ಕುಪ್ವಾರದಲ್ಲಿ ಭಾರೀ ಹಿಮಪಾತದಿಂದ ಕಣಿವೆಗೆ ಉರುಳಿದ ವಾಹನ; ಮೂವರು ಭಾರತೀಯ ಸೇನಾ ಸಿಬ್ಬಂದಿ ಸಾವು

ದಟ್ಟ ಮಂಜಿನಿಂದಾಗಿ ಆಪರೇಷನ್ ಟಾಸ್ಕ್​​ನಲ್ಲಿದ್ದ ಮೂವರು ಯೋಧರು ಪ್ರಯಾಣಿಸುತ್ತಿದ್ದ ವಾಹನ ಆಯ ತಪ್ಪಿ ಕಣಿವೆಗೆ ಬಿದ್ದಿದೆ. ಈ ಮೂವರೂ ಡೋಗ್ರಾ ರೆಜಿಮೆಂಟ್‌ನ 14ನೇ ಬೆಟಾಲಿಯನ್‌ಗೆ ಸೇರಿದವರೆಂದು ತಿಳಿದುಬಂದಿದೆ.

ಕುಪ್ವಾರದಲ್ಲಿ ಭಾರೀ ಹಿಮಪಾತದಿಂದ ಕಣಿವೆಗೆ ಉರುಳಿದ ವಾಹನ; ಮೂವರು ಭಾರತೀಯ ಸೇನಾ ಸಿಬ್ಬಂದಿ ಸಾವು
ಸಾಂದರ್ಭಿಕ ಚಿತ್ರImage Credit source: times now
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jan 11, 2023 | 10:28 AM

ಕುಪ್ವಾರ: ಜಮ್ಮು ಕಾಶ್ಮೀರದ ಕುಪ್ವಾರದ (Kupwara) ಮಚ್ಚಲ್ ಸೆಕ್ಟರ್‌ನಲ್ಲಿ ಸೇನಾ ವಾಹನ (Army Vehicle) ಆಳವಾದ ಕಂದಕಕ್ಕೆ ಜಾರಿ ಮೂವರು ಭಾರತೀಯ ಸೇನಾ (Indian Army) ಸಿಬ್ಬಂದಿ ಸಾವನ್ನಪ್ಪಿದ ದಾರುಣ ಘಟನೆ ಇಂದು ನಡೆದಿದೆ. ದಟ್ಟ ಮಂಜಿನಿಂದಾಗಿ ಆಪರೇಷನ್ ಟಾಸ್ಕ್​​ನಲ್ಲಿದ್ದ ಈ ಮೂವರು ಯೋಧರು ಪ್ರಯಾಣಿಸುತ್ತಿದ್ದ ವಾಹನ ಆಯ ತಪ್ಪಿ ಕಣಿವೆಗೆ ಬಿದ್ದಿದೆ. ಈ ಮೂವರೂ ಡೋಗ್ರಾ ರೆಜಿಮೆಂಟ್‌ನ 14ನೇ ಬೆಟಾಲಿಯನ್‌ಗೆ ಸೇರಿದವರೆಂದು ತಿಳಿದುಬಂದಿದೆ.

ಇಂದು ಮುಂಜಾನೆ ಈ ಘಟನೆ ಸಂಭವಿಸಿದ್ದು, ಈ ಬಗ್ಗೆ ಸೇನಾಪಡೆ ಟ್ವೀಟ್ ಮೂಲಕ ಖಚಿತಪಡಿಸಿದೆ.

“ಫಾರ್ವರ್ಡ್ ಏರಿಯಾದಲ್ಲಿ ಆಪರೇಷನ್ ಕಾರ್ಯದ ಸಂದರ್ಭದಲ್ಲಿ ಈ ವಾಹನ ಕಿರಿಯ ಸೇನಾ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿತ್ತು. ಈ ವೇಳೆ ಈ ಅಪಘಾತ ಸಂಭವಿಸಿದೆ. ಒಬ್ಬರು ಜೆಸಿಒ ಮತ್ತು ಇಬ್ಬರು ಓಆರ್​ ಇದ್ದ ವಾಹನ ಪ್ರಯಾಣಿಸುತ್ತಿದ್ದ ರಸ್ತೆಯಲ್ಲಿ ಹಿಮ ತುಂಬಿಕೊಂಡಿತ್ತು. ಇದರಿಂದ ವಾಹನ ಆಳವಾದ ಕಮರಿಗೆ ಜಾರಿತು. ಎಲ್ಲಾ ಮೂವರು ಸೇನಾ ಸಿಬ್ಬಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ” ಎಂದು ಚಿನಾರ್ ಕಾರ್ಪ್ಸ್ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:18 am, Wed, 11 January 23