ಬಳ್ಳಾರಿ ಗಡಿ ಭಾಗದ ದೇವರಗುಡ್ಡ ಜಾತ್ರೆಯಲ್ಲಿ ದೊಣ್ಣೆಗಳಿಂದ ಬಡಿದಾಡುವ ವಿಶಿಷ್ಟ ಸಂಪ್ರದಾಯ: ಹೊಡೆದಾಟದಲ್ಲಿ ಇಬ್ಬರು ಸಾವು
ಆಂಧ್ರ ಪ್ರದೇಶದ ದೇವರಗುಡ್ಡ ಜಾತ್ರೆಯಲ್ಲಿ ದೊಣ್ಣೆಗಳಿಂದ ಬಡಿದಾಟದ ವಿಶಿಷ್ಟ ಸಂಪ್ರದಾಯದ ಆಚರಣೆ ಮೃತ್ಯಕೂಪವಾಗಿ ಪರಿಣಮಿಸಿದೆ. ಘಟನೆಯಲ್ಲಿ ಇಬ್ಬರು ಭಕ್ತರು ಮೃತಪಟ್ಟು, 15ಕ್ಕೂ ಹೆಚ್ಚಿನ ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೊಣ್ಣೆಗಳಿಂದ ಬಡಿದಾಟದ ವಿಶಿಷ್ಟ ಸಂಪ್ರದಾಯ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಯಲು ಇಲ್ಲಿರುವ ವಿಡಿಯೋ ನೋಡಿ.
ಬಳ್ಳಾರಿ, ಅಕ್ಟೋಬರ್ 3: ಬಳ್ಳಾರಿ ಗಡಿ ಭಾಗದ, ಆಂಧ್ರ ಪ್ರದೇಶಕ್ಕೆ ಸೇರಿದ ದೇವರಗುಡ್ಡ ಜಾತ್ರೆಯಲ್ಲಿ ದೊಣ್ಣೆಗಳಿಂದ ಬಡಿದಾಟದ ವಿಶಿಷ್ಟ ಸಂಪ್ರದಾಯವಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬಡಿದಾಟ ಜಾತ್ರೆ ನಡೆದಿದ್ದು, ದುರದೃಷ್ಟವಶಾತ್ ದುರಂತ ಸಂಭವಿಸಿದೆ. ಘಟನೆಯಲ್ಲಿ ಹೊಡೆದಾಟದ ವೇಳೆ ಗಂಭೀರವಾಗಿ ಗಾಯಗೊಂಡು ಇಬ್ಬರು ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ. ಅರಿಕೇರಾ ಗ್ರಾಮದ ತಿಮ್ಮಪ್ಪ ಸೇರಿದಂತೆ ಇಬ್ಬರು ಭಕ್ತರು ದುರ್ಮರಣ ಹೊಂದಿದ್ದಾರೆ. ಗಾಯಾಳುಗಳನ್ನು ಆಲೂರು, ಅದೋನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದೇವರಗುಡ್ಡದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಕೆಲ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬನ್ನಿ ಹಬ್ಬದ ಅಂಗವಾಗಿ ಗ್ರಾಮದಲ್ಲಿ ಸಾಂಪ್ರದಾಯಿಕ ರಕ್ತಸಿಕ್ತ ಆಚರಣೆ ನಡೆಯುತ್ತದೆ. ಕೋಲುಗಳು, ಬಡಿಗೆ, ಮರದ ತುಂಡುಗಳಿಂದ ಭಕ್ತರು ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
