Bajrang Singh: ಎನ್​​ಎಸ್​ಜಿಯ ಮಾಜಿ ಕಮಾಂಡೋ ಈಗ ಡ್ರಗ್ ಕಿಂಗ್​ಪಿನ್

ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ)ಯ ಮಾಜಿ ಕಮಾಂಡೋ ಮಾದಕವಸ್ತು ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಭಜರಂಗ್ ಸಿಂಗ್ ಮುಂಬೈನಲ್ಲಿ 26/11 ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ರಾಜಸ್ಥಾನ ಪೊಲೀಸರು ಈಗ ಅವರನ್ನು ಗಾಂಜಾ ಕಳ್ಳಸಾಗಣೆ ದಂಧೆಯ ಕಿಂಗ್‌ಪಿನ್ ಎಂದು ಘೋಷಿಸಿದ್ದಾರೆ. ಬುಧವಾರ ರಾತ್ರಿ ಚುರುವಿನಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Bajrang Singh: ಎನ್​​ಎಸ್​ಜಿಯ ಮಾಜಿ ಕಮಾಂಡೋ ಈಗ ಡ್ರಗ್ ಕಿಂಗ್​ಪಿನ್
ಕ್ರೈಂ

Updated on: Oct 03, 2025 | 1:07 PM

ರಾಜಸ್ಥಾನ, ಅಕ್ಟೋಬರ್ 03: ಮುಂಬೈನಲ್ಲಿ  2008ರ ನವೆಂಬರ್ 26ರಂದು  ನಡೆದ ಭಯೋತ್ಪಾದಕ ದಾಳಿ(Terrorist Attack)ಯ ಸಮಯದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿದ್ದ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ)ಯ ಮಾಜಿ ಕಮಾಂಡೋ ಬಜರಂಗ್ ಸಿಂಗ್ ಈಗ ಡ್ರಗ್ ಕಿಂಗ್​ಪಿನ್  ಎಂಬ ಕುಖ್ಯಾತಿ ಪಡೆದಿದ್ದಾರೆ. ಅವರನ್ನು ಗಾಂಜಾ ಕಳ್ಳಸಾಗಣೆ ಗ್ಯಾಂಗ್‌ನ ಕಿಂಗ್‌ಪಿನ್ ಎಂಬ ಆರೋಪ ಹೊರಿಸಿ ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಮಾತಿಗೆ ಇವರೇ ಸಾಕ್ಷಿ.

ಬುಧವಾರ ತಡರಾತ್ರಿ ಚುರುವಿನ ರತನ್‌ಗಢದಲ್ಲಿ ಬಜರಂಗ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿ) ವಿಕಾಸ್ ಕುಮಾರ್ ತಿಳಿಸಿದ್ದಾರೆ. ತೆಲಂಗಾಣ ಮತ್ತು ಒಡಿಶಾದಿಂದ ರಾಜಸ್ಥಾನಕ್ಕೆ ಗಾಂಜಾ ಕಳ್ಳಸಾಗಣೆ ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ ಮತ್ತು ಅವರಿಂದ 200ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳೀಯ ಚುನಾವಣೆಗಳಲ್ಲಿ ಸ್ಪಧಿಸಿದ್ದರು, ಆದರೆ ಸೋತರು, ರಾಕೀಯದಲ್ಲಿದ್ದಾಗ ಕ್ರಿಮಿನಲ್ಸ್​ಗಳ ಸಂಪರ್ಕಕ್ಕೆ ಬಂದಿದ್ದರು.

ಮಾದಕವಸ್ತು ಕಳ್ಳಸಾಗಣೆ ಗ್ಯಾಂಗ್‌ನ ಕಿಂಗ್‌ಪಿನ್ ರಾಜಸ್ಥಾನದ ಸಿಕಾರ್ ಜಿಲ್ಲೆಯ ನಿವಾಸಿ. ಅವರನ್ನು ಹಿಡಿದುಕೊಟ್ಟವರಿಗೆ 25,000 ರೂ. ಬಹುಮಾನ ನೀಡುವುದಾಗಿ ಐಜಿ ಹೇಳಿದ್ದರು. ರಾಜಸ್ಥಾನ ಎಟಿಎಸ್ ಮತ್ತು ಮಾದಕವಸ್ತು ವಿರೋಧಿ ಕಾರ್ಯಪಡೆ (ಎಎನ್‌ಟಿಎಫ್) ಆಪರೇಷನ್ ಗಾಂಜನೇಯವನ್ನು ಯಶಸ್ವಿಯಾಗಿ ನಡೆಸಿತು, ಇದರ ಪರಿಣಾಮವಾಗಿ ಬಜರಂಗ್ ಸಿಂಗ್ ಬಂಧಿಸಲಾಗಿದೆ.

ಭಜರಂಗ್ ಸಿಂಗ್ ಅವರನ್ನು ಬಂಧಿಸಲು ಎರಡು ತಿಂಗಳ ಕಾಲ ಕಾರ್ಯಾಚರಣೆ ನಡೆಸಲಾಯಿತು ಮತ್ತು ಅವರು ಯಾವಾಗಲೂ ವಿಶ್ವಾಸಾರ್ಹ ಒರಿಯಾ ಅಡುಗೆಯವರೊಂದಿಗೆ ಪ್ರಯಾಣಿಸುತ್ತಿದ್ದರು ಎಂಬ ಸುಳಿವಿನ ಮೇಲೆ ಅವರನ್ನು ಪತ್ತೆ ಮಾಡಲಾಗಿದೆ.

ಮತ್ತಷ್ಟು ಓದಿ: ನಾವು ಪಾಕಿಸ್ತಾನದೊಳಗೆ ದಾಳಿ ಮಾಡಲು ಹಿಂಜರಿಯುವುದಿಲ್ಲ; ಬೆಲ್ಜಿಯಂನಲ್ಲಿ ಸಚಿವ ಜೈಶಂಕರ್ ಎಚ್ಚರಿಕೆ

ಈ ಬಂಧನದಿಂದ ಒಡಿಶಾ ಮತ್ತು ತೆಲಂಗಾಣದಿಂದ ರಾಜಸ್ಥಾನದಿಂದ ಹೋಗುವ ದೊಡ್ಡ ಪ್ರಮಾಣದ ಅಕ್ರಮ ಮಾದಕವಸ್ತು ಸಾಗಣೆಯನ್ನು ತಡೆದಂತಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಜರಂಗ್ ಸಿಂಗ್ 10 ನೇ ತರಗತಿ ಮುಗಿಸಿದ ನಂತರ ಎನ್​​ಎಸ್​ಜಿಗೆ ಸೇರಿದ್ದು, ಅವರು 2008 ರಲ್ಲಿ 26/11 ಮುಂಬೈ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸಿದ ಕಮಾಂಡೋ ತಂಡದ ಭಾಗವಾಗಿದ್ದರು. 2021 ರಲ್ಲಿ ನಿವೃತ್ತಿ ಹೊಂದಿ ರಾಜಕೀಯದಲ್ಲಿ ವಿಫಲವಾದ ನಂತರ, ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:06 pm, Fri, 3 October 25