
ಉತ್ತರಕಾಶಿ, ಜನವರಿ 26: ಉತ್ತರಾಖಂಡದ ಹಿಮಾಲಯ ಪರ್ವತದಲ್ಲಿ ನೆಲೆಗೊಂಡಿರುವ ಶತಮಾನಗಳಷ್ಟು ಹಳೆಯದಾದ ಬದರಿನಾಥ (Badrinath) ಮತ್ತು ಕೇದಾರನಾಥ ದೇವಾಲಯಗಳಿಗೆ ಶೀಘ್ರದಲ್ಲೇ ಹಿಂದೂಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ. ಹಿಂದೂಗಳನ್ನು ಹೊರತುಪಡಿಸಿ ಬೇರೆ ಧರ್ಮದವರಿಗೆ ಈ ದೇವಾಲಯಗಳಿಗೆ ಪ್ರವೇಶ ನಿಷೇಧಿಸಲು ತೀರ್ಮಾನಿಸಲಾಗಿದೆ. ಚಾರ್ ಧಾಮ್ ತೀರ್ಥಯಾತ್ರೆಯ ಭಾಗವಾಗಿರುವ ಈ 2 ದೇವಾಲಯಗಳಿಗೆ ಹಿಂದೂಯೇತರರನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗುವುದು ಎಂದು ಈ ದೇವಾಲಯಗಳನ್ನು ನಿರ್ವಹಿಸುವ ದೇವಾಲಯ ಸಂಸ್ಥೆ ಘೋಷಿಸಿದೆ.
ಬದರಿನಾಥ-ಕೇದಾರನಾಥ ಧಾಮ ಸೇರಿದಂತೆ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ (BKTC) ನಿಯಂತ್ರಿಸುವ ಎಲ್ಲಾ ದೇವಾಲಯಗಳಿಗೆ ಹಿಂದೂಯೇತರರ ನಿಷೇಧವು ಅನ್ವಯಿಸುತ್ತದೆ ಎಂದು ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಪ್ರಸ್ತಾವನೆಯನ್ನು ಮುಂಬರುವ ದೇವಾಲಯ ಸಮಿತಿ ಮಂಡಳಿ ಸಭೆಯಲ್ಲಿ ಅಂಗೀಕರಿಸಲಾಗುವುದು.
ಇದನ್ನೂ ಓದಿ: Kedarnath Yatra 2025: ಕೇದಾರನಾಥಕ್ಕೆ ಭೇಟಿ ನೀಡುವ ಮೊದಲು ಗೌರಿಕುಂಡದಲ್ಲಿ ಸ್ನಾನ ಮಾಡುವುದು ಏಕೆ?
ಈ ನಿರ್ಬಂಧವು ಗಂಗೋತ್ರಿ ಧಾಮಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಇದು ಮಾ ಗಂಗೆಯ ಚಳಿಗಾಲದ ವಾಸಸ್ಥಾನ ಎಂದು ಕರೆಯಲ್ಪಡುವ ಮುಖ್ಬಾಕ್ಕೂ ಅನ್ವಯಿಸುತ್ತದೆ. ಶ್ರೀ ಗಂಗೋತ್ರಿ ದೇವಾಲಯ ಸಮಿತಿಯ ಅಧ್ಯಕ್ಷ ಸುರೇಶ್ ಸೆಮ್ವಾಲ್ ಅವರು, ಹಿಂದೂಯೇತರರು ಧಾಮಕ್ಕೆ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಸಮಿತಿ ನಿರ್ಧರಿಸಿದೆ ಎಂದು ಹೇಳಿದ್ದಾರೆ. ಚಳಿಗಾಲದ ತಿಂಗಳುಗಳಲ್ಲಿ ಮುಖ್ಬಾದಲ್ಲಿ ಅದೇ ನಿಯಮ ಜಾರಿಯಲ್ಲಿರುತ್ತದೆ ಎಂದು ಅವರು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಹಿಮಚ್ಛಾದಿತ ಬೆಟ್ಟಗಳ ನಡುವಿನ ಕೇದಾರನಾಥ ದೇವಾಲಯ ಹೀಗಿದೆ
ಗಂಗೋತ್ರಿ ಧಾಮದ ದ್ವಾರಗಳು ಪ್ರಸ್ತುತ ಭಕ್ತರಿಗೆ ಮುಚ್ಚಲ್ಪಟ್ಟಿವೆ. ಚಳಿಗಾಲದ ತಿಂಗಳುಗಳಲ್ಲಿ ಭಾರೀ ಹಿಮಪಾತ ಮತ್ತು ತೀವ್ರ ಶೀತದಿಂದಾಗಿ, ಎಲ್ಲಾ 4 ಚಾರ್ ಧಾಮಗಳ ದ್ವಾರಗಳನ್ನು ವಾರ್ಷಿಕವಾಗಿ ಅಕ್ಟೋಬರ್ ಮತ್ತು ನವೆಂಬರ್ ನಡುವೆ ಮುಚ್ಚಲಾಗುತ್ತದೆ. ಅವು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮತ್ತೆ ತೆರೆಯುತ್ತವೆ. ಗಂಗೋತ್ರಿ ದೇವಾಲಯವು ಪ್ರವೇಶಿಸಲಾಗದ ಚಳಿಗಾಲದ 6 ತಿಂಗಳುಗಳಲ್ಲಿ ಭಕ್ತರು ಮುಖ್ಬಾ ಗ್ರಾಮದಲ್ಲಿರುವ ಗಂಗಾ ದೇವಿಯ ಚಳಿಗಾಲದ ವಾಸಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ