.

ಅಡ್ವಾಣಿ.. ಜೋಶಿ.. ಉಮಾ ಭಾರತಿಗೆ ಜೈಲಾ? ರಿಲೀಫಾ? ಯೆಸ್, 1992 ಡಿಸೆಂಬರ್ 6 ರಂದು ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಬಿಜೆಪಿ ಭೀಷ್ಮ ಎಲ್​.ಕೆ. ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾ ಭಾರತಿ ಸೇರಿದಂತೆ ಒಟ್ಟು 32 ಜನರ ವಿರುದ್ಧ ಕೇಸ್ ದಾಖಲಾಗಿತ್ತು. ಸೆಷನ್ ಕೋರ್ಟ್​ನಿಂದ ನಡೆದಿರೋ ವಿಚಾರಣೆ ಸಿಬಿಐ ವಿಶೇಷ ಕೋರ್ಟ್​ವರೆಗೂ ಬಂದಿತ್ತು. ಈಗ ಇಂದು ಲಖನೌನ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ಹೀಗಾಗೇ 28 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಫೈನಲ್ ಡೇ ಆಗಲಿದ್ದು. ಇಂದು ಈ ಮೂವರ ಪಾಲಿಗೂ ಜಡ್ಜ್​ಮೆಂಟ್ ಡೇ ಆಗಲಿದೆ.

ಹಾಗಿದ್ರೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಕೇಸ್​ ಹಿಸ್ಟರಿ ಏನು? ಕೇಸ್​ನಲ್ಲಿ ಅಡ್ವಾಣಿ ಸೇರಿದಂತೆ ಇತರರ ಮೇಲಿರೋ ಆರೋಪಗಳೇನು? ಆರೋಪ ಸಾಬೀತಾದ್ರೆ ಅಡ್ವಾಣಿಗೆ ಜೈಲು ಶಿಕ್ಷೆ ಆಗುತ್ತಾ? ಈ ಕೇಸ್​ನ ಕಂಪ್ಲೀಟ್ ಡಿಟೇಲ್ಸ್​ ಇಲ್ಲಿದೆ.

ಬಾಬ್ರಿ ಮಸೀದಿ ಧ್ವಂಸ ಕೇಸ್​ನ ಹಿಸ್ಟರಿ! ಅಂದಹಾಗೆ 1984ರಲ್ಲಿ ವಿಶ್ವ ಹಿಂದೂಪರಿಷತ್ ದೇಶದ ಉದ್ದಗಲಕ್ಕೂ ರಾಮ ಜನ್ಮ ಭೂಮಿ ಆಂದೋಲನ ಶುರುಮಾಡಿತ್ತು. ಬಾಬ್ರಿ ಮಸೀದಿ ಇದ್ದ ಸ್ಥಳದಲ್ಲಿ ರಾಮ ಮಂದಿರವಿತ್ತೆಂದು ವಾದಿಸಿ ಆಂದೋಲನಕ್ಕೆ ಧುಮುಕಿತ್ತು. ದುರಂತ ಅಂದ್ರೆ ವಿವಾದ ಕೋರ್ಟ್​ನಲ್ಲಿರುವಾಗಲೇ ಕರಸೇವಕರು ಡಿಸೆಂಬರ್ 6 1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಿದ್ರು. ಬಾಬ್ರಿ ಮಸೀದಿ ಧ್ವಂಸ ಕೇಸ್​ನಲ್ಲಿ ಅಡ್ವಾಣಿ ಸೇರಿದಂತೆ 32 ಜನರ ವಿರುದ್ಧ ಕೇಸ್ ದಾಖಲಾಗಿತ್ತು. ಐಪಿಸಿ ಸೆಕ್ಷನ್ 153 (A) ಅಡಿ ಧರ್ಮಗಳ ಆಧಾರದ ಮೇಲೆ ಧ್ವೇಷ ಬಿತ್ತಿದ ಆರೋಪ. 153ಬಿ ಅಡಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತಂದ ಆರೋಪ.

120ಬಿ ಅಡಿ ಕ್ರಿಮಿನಲ್ ಒಳಸಂಚು ನಡೆಸಿದ ಆರೋಪ ಹೊರಿಸಲಾಗಿತ್ತು. ಇಂದು ಈ ಕೇಸ್​ ಸಂಬಂಧ ತೀರ್ಪು ಪ್ರಕಟವಾಗೋ ಸಾಧ್ಯತೆ ಇದ್ದು ಈ ಸೆಕ್ಷನ್ ಗಳಡಿ ಆರೋಪ ಸಾಬೀತಾದರೆ 6 ತಿಂಗಳಿನಿಂದ ಐದು ವರ್ಷದವರೆಗೆ ಜೈಲು ಶಿಕ್ಷೆ ಸಾಧ್ಯತೆ ಇದೆ. ಜೈಲುಶಿಕ್ಷೆ ಜೊತೆಗೆ ದಂಡ ವಿಧಿಸುವ ಸಾಧ್ಯತೆಯೂ ಇದೆ. ಒಂದು ವೇಳೆ ಜೈಲು ಶಿಕ್ಷೆ ವಿಧಿಸಿದರೂ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿ ಜಾಮೀನು ಪಡೆಯಲು ಅವಕಾಶ ಇದೆ. ಒಂದು ವೇಳೆ ಪ್ರಕರಣದಿಂದ ಖುಲಾಸೆಗೊಳಿಸಿದರೇ ಆರೋಪಿಗಳು ನೆಮ್ಮದಿಯ ನಿಟ್ಟುಸಿರು ಬಿಡಬಹುದು.

ಸುದೀರ್ಘ 28 ವರ್ಷಗಳ ವರೆಗೆ ನಡೆದ ಈ ಕಾನೂನು ಹೋರಾಟದಲ್ಲಿ ಕೋರ್ಟ್​ನಲ್ಲಿ ಏನೇನಾಗಿದೆ ಅನ್ನೋದರ ಸಂಕ್ಷಿಪ್ತ ಮಾಹಿತಿ ನೋಡೋದಾದ್ರೆ..

ಕೋರ್ಟ್​ನಲ್ಲಿ ಏನೇನಾಗಿದೆ? ಎಲ್.ಕೆ.ಅಡ್ವಾಣಿ ಪರ ಹಿರಿಯ ವಕೀಲ ಕೆ.ಕೆ.ಮಿಶ್ರಾರಿಂದ ವಾದ ಮಂಡಿಸಿದ್ದು.. ಅಡ್ವಾಣಿಯವರು ಬಾಬ್ರಿ ಮಸೀದಿ ಧ್ವಂಸ ಘಟನೆಯಲ್ಲಿ ಭಾಗಿಯಾಗಿಲ್ಲ, ಅಡ್ವಾಣಿ ವಿರುದ್ಧ ಸುಳ್ಳು ಮತ್ತು ರಾಜಕೀಯ ಪ್ರೇರಿತ ಆರೋಪ ಮಾಡಲಾಗಿದೆ ಅಂತಾ ವಾದ ಮಾಡಿದ್ದಾರೆ. ಅಷ್ಟೇ ಅಲ್ಲ ಅಡ್ವಾಣಿಯವರನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಕ್ರಾಸ್ ಎಕ್ಸಾಮಿನೇಷನ್ ಮಾಡಲಾಗಿದ್ದು, ಈ ವೇಳೆ 100ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿರೋ ಅಡ್ವಾಣಿ ತಮ್ಮ ಆರೋಪ ನಿರಾಕರಿಸಿದ್ದಾರೆ.

ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಅಡ್ವಾಣಿ ಪರ ವಕೀಲರು ಅಡ್ವಾಣಿ ಪರವಾಗಿ ಹೇಳಿಕೆ ನೀಡುವಂಥ ಸಾಕ್ಷ್ಯಗಳನ್ನ ಹಾಜರುಪಡಿಸಿಲ್ಲ, ಯಾಕಂದ್ರೆ, 1992ರಲ್ಲಿ ಘಟನಾ ಸ್ಥಳದಲ್ಲಿದ್ದ ವ್ಯಕ್ತಿಗಳು ನಮಗೆ ಸಿಕ್ಕಿಲ್ಲ ಎಂದು ವಾದ ಮಂಡಿಸಿದ್ದಾರೆ. ಇನ್ನು ಸಿಬಿಐ ಪರ ವಕೀಲರು ಆರೋಪಿಗಳ ವಿರುದ್ಧ ಕೆಲ ಸಾಕ್ಷಿಗಳನ್ನ ಹಾಜರು ಪಡಿಸಿದ್ದು, ಅಡ್ವಾಣಿ ಹೇಳಿಕೆಯ ಪತ್ರಿಕಾ ವರದಿ, ವಿಡಿಯೋ ಸಾಕ್ಷಿಗಳನ್ನು ಕೋರ್ಟ್​ಗೆ ಸಲ್ಲಿದ್ದಾರೆ. ಆದ್ರೆ ಪತ್ರಿಕಾ ಹೇಳಿಕೆ, ವಿಡಿಯೋ ಸಾಕ್ಷ್ಯಗಳನ್ನ ಅಡ್ವಾಣಿ ತಳ್ಳಿಹಾಕಿದ್ದಾರೆ. ಆದ್ರೆ ಸಿಬಿಐ ಕೇಸ್ ಸಂಬಂಧ 351 ಸಾಕ್ಷಿಗಳನ್ನ, 600 ದಾಖಲೆಗಳನ್ನ ಕೋರ್ಟ್​ಗೆ ಸಲ್ಲಿಸಿದೆ.

ಹೀಗೆ ದೇಶವನ್ನೇ ತಲ್ಲಣಗೊಳಿಸಿದ್ದ ಕೇಸ್​ನ ಜಡ್ಜ್​ಮೆಂಟ್ ಡೇ ಬಂದೇ ಬಿಟ್ಟಿದೆ. ಇಂದು, 32 ಆರೋಪಿಗಳಿಗೆ ಕೋರ್ಟ್​ಗೆ ಹಾಜರಾಗುವಂತೆ ಹೇಳಿದೆ. ಆದ್ರೆ, ಅಡ್ವಾಣಿ, ಜೋಶಿ, ಉಮಾ ಭಾರತಿ ಕೋರ್ಟ್​ಗೆ ಹಾಜರಾಗೋ ಸಾಧ್ಯತೆ ಇಲ್ಲ ಅನ್ನೋ ಮಾಹಿತಿ ಸಿಕ್ಕಿದೆ. ಕೋರ್ಟ್​ಗೆ ಹಾಜರಾದ್ರೂ,, ಹಾಜರಾಗದೇ ಇದ್ರೂ, ಇಂದು ಬಿಜೆಪಿ ಪಾಲಿಗೆ ಜಡ್ಜ್​ಮೆಂಟ್ ಡೇ..

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ