DigiYatra App: ಈಗ ವಿಮಾನ ಪ್ರಯಾಣ ತುಂಬಾ ಸುಲಭ: ಏನಿದು ಡಿಜಿಯಾತ್ರಾ ಸೇವೆ?, ಬಳಸುವುದು ಹೇಗೆ?

Tech Tips: ಡಿಜಿಯಾತ್ರಾದ ಮೂಲಕ ವಿಮಾನದ ಪ್ರಯಾಣಿಕರು ಯಾವುದೇ ಅಡೆತಡೆಯಿಲ್ಲದೆ ಪ್ರಯಾಣ ಮಾಡುತ್ತಿದ್ದಾರೆ. ಹಾಗಾದರೆ ಈ ಡಿಜಿಯಾತ್ರಾ ಆ್ಯಪ್ ಅನ್ನು ಬಳಸುವುದು ಹೇಗೆ?, ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡೋಣ.

DigiYatra App: ಈಗ ವಿಮಾನ ಪ್ರಯಾಣ ತುಂಬಾ ಸುಲಭ: ಏನಿದು ಡಿಜಿಯಾತ್ರಾ ಸೇವೆ?, ಬಳಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
| Updated By: Vinay Bhat

Updated on:Dec 13, 2022 | 12:32 PM

ಇಂದು ಏರ್ಪೋರ್ಟ್​ನಲ್ಲಿ (Airport) ಪ್ರಯಾಣಿಕರಿಗೆ ಸುಲಭವಾಗಿ ಪ್ರಯಾಣ ಮಾಡಲು ಅನೇಕ ತಂತ್ರಜ್ಞಾನಗಳನ್ನು ಪ್ರಯೋಗಿಸಲಾಗುತ್ತಿದೆ. ಅವುಗಳಲ್ಲಿ ಡಿಜಿಯಾತ್ರಾ (DigiYatra App) ಕೂಡ ಒಂದು. ಈ ಹಿಂದೆ ವಿಮಾನ ನಿಲ್ದಾಣಗಳಲ್ಲಿ ಸಾಕಷ್ಟು ಪ್ರವೇಶಾತಿ ಪ್ರಕ್ರಿಯೆಗಳನ್ನು ಭೌತಿಕವಾಗಿ ಮಾಡಬೇಕಾಗಿತ್ತು. ಇದಕ್ಕೆ ಸಾಕಷ್ಟು ಸಮಯವೂ ಹಾಳಗುತ್ತಿತ್ತು. ಆದರೀಗ ಇದನ್ನೆಲ್ಲ ನಿವಾರಿಸುವಲ್ಲಿ ಡಿಜಿಯಾತ್ರಾ ಡಿಜಿಟಲ್ ಸೇವೆ ಸಹಕಾರಿ ಆಗಿದೆ. ಮುಖ ಗುರುತಿಸುವಿಕೆಯ ವ್ಯವಸ್ಥೆಯನ್ನು ಆಧರಿಸಿ ಪ್ರಯಾಣಿಕರ ಪ್ರವೇಶವನ್ನು ಡಿಜಿಯಾತ್ರಾ ಅನುಮತಿಸುತ್ತದೆ. ಇದರೊಂದಿಗೆ ವಿಮಾನ ನಿಲ್ದಾಣಗಳಲ್ಲಿ ಬೋರ್ಡಿಂಗ್‌ ಪಾಸ್‌ ಹಾಗೂ ಗುರುತಿನ ಪುರಾವೆಗೆ ಮುಕ್ತಿ ಸಿಕ್ಕಂತಾಗಿದೆ. ದೆಹಲಿ, ವಾರಾಣಸಿ ಮತ್ತು ಬೆಂಗಳೂರಿಗರು (Bengaluru) ಇದೀಗ ಡಿಜಿಯಾತ್ರಾದ ಮೂಲಕ ವಿಮಾನದ ಪ್ರಯಾಣಿಕರು ಯಾವುದೇ ಅಡೆತಡೆಯಿಲ್ಲದೆ ಪ್ರಯಾಣ ಮಾಡುತ್ತಿದ್ದಾರೆ. ಹಾಗಾದರೆ ಈ ಡಿಜಿಯಾತ್ರಾ ಆ್ಯಪ್ ಅನ್ನು ಬಳಸುವುದು ಹೇಗೆ?, ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡೋಣ.

ಡಿಜಿಯಾತ್ರಾದೊಂದಿಗೆ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕಾಗದರಹಿತ ಪ್ರವೇಶವಾಗಿರುತ್ತದೆ. ಮತ್ತು ಭದ್ರತಾ ತಪಾಸಣೆ ಸೇರಿದಂತೆ ವಿವಿಧ ಚೆಕ್ಕಿಂಗ್ ಬೋರ್ಡ್​ಗಳಲ್ಲಿ ಮುಖ ಗುರುತಿಸುವಿಕೆಯ ವ್ಯವಸ್ಥೆಯನ್ನು ಆಧರಿಸಿ ಪ್ರಯಾಣಿಕರ ಡೇಟಾವನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲು ಸಹಾಯಕವಾಗಿದೆ. ಇದರಿಂದ ಪ್ರಯಾಣಿಕರು ಬೋರ್ಡಿಂಗ್ ಪಾಸ್ ಅಥವಾ ಸೆಕ್ಯೂರಿಟಿ ಚೆಕ್ಕಿಂಗ್​ಗಾಗಿ ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲುವ ತಾಪತ್ರಯ ಇರುವುದಿಲ್ಲ. ಅಂದರೆ ಈ ಆ್ಯಪ್ ಮೂಲಕ ವಿಮಾನ ನಿಲ್ದಾಣದ ಪ್ರವೇಶ, ಭದ್ರತಾ ತಪಾಸಣೆ, ಏರ್‌ಪ್ಲೇನ್ ಬೋರ್ಡಿಂಗ್ ಮುಂತಾದ ಎಲ್ಲಾ ಚೆಕ್‌ಪಾಯಿಂಟ್‌ಗಳು ಮುಖ ಗುರುತಿಸುವಿಕೆ ತಂತ್ರಜ್ಞಾನದ ಆಧಾರದ ಮೇಲೆ ಪ್ರಯಾಣಿಕರ ನಮೂದುಗಳನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸುತ್ತವೆ.

Tech Tips: ನಿಮ್ಮ ವಾಟ್ಸ್​ಆ್ಯಪ್ ಚಾಟ್ ಬೇರೆಯವರು ಕದ್ದು ಓದುತ್ತಿರಬಹುದು: ಹೇಗೆ ತಿಳಿಯುವುದು?

ಇದನ್ನೂ ಓದಿ
Image
Tech Tips: ವಾಟ್ಸ್​ಆ್ಯಪ್​ನಲ್ಲಿ​ ಕನ್ನಡ ಭಾಷೆ ಬಳಸುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
Image
Tata Apple stores: ದೇಶದಲ್ಲಿ ನೂರು ವಿಶೇಷ ಆ್ಯಪಲ್ ಸ್ಟೋರ್​ ಆರಂಭಿಸಲಿದೆ ಟಾಟಾ ಗ್ರೂಪ್; ವರದಿ
Image
Xiaomi 13: ಮಾರುಕಟ್ಟೆಗೆ ಅಪ್ಪಳಿಸಿತು ಶವೋಮಿ 13 ಸರಣಿ: ಇದರ ಫೀಚರ್ಸ್ ಕೇಳಿದ್ರೆ ದಂಗಾಗ್ತೀರ
Image
Year Ender 2022: ಈ ವರ್ಷ 15,000 ರೂ. ಒಳಗೆ ರಿಲೀಸ್ ಆದ ಟಾಪ್ 5 ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ

ಡಿಜಿಯಾತ್ರವನ್ನು ಹೇಗೆ ಬಳಸುವುದು?:

  • ಬಯೋಮೆಟ್ರಿಕ್ ನೋಂದಣಿ
  • ಪ್ಲೇ ಸ್ಟೋರ್ ಅಥವಾ ಐಒಎಸ್​ನಿಂದ ಡಿಜಿಯಾತ್ರಾ ಆಪ್ ಡೌನ್ ಲೋಡ್ ಮಾಡಿ
  • ನಿಮ್ಮ ಫೋನ್ ಸಂಖ್ಯೆ ಮತ್ತು ಒಟಿಪಿ ಬಳಸಿ ನೋಂದಣಿ ಮಾಡಿ
  • ಡಿಜಿ ಲಾಕರ್ ಬಳಸಿ ಆಧಾರ್ ಮಾಹಿತಿ ನೀಡಿ
  • ಡಿಜಿಲಾಕರ್ ನೋಂದಣಿ ಆಗಿರದಿದ್ದರೆ ನೋಂದಣಿ ಮಾಡಿಕೊಳ್ಳಿ
  • ಸೆಲ್ಫಿ ಕ್ಲಿಕ್ಕಿಸಿಕೊಳ್ಳಿ. ಸೆಲ್ಫಿಯ ಮೌಲ್ಯೀಕರಣವನ್ನು ಆಧಾರ್ ಮತ್ತು ಇನ್ನಿತರ ಮಾಹಿತಿಗಳಿಂದ ಮಾಡಲಾಗುತ್ತದೆ
  • ಸ್ಕ್ಯಾನ್ ಬೋರ್ಡಿಂಗ್ ಪಾಸ್ (ಪೂರ್ವಾಪೇಕ್ಷಿತ ಚೆಕ್-ಇನ್) ಸ್ಕ್ಯಾನಿಂಗ್ ಉದ್ದೇಶಗಳಿಗಾಗಿ ಫೋನ್ ಹೊರತುಪಡಿಸಿ
  • ಬೇರೆ ಸಾಧನದಲ್ಲಿ ಭೌತಿಕ ಬೋರ್ಡಿಂಗ್ ಪಾಸ್ ಅಥವಾ ಬೋರ್ಡಿಂಗ್ ಪಾಸ್ QR ಕೋಡ್ / ಬಾರ್ ಕೋಡ್ ಹೊಂದಿರಬೇಕು
  • ವಿಮಾನ ನಿಲ್ದಾಣದಲ್ಲಿ ಈ ಮಾಹಿತಿ ಮತ್ತು ಬೋರ್ಡಿಂಗ್ ಪಾಸ್ ಮಾಹಿತಿ ಹಂಚಿಕೊಳ್ಳಿ

ಹೇಗೆ ಕಾರ್ಯ ನಿರ್ವಹಿಸುತ್ತದೆ?:

ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕಿಯೋಸ್ಕ್​ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಅವುಗಳ ಮೂಲಕ ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದೆ. ಪ್ರಯಾಣಿಕರು ಮೊದಲು ದ್ವಾರದ ಬಳಿ ಇರುವ ಕಿಯೋಸ್ಕ್ ಯಂತ್ರದಲ್ಲಿ ದಾಖಲೆಗಳ ಮಾಹಿತಿ ನಮೂದಿಸಬೇಕು. ಮುಖ ಹಾಗೂ ಕಣ್ಣಿನ ಗುರುತನ್ನು ಯಂತ್ರದಲ್ಲಿ ದಾಖಲಿಸಬೇಕು. ನಂತರ ನಿಲ್ದಾಣದ ಒಳಗೆ ಇರುವ ಕಿಯೋಸ್ಕ್​ ಯಂತ್ರಗಳಲ್ಲಿ ಮುಖವನ್ನಷ್ಟೇ ತೋರಿಸಿ, ಸರಾಗವಾಗಿ ಮುಂದೆ ಹೋಗಬಹುದು. ನಿಲ್ದಾಣದಿಂದ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರು ಒಂದು ಬಾರಿ ನೋಂದಣಿ ಮಾಡುವುದು ಕಡ್ಡಾಯ. ಅದಾದ ನಂತರ ಜೀವನ ಪರ್ಯಂತ ಬೋರ್ಡಿಂಗ್ ಪಾಸ್ ಇಲ್ಲದೇ ನಿಲ್ದಾಣದಲ್ಲಿ ಓಡಾಡಬಹುದು. ನೂತನ ತಂತ್ರಜ್ಞಾನದ ಸೌಲಭ್ಯ ದೇಶೀಯ ವಿಮಾನಗ,ಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮಾತ್ರ ಸಿಗಲಿದೆ ಹಾಗೂ ವಿದೇಶಿ ಪ್ರಜೆಗಳಿಗೆ ಈ ಸೌಲಭ್ಯ ಅನ್ವಯವಾಗುವುದಿಲ್ಲ.

ವಿಮಾನ ನಿಲ್ದಾಣದಲ್ಲಿ ಇ ಗೇಟ್ ಪ್ರವೇಶ:

  • ಪ್ರಯಾಣಿಕರು ಇ ಗೇಟ್ ಮೂಲಕ ಪ್ರವೇಶಿಸಬೇಕು
  • ಬಾರ್ ಕೋಡ್ ಇರುವ ಬೋರ್ಡಿಂಗ್ ಪಾಸ್ ಸ್ಕ್ಯಾನ್ ಮಾಡಿ
  • ಇ ಗೇಟ್ ನಲ್ಲಿ ಸ್ಥಾಪಿಸಿರುವ ಫೇಷಿಯಲ್ ರೆಕಗ್ನಿಷನ್ ಸಿಸ್ಟಂ ಕ್ಯಾಮೆರಾಕ್ಕೆ ಮುಖ ತೋರಿಸಿ
  • ಇದು ಪ್ರಯಾಣಿಕರ ಐಡಿ ಮತ್ತು ಪ್ರಯಾಣದ ಮಾಹಿತಿಯನ್ನು ಪರಿಶೀಲಿಸುತ್ತದೆ. ಪರಿಶೀಲನೆ ನಂತರ ಇ ಗೇಟ್ ತೆರೆಯುತ್ತದೆ

ಭದ್ರತಾ ತಪಾಸಣೆ ವೇಳೆ ಅನುಸರಿಸಬೇಕಾದ ಕ್ರಮಗಳು

  • ಪ್ರಯಾಣಿಕರು ಪ್ರವೇಶ ಇ-ಗೇಟ್‌ಗೆ ಬರಬೇಕು
  • ಇ-ಗೇಟ್‌ನಲ್ಲಿ ಸ್ಥಾಪಿಸಲಾದ FRS ಕ್ಯಾಮೆರಾ ನೋಡಿ
  • ಸಿಸ್ಟಂ ಪ್ರಯಾಣಿಕರ ಐಡಿ ಮತ್ತು ಪ್ರಯಾಣ ದಾಖಲೆಯನ್ನು ಮೌಲ್ಯೀಕರಿಸುತ್ತದೆ
  • ಪ್ರಯಾಣಿಕರಿಗೆ ಭದ್ರತಾ ತಪಾಸಣೆಗೆ ಅವಕಾಶ ನೀಡಲು ಇ-ಗೇಟ್ ತೆರೆಯುತ್ತದೆ

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:32 pm, Tue, 13 December 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್