AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಫ್ಟ್​ನಲ್ಲಿ ಬಾಲಕನಿಗೆ ಕಚ್ಚಿದ ಸಾಕು ನಾಯಿ; ಶ್ವಾನದ ಮಾಲೀಕರಿಗೆ 5,000 ರೂ. ದಂಡ

ಮಾಲೀಕರು ನಾಯಿಯನ್ನು ಲಿಫ್ಟ್​ನೊಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಅಲ್ಲಿದ್ದ ಬಾಲಕನನ್ನು ನೋಡಿ ಬೊಗಳಲಾರಂಭಿಸಿದ ನಾಯಿ ಆತನ ಕಾಲಿಗೆ ಕಚ್ಚಿತ್ತು. ಲಿಫ್ಟ್​ನಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ರೆಕಾರ್ಡ್ ಆಗಿತ್ತು.

ಲಿಫ್ಟ್​ನಲ್ಲಿ ಬಾಲಕನಿಗೆ ಕಚ್ಚಿದ ಸಾಕು ನಾಯಿ; ಶ್ವಾನದ ಮಾಲೀಕರಿಗೆ 5,000 ರೂ. ದಂಡ
ಲಿಫ್ಟ್​ನಲ್ಲಿ ಬಾಲಕನಿಗೆ ಕಚ್ಚಿದ ಸಾಕು ನಾಯಿ
TV9 Web
| Edited By: |

Updated on: Sep 07, 2022 | 10:55 AM

Share

ಗಜಿಯಾಬಾದ್: ಹೌಸಿಂಗ್ ಸೊಸೈಟಿ ಲಿಫ್ಟ್‌ನಲ್ಲಿ ಹೋಗುತ್ತಿದ್ದಾಗ ಮಗುವಿಗೆ ನಾಯಿ (Pet Dog) ಕಚ್ಚಿದ ಹಿನ್ನೆಲೆಯಲ್ಲಿ ಆ ಸಾಕು ನಾಯಿಯ ಮಾಲೀಕರಾದ ಮಹಿಳೆಗೆ ಗಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ 5,000 ರೂ. ದಂಡ ವಿಧಿಸಿದೆ. ಲಿಫ್ಟ್​ನಲ್ಲಿ ಮಹಿಳೆ ನಾಯಿಯನ್ನು ಕರೆದುಕೊಂಡು ಹೋಗುವಾಗ ಆ ಲಿಫ್ಟ್​ನಲ್ಲಿದ್ದ ಬಾಲಕನಿಗೆ ನಾಯಿ ಕಚ್ಚಿರುವ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಮಾಲೀಕರು ನಾಯಿಯನ್ನು ಲಿಫ್ಟ್​ನೊಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಅಲ್ಲಿದ್ದ ಬಾಲಕನನ್ನು ನೋಡಿ ಬೊಗಳಲಾರಂಭಿಸಿದ ನಾಯಿ ಆತನ ಕಾಲಿಗೆ ಕಚ್ಚಿತ್ತು. ಲಿಫ್ಟ್​ನಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ರೆಕಾರ್ಡ್ ಆಗಿತ್ತು. ಗಜಿಯಾಬಾದ್‌ನ ರಾಜ್‌ನಗರ ಎಕ್ಸ್‌ಟೆನ್ಶನ್ ಚಾರ್ಮ್ಸ್ ಕೌಂಟಿ ಸೊಸೈಟಿಯಲ್ಲಿ ಸೆಪ್ಟೆಂಬರ್ 5ರಂದು ಸಂಜೆ 6 ಗಂಟೆಗೆ ಈ ಘಟನೆ ನಡೆದಿತ್ತು. ಮಹಿಳೆಯೊಂದಿಗೆ ಸಾಕು ನಾಯಿ ಲಿಫ್ಟ್‌ಗೆ ಪ್ರವೇಶಿಸಿದ್ದು, ಕೆಲವು ಸೆಕೆಂಡುಗಳ ನಂತರ ನಾಯಿ ಹಾರಿ ಹುಡುಗನನ್ನು ಕಚ್ಚುತ್ತದೆ. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ನಾಯಿ ಕಚ್ಚಿದ್ದರಿಂದ ಭಯಗೊಂಡು ನೋವಿನಿಂದ ಅಳುತ್ತಿದ್ದ ಆ ಬಾಲಕನ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದ ಆ ಮಹಿಳೆ ತನ್ನ ನಾಯಿಯನ್ನು ಕರೆದುಕೊಂಡು ಲಿಫ್ಟ್​ನಿಂದ ಹೊರಗೆ ಹೋಗುತ್ತಾಳೆ.

ಇದನ್ನೂ ಓದಿ: Video Viral : ನಾಯಿಯೊಂದಿಗೆ ಸೆಲ್ಫಿಯಲ್ಲಿ ಮುಳುಗಿದ ಪೈಲಟ್, ವಿಳಂಬವಾಗಿ ಹಾರಿದ ವಿಮಾನ

ಈ ಸಿಸಿಟಿವಿ ದೃಶ್ಯಾವಳಿಯನ್ನು ಇಟ್ಟುಕೊಂಡು ಆ ಬಾಲಕನ ಪೋಷಕರು ನಂದಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಕ್ರಮ ಕೈಗೊಂಡಿರುವ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಈ ಘಟನೆಯ ನಂತರ, ಗಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಮಹಿಳೆಯ ಮನೆಗೆ ಹೋದಾಗ ಆ ಸಾಕು ನಾಯಿಯನ್ನು ರಿಜಿಸ್ಟರ್ ಮಾಡಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ, ಆಕೆಗೆ 5,000 ರೂ. ದಂಡ ವಿಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?