ಟೇಸ್ಟ್ ಆಫ್ ಇಂಡಿಯಾ ರೆಸ್ಟೋರೆಂಟ್ನಲ್ಲಿ ಪಾಕಿಸ್ತಾನಿ ಆಹಾರ ಮೇಳ; ಬ್ಯಾನರ್ ಹಾಕುತ್ತಿದ್ದಂತೆ ಬೆಂಕಿ ಇಟ್ಟ ಭಜರಂಗದಳ
ಮಾಧ್ಯಮದವರೊಂದಿಗೆ ಮಾತನಾಡಿದ ಭಜರಂಗ ದಳದ ದಕ್ಷಿಣ ಗುಜರಾತ್ ಅಧ್ಯಕ್ಷ ದೇವಿಪ್ರಸಾದ್ ದುಬೆ, ಇಂಥ ಉತ್ಸವಗಳನ್ನೆಲ್ಲ ಯಾವುದೇ ರೆಸ್ಟೋರೆಂಟ್ನಲ್ಲೂ ನಡೆಸಲು ಬಿಡುವುದಿಲ್ಲ ಎಂದಿದ್ದಾರೆ.
ಪಾಕಿಸ್ತಾನಿ ಆಹಾರೋತ್ಸವ (Pakistani Food Festival) ಎಂದು ದೊಡ್ಡದಾಗಿ ಬರೆದು ಹಾಕಲಾಗಿದ್ದ ಬ್ಯಾನರ್ನ್ನು ಕೆಳಗಿಳಿಸಿ, ಅದಕ್ಕೆ ಬೆಂಕಿ ಹಚ್ಚಿದ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ಹೀಗೆ ಪಾಕ್ ಆಹಾರೋತ್ಸವದ ಬ್ಯಾನರ್ಗೆ ಬೆಂಕಿ ಹಾಕಿದ್ದು ಬಜರಂಗದಳದ ಕಾರ್ಯಕರ್ತರು. ಹಾಗೇ, ರೆಸ್ಟೋರೆಂಟ್ವೊಂದು ತಾನು ಪಾಕಿಸ್ತಾನಿ ಆಹಾರದ ಬಗ್ಗೆ ಪ್ರಚಾರ ಮಾಡುತ್ತಿರುವುದಾಗಿ ತಪ್ಪು ಒಪ್ಪಿಕೊಂಡಿದೆ ಎಂದು ಬಲಪಂಥೀಯ ನಾಯಕರೊಬ್ಬರು ತಿಳಿಸಿದ್ದಾರೆ.
ಸೂರತ್ನ ರಿಂಗ್ರೋಡ್ ಪ್ರದೇಶದಲ್ಲಿ ಟೇಸ್ಟ್ ಆಫ್ ಇಂಡಿಯಾ ರೆಸ್ಟೋರೆಂಟ್ ಡಿಸೆಂಬರ್ 12-22ರವರೆಗೆ ಆಹಾರ ಮೇಳವನ್ನು ಆಯೋಜಿಸಿತ್ತು. ಆದರೆ ಅದಕ್ಕೆ ಪಾಕಿಸ್ತಾನಿ ಆಹಾರೋತ್ಸವ ಎಂಬ ದೊಡ್ಡದಾದ ಬ್ಯಾನರ್ ಹಾಕಲಾಗಿತ್ತು. ಅದನ್ನು ನೋಡುತ್ತಿದ್ದಂತೆ ಭಜರಂಗದಳದ ಕಾರ್ಯಕರ್ತರು ಕೆಂಡಾಮಂಡಲರಾಗಿದ್ದಾರೆ. ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತೆರಳಿ ಬ್ಯಾನರ್ನ್ನು ಕಿತ್ತೆಸೆದಿದ್ದಾರೆ. ನಂತರ ಅದಕ್ಕೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಅವರು ಜೈ ಶ್ರೀರಾಮ್ ಮತ್ತು ಹರಹರ ಮಹದೇವ್ ಎಂದು ಘೋಷಣೆ ಕೂಗುತ್ತಿದ್ದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಭಜರಂಗ ದಳದ ದಕ್ಷಿಣ ಗುಜರಾತ್ ಅಧ್ಯಕ್ಷ ದೇವಿಪ್ರಸಾದ್ ದುಬೆ, ಇಂಥ ಉತ್ಸವಗಳನ್ನೆಲ್ಲ ಯಾವುದೇ ರೆಸ್ಟೋರೆಂಟ್ನಲ್ಲೂ ನಡೆಸಲು ಬಿಡುವುದಿಲ್ಲ. ಆಹಾರ ಮೇಳ ಆಯೋಜಿಸಿದ್ದ ರೆಸ್ಟೋರೆಂಟ್ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ. ಹಾಗೇ ಈ ಟೇಸ್ಟ್ ಆಫ್ ಇಂಡಿಯಾ ರೆಸ್ಟೋರೆಂಟ್ ನಡೆಸುತ್ತಿರುವ ಶುಗರ್ ಎನ್ ಸ್ಪೈಸ್ ರೆಸ್ಟೋರೆಂಟ್ನ ಮಾಲೀಕ ಸಂದೀಪ್ ದಾವರ್, ನಾವು ಮೊಘಲಾಯಿ ಪಾಕಪದ್ಧತಿಯ ಆಹಾರವನ್ನು ಕೊಡುವುದನ್ನು ಮುಂದುವರಿಸುತ್ತೇವೆ. ಆದರೆ ಪಾಕಿಸ್ತಾನ ಎಂಬ ಹೆಸರನ್ನು ತೆಗೆದುಹಾಕುತ್ತೇವೆ. ಯಾಕೆಂದರೆ ಇದು ಹಲವರ ಭಾವನೆಗಳನ್ನು ನೋಯಿಸುತ್ತದೆ ಎಂಬುದು ನಮಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.
Gujarat | Bajrang Dal activists on Monday took down and set on fire a huge flex banner announcing ‘Pakistani food festival’ to be organised at a restaurant in Surat amid chants of ‘Jai Shri Ram’ and ‘Har Har Mahadev’ pic.twitter.com/ZR5cCs3pQh
— ANI (@ANI) December 13, 2021
ಇದನ್ನೂ ಓದಿ: ಎಮ್ ಜಿ ಮೋಟಾರ್ ಭಾರತೀಯ ಮಾರ್ಕೆಟ್ಗೆ ಸೂಕ್ತವೆನಿಸುವ ಇಲೆಕ್ಟ್ರಿಕ್ ಕಾರನ್ನು ಇನ್ನೆರಡು ವರ್ಷಗಳಲ್ಲಿ ಲಾಂಚ್ ಮಾಡಲಿದೆ
Published On - 8:37 am, Tue, 14 December 21