ದೇಶದಲ್ಲಿನ ವಿಮಾನ ನಿಲ್ದಾಣಗಳಲ್ಲಿ (airports) ಹೊಸ ತಂತ್ರಜ್ಞಾನವೊಂದನ್ನು ಅಳವಡಿಸಲಾಗುವುದು ಎಂದು ವಾಯುಯಾನ ಭದ್ರತಾ ಕಾವಲುಗಾರರಾಗಿರುವ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿಯು (BCAS)ಹೇಳಿದೆ. ಇನ್ನು ಮುಂದೆ ವಿಮಾನ ನಿಲ್ದಾಣಗಳಲ್ಲಿ ಕಂಪ್ಯೂಟರ್ ಟೊಮೊಗ್ರಫಿ ತಂತ್ರಜ್ಞಾನದ ಆಧಾರದ ಮೇಲೆ ಸ್ಕ್ಯಾನರ್ (Luggage scanning) ಸ್ಥಾಪಿಸಲಾಗುವುದು ಎಂದು ಹೇಳಿದೆ. ಇದರಿಂದ ಪ್ರಯಾಣಿಕರು ಹ್ಯಾಂಡ್ ಬ್ಯಾಗ್ನಿಂದ (hand baggage) ಎಲೆಕ್ಟ್ರಾನಿಕ್ ಸಾಧನ (ಶೂ, ಲೆದರ್ ಬೆಲ್ಟ್) ಅಥವಾ ಇನ್ನಿತರ ವಸ್ತುಗಳನ್ನು ಪರಿಶೀಲನೆ ಮಾಡಲು ತೆಗೆಯುವ ಅಗತ್ಯ ಬರುವುದಿಲ್ಲ ಎಂದು ಹೇಳಿದೆ. ಈ ತಂತ್ರಜ್ಞಾನವು BCAS ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಬರುತ್ತದೆ.
ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ನ ಜಂಟಿ ಮಹಾನಿರ್ದೇಶಕ ಜೈದೀಪ್ ಪ್ರಸಾದ್ ಬುಧವಾರ ಮಾತನಾಡಿ, ವಿಮಾನ ನಿಲ್ದಾಣಗಳಲ್ಲಿ ಕಂಪ್ಯೂಟರ್ ಟೊಮೊಗ್ರಫಿ ತಂತ್ರಜ್ಞಾನದ ಆಧಾರದ ಮೇಲೆ ಸ್ಕ್ಯಾನರ್‌ಗಳನ್ನು ಸ್ಥಾಪಿಸಲು ಪ್ರಸ್ತಾಪಿಸಿದೆ, ಈ ತಂತ್ರಜ್ಞಾನವು ಪ್ರಯಾಣಿಕರ ಹ್ಯಾಡ್ ಬ್ಯಾಗ್ನಲ್ಲಿರುವ(ಮೊಬೈಲ್, ಬ್ಲೂಟೂತ್, ಲೆದರ್ ಬೆಲ್ಟ್) ವಸ್ತುಗಳನ್ನು ಮೂರು ಆಯಾಮದಲ್ಲಿ ಪರಿಶೀಲನೆ ಮಾಡುತ್ತದೆ ನೀಡುತ್ತದೆ.
ಸ್ಕ್ಯಾನರ್ ಮೂಲಕ ಹೋಗುವ ಮೊದಲು ಪ್ರಯಾಣಿಕರು ತಮ್ಮ ಎಲೆಕ್ಟ್ರಾನಿಕ್ ಸಾಧನಗಳನ್ನು ಹ್ಯಾಂಡ್ ಬ್ಯಾಗೇಜ್‌ನಿಂದ ಹೊರತೆಗೆಯುವ ಅಗತ್ಯವಿಲ್ಲ ಎಂದು ಅವರು ಪಿಟಿಐಗೆ ತಿಳಿಸಿದರು. ಸ್ಕ್ಯಾನರ್‌ಗಳ ಸ್ಥಾಪನೆಯು ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
ಈ ತಂತ್ರಜ್ಞಾನದ ಪರಿಕಲ್ಪನೆ ಬರಲು ಮುಖ್ಯ ಕಾರಣ ಇತ್ತೀಚೆಗೆ ರಾಜ್ಯ ರಾಜಧಾನಿ ಬೆಂಗಳೂರು ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಶೀಲನೆ ಅವ್ಯವಸ್ಥೆಯಿಂದ ವಿಮಾನ ನಿಲ್ದಾಣ ಜನದಟ್ಟಣೆಯಿಂದ ಅನೇಕ ಸಮಸ್ಯೆಗಳು ಹೆಚ್ಚಾಗಿತ್ತು. ಇದನ್ನು ಪರಿಹಾರ ಮಾಡಲು ಈ ಕ್ರಮವನ್ನು ತರಲಾಗಿದೆ ಎಂದು ಹೇಳಲಾಗಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಸೂಕ್ಷ್ಮ ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಾದ ಮತ್ತು ಪ್ರಸ್ತಾಪಿಸಲಾದ ಕೆಲವು ತಂತ್ರಜ್ಞಾನಗಳಲ್ಲಿ ಕಂಪ್ಯೂಟರ್ ಟೊಮೊಗ್ರಫಿ ಸ್ಫೋಟಕ ಪತ್ತೆ ವ್ಯವಸ್ಥೆಗಳು (CT-EDS) ಯಂತ್ರಗಳು ಮತ್ತು ಡ್ಯುಯಲ್ ಜನರೇಟರ್ X-BIS ಯಂತ್ರಗಳು ಸೇರಿವೆ.
ಇದನ್ನು ಓದಿ:DigiYatra App: ಈಗ ವಿಮಾನ ಪ್ರಯಾಣ ತುಂಬಾ ಸುಲಭ: ಏನಿದು ಡಿಜಿಯಾತ್ರಾ ಸೇವೆ?, ಬಳಸುವುದು ಹೇಗೆ?
ಇದನ್ನು ದೆಹಲಿ, ಹೈದರಾಬಾದ್ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿದೆ. ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಫುಲ್ ಬಾಡಿ ಸ್ಕ್ಯಾನರ್ನನ್ನು ಹಾಗೂ ಆದ್ಯತೆಯ ಆಧಾರದ ಮೇಲೆ ವಿಮಾನ ನಿಲ್ದಾಣಗಳಲ್ಲಿ ಅತಿಸೂಕ್ಷ್ಮ ಹಂತ ಹಂತವಾಗಿ ಯೋಜಿಸಲಾಗಿದೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿಕೆ ಸಿಂಗ್ ಲೋಕಸಭೆಗೆ ತಿಳಿಸಿದರು.
ತಂತ್ರಜ್ಞಾನದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:29 pm, Wed, 21 December 22