ದೆಹಲಿ: ಈ ದೀಪಾವಳಿಯಂದು ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ ಮಾರಾಟ ಮತ್ತು ಬಳಕೆಯ ಮೇಲೆ ಸಂಪೂರ್ಣ ನಿಷೇಧ ಇರಲಿದೆ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಘೋಷಿಸಿದ್ದಾರೆ. ನಿಷೇಧವು ಜನವರಿ 1, 2023 ರವರೆಗೆ ಜಾರಿಯಲ್ಲಿರುತ್ತದೆ ಎಂದು ಸಚಿವರು ಹೇಳಿದರು. ಜನರ ಜೀವವನ್ನು ಉಳಿಸಲು ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಶ್ರೀ ರೈ ಟ್ವೀಟ್ ಮಾಡಿದ್ದಾರೆ.
ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟದ ಮೇಲೂ ನಿಷೇಧವಿರುತ್ತದೆ ಮತ್ತು ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸರು, ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಮತ್ತು ಕಂದಾಯ ಇಲಾಖೆಯೊಂದಿಗೆ ಚರ್ಚಿಸಿದ ನಂತರ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು ಎಂದು ಸಚಿವರು ಹೇಳಿದರು.
ಕಳೆದ ದೀಪಾವಳಿಯಂದು ದಿಲ್ಲಿ ಸರಕಾರವು ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿತ್ತು. ಪಟಾಕಿಗಳ ಜೊತೆಗೆ, ದೀಪಾವಳಿ ಅವಧಿಯಲ್ಲಿ ದೆಹಲಿಯ ವಾಯು ಮಾಲಿನ್ಯವು ಹರ್ಯಾಣ ಮತ್ತು ಪಂಜಾಬ್‌ನಂತಹ ನೆರೆಯ ರಾಜ್ಯಗಳಲ್ಲಿ ಮೇಲು ಪ್ರಭಾವ ಉಂಟು ಮಾಡಿದ ಎಂದು ಹೇಳಿದ್ದಾರೆ
Published On - 11:54 am, Wed, 7 September 22