ಟೇಸ್ಟ್​ ಆಫ್​ ಇಂಡಿಯಾ ರೆಸ್ಟೋರೆಂಟ್​​ನಲ್ಲಿ ಪಾಕಿಸ್ತಾನಿ ಆಹಾರ ಮೇಳ; ಬ್ಯಾನರ್​ ಹಾಕುತ್ತಿದ್ದಂತೆ ಬೆಂಕಿ ಇಟ್ಟ ಭಜರಂಗದಳ

| Updated By: Lakshmi Hegde

Updated on: Dec 14, 2021 | 8:38 AM

ಮಾಧ್ಯಮದವರೊಂದಿಗೆ ಮಾತನಾಡಿದ ಭಜರಂಗ ದಳದ ದಕ್ಷಿಣ ಗುಜರಾತ್​ ಅಧ್ಯಕ್ಷ ದೇವಿಪ್ರಸಾದ್​ ದುಬೆ, ಇಂಥ ಉತ್ಸವಗಳನ್ನೆಲ್ಲ ಯಾವುದೇ ರೆಸ್ಟೋರೆಂಟ್​​ನಲ್ಲೂ ನಡೆಸಲು ಬಿಡುವುದಿಲ್ಲ ಎಂದಿದ್ದಾರೆ.

ಟೇಸ್ಟ್​ ಆಫ್​ ಇಂಡಿಯಾ ರೆಸ್ಟೋರೆಂಟ್​​ನಲ್ಲಿ ಪಾಕಿಸ್ತಾನಿ ಆಹಾರ ಮೇಳ; ಬ್ಯಾನರ್​ ಹಾಕುತ್ತಿದ್ದಂತೆ ಬೆಂಕಿ ಇಟ್ಟ ಭಜರಂಗದಳ
ಬ್ಯಾನರ್​ ಕಿತ್ತಿರುವ ದೃಶ್ಯ
Follow us on

ಪಾಕಿಸ್ತಾನಿ ಆಹಾರೋತ್ಸವ (Pakistani Food Festival) ಎಂದು ದೊಡ್ಡದಾಗಿ ಬರೆದು ಹಾಕಲಾಗಿದ್ದ ಬ್ಯಾನರ್​​ನ್ನು ಕೆಳಗಿಳಿಸಿ, ಅದಕ್ಕೆ ಬೆಂಕಿ ಹಚ್ಚಿದ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಹೀಗೆ ಪಾಕ್​ ಆಹಾರೋತ್ಸವದ ಬ್ಯಾನರ್​ಗೆ ಬೆಂಕಿ ಹಾಕಿದ್ದು ಬಜರಂಗದಳದ ಕಾರ್ಯಕರ್ತರು. ಹಾಗೇ, ರೆಸ್ಟೋರೆಂಟ್​ವೊಂದು ತಾನು ಪಾಕಿಸ್ತಾನಿ ಆಹಾರದ ಬಗ್ಗೆ ಪ್ರಚಾರ ಮಾಡುತ್ತಿರುವುದಾಗಿ ತಪ್ಪು ಒಪ್ಪಿಕೊಂಡಿದೆ ಎಂದು ಬಲಪಂಥೀಯ ನಾಯಕರೊಬ್ಬರು ತಿಳಿಸಿದ್ದಾರೆ.  

ಸೂರತ್​ನ ರಿಂಗ್​ರೋಡ್​​ ಪ್ರದೇಶದಲ್ಲಿ ಟೇಸ್ಟ್ ಆಫ್​ ಇಂಡಿಯಾ ರೆಸ್ಟೋರೆಂಟ್​ ಡಿಸೆಂಬರ್​ 12-22ರವರೆಗೆ ಆಹಾರ ಮೇಳವನ್ನು ಆಯೋಜಿಸಿತ್ತು. ಆದರೆ ಅದಕ್ಕೆ ಪಾಕಿಸ್ತಾನಿ ಆಹಾರೋತ್ಸವ ಎಂಬ ದೊಡ್ಡದಾದ ಬ್ಯಾನರ್ ಹಾಕಲಾಗಿತ್ತು. ಅದನ್ನು ನೋಡುತ್ತಿದ್ದಂತೆ ಭಜರಂಗದಳದ ಕಾರ್ಯಕರ್ತರು ಕೆಂಡಾಮಂಡಲರಾಗಿದ್ದಾರೆ. ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತೆರಳಿ ಬ್ಯಾನರ್​​ನ್ನು ಕಿತ್ತೆಸೆದಿದ್ದಾರೆ. ನಂತರ ಅದಕ್ಕೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಅವರು ಜೈ ಶ್ರೀರಾಮ್​ ಮತ್ತು ಹರಹರ ಮಹದೇವ್​ ಎಂದು ಘೋಷಣೆ ಕೂಗುತ್ತಿದ್ದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಭಜರಂಗ ದಳದ ದಕ್ಷಿಣ ಗುಜರಾತ್​ ಅಧ್ಯಕ್ಷ ದೇವಿಪ್ರಸಾದ್​ ದುಬೆ, ಇಂಥ ಉತ್ಸವಗಳನ್ನೆಲ್ಲ ಯಾವುದೇ ರೆಸ್ಟೋರೆಂಟ್​​ನಲ್ಲೂ ನಡೆಸಲು ಬಿಡುವುದಿಲ್ಲ. ಆಹಾರ ಮೇಳ ಆಯೋಜಿಸಿದ್ದ ರೆಸ್ಟೋರೆಂಟ್ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.  ಹಾಗೇ ಈ ಟೇಸ್ಟ್ ಆಫ್​ ಇಂಡಿಯಾ ರೆಸ್ಟೋರೆಂಟ್​​ ನಡೆಸುತ್ತಿರುವ ಶುಗರ್​ ಎನ್​ ಸ್ಪೈಸ್​ ರೆಸ್ಟೋರೆಂಟ್​ನ ಮಾಲೀಕ ಸಂದೀಪ್​ ದಾವರ್​, ನಾವು ಮೊಘಲಾಯಿ ಪಾಕಪದ್ಧತಿಯ ಆಹಾರವನ್ನು ಕೊಡುವುದನ್ನು ಮುಂದುವರಿಸುತ್ತೇವೆ. ಆದರೆ ಪಾಕಿಸ್ತಾನ ಎಂಬ ಹೆಸರನ್ನು ತೆಗೆದುಹಾಕುತ್ತೇವೆ. ಯಾಕೆಂದರೆ ಇದು ಹಲವರ ಭಾವನೆಗಳನ್ನು ನೋಯಿಸುತ್ತದೆ ಎಂಬುದು ನಮಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಮ್ ಜಿ ಮೋಟಾರ್ ಭಾರತೀಯ ಮಾರ್ಕೆಟ್​​ಗೆ ಸೂಕ್ತವೆನಿಸುವ ಇಲೆಕ್ಟ್ರಿಕ್ ಕಾರನ್ನು ಇನ್ನೆರಡು ವರ್ಷಗಳಲ್ಲಿ ಲಾಂಚ್ ಮಾಡಲಿದೆ

Published On - 8:37 am, Tue, 14 December 21