Ballistic missile Prithvi II: ಬ್ಯಾಲಿಸ್ಟಿಕ್ ಕ್ಷಿಪಣಿ ಪೃಥ್ವಿ-II ಯಶಸ್ವಿ ಉಡಾವಣೆ, ಡಿಆರ್‌ಡಿಒ ಮಹತ್ವದ ಸಾಧನೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 11, 2023 | 11:46 AM

ಪೃಥ್ವಿ-II ಎಂಬ ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾರತ ಯಶಸ್ವಿ ತರಬೇತಿ ಉಡಾವಣೆ ಮಾಡಲಾಗಿದೆ. ಒಡಿಶಾದ ಕರಾವಳಿಯ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಈ ಉಡಾವಣೆಯನ್ನು ನಡೆಸಲಾಯಿತು

Ballistic missile Prithvi II: ಬ್ಯಾಲಿಸ್ಟಿಕ್ ಕ್ಷಿಪಣಿ ಪೃಥ್ವಿ-II ಯಶಸ್ವಿ ಉಡಾವಣೆ, ಡಿಆರ್‌ಡಿಒ ಮಹತ್ವದ ಸಾಧನೆ
ಬ್ಯಾಲಿಸ್ಟಿಕ್ ಕ್ಷಿಪಣಿ ಪೃಥ್ವಿ-II
Follow us on

ಪೃಥ್ವಿ-II ಎಂಬ ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು (Ballistic missile) ಭಾರತ ಯಶಸ್ವಿ ತರಬೇತಿ ಉಡಾವಣೆ ಮಾಡಲಾಗಿದೆ. ಒಡಿಶಾದ ಕರಾವಳಿಯ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಈ ಉಡಾವಣೆಯನ್ನು ನಡೆಸಲಾಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮಂಗಳವಾರ ತಿಳಿಸಿದೆ. ಕ್ಷಿಪಣಿಯು ತನ್ನ ಗುರಿಯನ್ನು ಹೆಚ್ಚು ನಿಖರತೆ ಮೂಲಕ ತಲುಪಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಪೃಥ್ವಿ-II ಎಂಬ ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ತರಬೇತಿ ಉಡಾವಣೆಯನ್ನು ಜನವರಿ 10 ರಂದು ಒಡಿಶಾದ ಕರಾವಳಿಯ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ನಡೆಸಲಾಯಿತು ಎಂದು ಅದು ಹೇಳಿದೆ.

ಒಂದು ಸುಸ್ಥಾಪಿತ ವ್ಯವಸ್ಥೆ, ಪೃಥ್ವಿ-II ಕ್ಷಿಪಣಿಯು ಭಾರತದ ಪರಮಾಣು ನಿಗ್ರಹದ ಅವಿಭಾಜ್ಯ ಅಂಗವಾಗಿದೆ. ಕ್ಷಿಪಣಿಯು ಹೆಚ್ಚಿನ ನಿಖರತೆಯೊಂದಿಗೆ ತನ್ನ ಗುರಿಯನ್ನು ತಲುಪಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನು ಓದಿ:Prithvi-2: ಒಡಿಶಾದ ಕರಾವಳಿ ತಟದಲ್ಲಿ ಪೃಥ್ವಿ-2 ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ ಭಾರತ

ತರಬೇತಿ ಉಡಾವಣೆ ಕ್ಷಿಪಣಿಯ ಎಲ್ಲಾ ಕಾರ್ಯಾಚರಣೆ ಮತ್ತು ತಾಂತ್ರಿಕ ನಿಯತಾಂಕಗಳನ್ನು ಯಶಸ್ವಿಯಾಗಿ ಮೌಲ್ಯೀಕರಿಸಿದೆ ಎಂದು ಸಚಿವಾಲಯ ಹೇಳಿದೆ. ಪೃಥ್ವಿ-II ಕ್ಷಿಪಣಿಯು ಸುಮಾರು 350 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:43 am, Wed, 11 January 23