TV9 Kannada News Live: ಮೊಬೈಲ್ ಪತ್ತೆ: ಪ್ರಜ್ವಲ್ ರೇವಣ್ಣ ವಿಐಪಿ ಸೆಲ್ ನಿಂದ ಸಾಮಾನ್ಯ ಸೆಲ್ಗೆ ಶಿಫ್ಟ್
Karnataka News Today Live Updates: ಸುಪ್ರೀಂ ಕೋರ್ಟ್ ಸಿಜೆಐ ಜಿರಳೆ ಹೇಳಿಕೆ ವಿವಾದದ ಅರ್ಜಿ ವಿಚಾರಣೆ, ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ನಡೆಸಿ 10ಕ್ಕೂ ಹೆಚ್ಚು ಮೊಬೈಲ್ ಜಪ್ತಿ, ಹಾಗೂ ಮಲೆ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ವಿಶೇಷ ಪೂಜೆಯ ಪ್ರಮುಖ ಸುದ್ದಿಗಳ ಕ್ಷಣಕ್ಷಣದ ಲೈವ್ ಅಪ್‌ಡೇಟ್ಸ್ ಇಲ್ಲಿದೆ.

Breaking News Today Live Updates in Kannada: ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ‘ಜಿರಳೆ’ ಹೇಳಿಕೆ ವಿವಾದ, ‘ಕಾಕ್ರೋಚ್ ಜನತಾ ಪಾರ್ಟಿ’ ಹುಟ್ಟು ಹಾಗೂ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಜೆನ್-ಝಿ ಪ್ರತಿಭಟನೆಗಳ ಬೆನ್ನಲ್ಲೇ, ಆ ವೀಡಿಯೊವನ್ನು ಉದ್ದೇಶಪೂರ್ವಕವಾಗಿ ಎಡಿಟ್ ಮಾಡಿ ವಾಣಿಜ್ಯ ಬಳಕೆ ಮಾಡಿಕೊಂಡವರ ವಿರುದ್ಧ ಕ್ರಮಕ್ಕೆ ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ CBIಯಿಂದ ಪ್ರತಿಕ್ರಿಯೆ ಕೋರಿದೆ. ಮತ್ತೊಂದೆಡೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ ಸೇರಿದಂತೆ ವಿವಿಧೆಡೆ 10ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ.ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಸ್ಯೆ ಹಿನ್ನೆಲೆಯಲ್ಲಿ ಮಾದಪ್ಪನಿಗೆ ವಿಶೇಷ ಪೂಜೆ ಹಾಗೂ ರಥೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿದ್ದು, ಭಕ್ತರು ಹರಿದು ಬರುತ್ತಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Tv9 Kannada Live TV ಇಲ್ಲಿ ವೀಕ್ಷಿಸಿ
LIVE NEWS & UPDATES
-
ಪ್ರಜ್ವಲ್ ರೇವಣ್ಣ ವಿಐಪಿ ಸೆಲ್ ನಿಂದ ಸಾಮಾನ್ಯ ಸೆಲ್ಗೆ
ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಯಾರು ನೊಬೈಲ್ ಕೊಟ್ಟಿದ್ದಾರೆ ಎನ್ನುವುದು ಚರ್ಚೆ ಹುಟ್ಟು ಹಾಕಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನು ಇನ್ನು ಪ್ರಜ್ವಲ್ ಮೊಬೈಲ್ ಮತ್ತು ಪೆನ್ ಡ್ರೈವ್ ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಹೀಗಾಗಿ ಪ್ರಜ್ವಲ್ನನ್ನು ವಿಐಪಿ ಸೆಲ್ನಿಂದ ಸಾಮಾನ್ಯ ಸೆಲ್ಗೆ (ಸಜಾ ಬಂಧಿಗಳು ಇರುವ ಸೆಲ್) ಶಿಫ್ಟ್ ಮಾಡಲಾಗಿದೆ. ಮತ್ತಷ್ಟು ಓದಿ
-
ನೂತನ ಸಚಿವರಿಗೆ ಖಾತೆ ಹಂಚಿಕೆ
ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ ಆಗಸ್ಟ್ 03ರಂದು ಸೇರ್ಪಡೆಯಾಗಿದ್ದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆಯಾಗಿದೆ. ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಪಕ್ಷದಲ್ಲಿ ಭಾರಿ ಅಸಮಾಧಾನ ಭುಗಿಲೆದ್ದ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್, ಅಳೆದು ತೂಗಿ ನೂತನ ಸಚಿವರಿಗೆ ಜವಾಬ್ದಾರಿ ನೀಡಿದೆ. ಅದರಲ್ಲೂ ಪ್ರಮುಖವಾಗಿ ಹಿರಿಯ ಸಚಿವರುಗಳಾದ ಮುನಿಯಪ್ಪ ಹಾಗೂ ರಾಮಲಿಂಗಾರೆಡ್ಡಿ ಅವರ ಖಾತೆಗಳನ್ನು ಬದಲಾವಣೆ ಮಾಡಲಾಗಿದೆ. ಹಾಗಾದ್ರೆ, ಯಾರಿಗೆ ಯಾವ ಖಾತೆ? ಮತ್ತಷ್ಟು ಓದಿ
-
-
ಅಧಿವೇಶನಕ್ಕೆ ವಿಧಾನಸೌಧದಲ್ಲಿ ಭರದಿಂದ ಸಾಗಿರುವ ಸಿದ್ಧತಾ ಕಾರ್ಯ
ನಾಳೆಯಿಂದ (ಆಗಸ್ಟ್ 13) ನಾಳೆಯಿಂದ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗಲಿದೆ. ಹೀಗಾಗಿ ವಿಧಾನಸೌಧದಲ್ಲಿ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ವಿಧಾನಸೌಧದ ಕೆಂಗಲ್ ದ್ವಾರ, ಪಶ್ವಿಮ ದ್ವಾರದಲ್ಲಿ ಬಣ್ಣಬಣ್ಣದ ಹೂವುಗಳಿಂದ ಸಿಂಗರಿಸುವ ಕಾರ್ಯ ನಡೆದಿದೆ. ಇನ್ನು ಹಂಗಾಮಿ ಸಭಾಪತಿ ಪುಟ್ಟಣ್ಣ ಅವರು ಪರಿಷತ್ನಲ್ಲಿ ಸಿದ್ಧತೆ ವೀಕ್ಷಿಸಿದರು.
-
ಹ ಕಚೇರಿ ಕೃಷ್ಣದಲ್ಲಿ ಸಚಿವರ ಜೊತೆ ಸಿಎಂ ಸಭೆ
ನಾಳೆಯಿಂದ ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಚಿವರ ಸಭೆ ಕರೆದಿದ್ದಾರೆ. ಹೀಗಾಗಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಸಭೆ ಆರಂಭವಾಗುವುದರಿಂದ ಸಚಿವರು ಗೃಹ ಕಚೇರಿ ಕೃಷ್ಣಕ್ಕೆ ಆಗಮಿಸುತ್ತಿದ್ದಾರೆ.
-
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ದೇಶಪಾಂಡೆ ನೇಮಕ
ಕಾಂಗ್ರೆಸ್ ಹಿರಿಯ ಶಾಸಕ ಆರ್ವಿ ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲೂ ಸಚಿವ ಸ್ಥಾನ ಕೈತಪ್ಪಿದ್ದು, ಈ ಬಾರಿ ಡಿಕೆ ಶಿವಕುಮಾರ್ ಸರ್ಕಾರದಲ್ಲೂ ಸಹ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಅವರನ್ನು ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
-
-
ಪೊನ್ನಣ್ಣ ಬದಲಿಗೆ ಡೆಪ್ಯುಟಿ ಸ್ಪೀಕರ್ ಹುದ್ದೆ ಮಂಕಾಳು ವೈದ್ಯಗೆ
ಆಗಸ್ಟ್ 14ರಂದು ಸ್ಪೀಕರ್, ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಉಪ ಸಭಾಧ್ಯಕ್ಷ ಸ್ಥಾನಕ್ಕೆ ಮಂಕಾಳು ವೈದ್ಯ ನೇಮಿಸಲು ತೀರ್ಮಾನಿಸಲಾಗಿದೆ. ಈ ಮೊದಲು ಹೈಕಮಾಂಡ್ ಪೊನ್ನಣ್ಣ ಅವರನ್ನು ಡೆಪ್ಯುಟಿ ಸ್ಪೀಕರ್ ಗೆ ಶಿಫಾರಸ್ಸು ಮಾಡಿತ್ತು. ಆದ್ರೆ, ಇದೀಗ ಪೊನ್ನಣ್ಣ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದ ಮಂಕಾಳು ವೈದ್ಯ ಅವರನ್ನು ಡೆಪ್ಯುಟಿ ಸ್ಪೀಕರ್ ಆಗಿ ನೇಮಿಸಲು ತಿರ್ಮಾನಿಸಲಾಗಿದೆ.
-
ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ A.S.ಪೊನ್ನಣ್ಣ ನೇಮಕ
ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ವಿರಾಜಪೇಟೆ ಕ್ಷೇತ್ರದ ಶಾಸಕ A.S.ಪೊನ್ನಣ್ಣ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಹೈಕಮಾಂಡ್ ಪೊನ್ನಣ್ಣ ಅವರನ್ನು ಡೆಪ್ಯುಟಿ ಸ್ಪೀಕರ್ ಹುದ್ದೆಗೆ ಶಿಫಾರಸು ಮಾಡಿತ್ತು. ಆದ್ರೆ, ಇದೀಗ ಬದಲಾವಣೆ ಮಾಡಲಾಗಿದ್ದು, ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
-
ನಟ ಪ್ರಕಾಶ್ ರಾಜ್ ಹೆಸರು ಡಿಲೀಟ್ ಬಗ್ಗೆ ನೋ ಕಮೆಂಟ್ ಎಂದ ಆಯುಕ್ತರು
ಇನ್ನು ಬೆಂಗಳೂರಿನಲ್ಲಿದ್ದ ನಟ ಪ್ರಕಾಶ್ ರಾಜ್ ಹೆಸರನ್ನು ಮತದಾರರಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎನ್ನುವ ವಿಚಾರಕ್ಕೆ ಮಾಧ್ಯಮಗಳ ಪ್ರಶ್ನೆಗೆ ಆಯುಕ್ತರು ಉತ್ತರಿಸಲು ನಿರಾಕರಿಸಿದರು. ವೈಯಕ್ತಿಕ ವೋಟರ್ಸ್ ಬಗ್ಗೆ ಕಾಮೆಂಟ್ ಮಾಡಲ್ಲ. ಈ ಪ್ರಕರಣದಲ್ಲೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
-
ಹೊಸ ವಿಳಾಸದಿಂದ ಅರ್ಜಿ ಹಾಕಲು ಮನವಿ
ಮೊದಲ ಪಟ್ಟಿ ಪ್ರಕಟ ಆಗಸ್ಟ್ 24ಕ್ಕೆ ಪ್ರಕಟವಾಗುತ್ತೆ. ಈಗ ಕೂಡ ಆನ್ ಲೈನ್ ನಲ್ಲಿ ಫಾರ್ಮ್ -6ನಡಿ ಅರ್ಜಿ ಹಾಕ್ಬೋದು. ಈಗ ಅರ್ಜಿಆನ್ ಲೈನ್ ನಲ್ಲಿ ಹಾಕಲು ಅವಕಾಶ ಇದೆ. ಈ ಅರ್ಜಿಯನ್ನ ಆಗಸ್ಟ್ 24ರ ನಂತರ ಪರಿಗಣಿಸಲಾಗುತ್ತೆ. 1-10-2026ಗೆ ಯಾರಿಗೆಲ್ಲಾ 18 ವರ್ಷ ತುಂಬುತ್ತೋ ಅಂತವರು ಫಾರ್ಮ್ ನಡಿ ಅರ್ಜಿ ಹಾಕಬಹುದು. ಹೊಸ ಮತದಾರರು ಅರ್ಜಿ ಹಾಕಬಹುದು ಎಂದು ತಿಳಿಸಿದ್ದಾರೆ.
-
ಏನಾದ್ರೂ ಗೊಂದಲ ಇದ್ದರೆ ಸಂಬಂಧಪಟ್ಟ BLOಗಳಿಗೆ ಕಾಲ್ ಮಾಡಿ
ಇನ್ನು ಏನಾದರೂ ಗೊಂದಲ ಇದ್ದರೆ ಸಂಬಂಧಪಟ್ಟ ಬಿಎಲ್ಓಗಳಿಗೆ ದೂರವಾಣಿ ಕರೆ ಮಾಡಲು ತಿಳಿಸಿದ ಆಯುಕ್ತರು, 16-6-2026 ರ ಪಟ್ಟಿಯಲ್ಲಿ ಮತದಾರರು ವಾಸ ಇಲ್ಲವೋ ಅಂತವರನ್ನ ಆಬ್ಸೆಂಟ್,ಶಿಫ್ಟೆಡ್ ಕಾಲಂನಲ್ಲಿ ಸೇರಿಸಿದ್ದೇವೆ. ಯಾರ್ದಾದ್ರೂ ಹೆಸರು ಬಿಟ್ಟೋಗಿದ್ರೆ ಅಂತವರು ಫಾರ್ಮ್ -6 ನಡಿ ಅರ್ಜಿ ಹಾಕುವಂತೆ ಮನವಿ ಮಾಡಿದ್ದಾರೆ.
-
ASDDO 1,08,75,304 ಮತದಾರರ ಗುರುತು
ಈಗಾಗಲೇ 5,54,32,314 ಕೋಟಿ ಎನ್ಯಮರೇಷನ್ ಫಾರಂ ಕೊಟ್ಟಿದೀವಿ. BLO ಗಳಿಂದ 100% ಎನ್ಯಮರೇಷನ್ ಫಾರಂ ವಿತರಣೆ ಮಾಡಿದ್ದಾರೆ. ಅದರಲ್ಲಿ 4,45,57,010 ಸಾವಿರ ಅರ್ಜಿಗಳು ಡಿಜಿಟಲೈಜೇಷನ್ ಆಗಿದೆ. ರಾಜ್ಯದಲ್ಲಿ ಎನ್ಯೂಮರೇಷನ್ ಫಾರ್ಮ್ 80.38% ಡಿಜಿಟಲೀಕರಣ ರಾಜ್ಯದಲ್ಲಿ ASDDO 1,08,75,304(19%) ಮತದಾರರ ಗುರುತು ಮಾಡಲಾಗಿದೆ. (ಆಬ್ಸೆಂಟ್ ಶಿಫ್ಟ್ ಡೆತ್ ಡೂಪ್ಲಿಕೇಟ್ & others) 65,73,976 ಮತದಾರರು ಶಾಶ್ವತವಾಗಿ ಸ್ಥಳಾಂತರ. 16,36,673 ಮತದಾರರು ಮೃತಪಟ್ಟಿದ್ದಾರೆ. ಎರಡು ಕಡೆ ವೋಟ್ ಹೊಂದಿದವರು 7,01,412 ಮತದಾರರು. 4,14,486 ಇತರೆ ಮತದಾರರು ಎಂದು ಮಾಹಿತಿ ನೀಡಿದರು.
-
ಚುನಾವಣಾಧಿಕಾರಿ ಅನ್ಬುಕುಮಾರ್ ರಿಂದ ಸುದ್ದಿ ಗೋಷ್ಟಿ
ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ರಿಂದ ಸುದ್ದಿ ಗೋಷ್ಟಿ ನಡೆಸಿದ್ದು, ಕರ್ನಾಟಕದ ಎಸ್ಐಆರ್ ಬಗ್ಗೆ ಮಾಹಿತಿ ನೀಡಿದ್ದಾರೆ. 30 /06 /2026 ರಿಂದ 17/08/2026 ರ ವರೆಗೂ SIR ನಡೆಯುತ್ತಿದೆ. ಮೊದಲ ಕರಡು ಪ್ರಕಟಣೆಯನ್ನು 24/08/2026 ನಡೆಯಲಿದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಮಾಡಿರುವುದಕ್ಕೆ ಸೆಪ್ಟೆಂಬರ್ 23 ವರೆಗೆ ಅವಕಾಶ ನೀಡಲಾಗಿದೆ. ಅಕ್ಟೋಬರ್ 27 ಅಂತಿಮ ಕರಡು ಪ್ರಕಟಣೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
-
ಪೋಷಕರ ಸಂಘಟನೆಯಿಂದಲೂ ನಾಳಿನ ಬಂದ್‌ಗೆ ಬೆಂಬಲ ಇಲ್ಲ
ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ (ಆಗಸ್ಟ್ 13) ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಆದ್ರೆ, ಈ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪೋಷಕರ ಸಂಘಟನೆಯಿಂದಲೂ ನಾಳಿನ ಬಂದ್‌ಗೆ ಬೆಂಬಲ ಇಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೋಷಕರ ಸಮನ್ವಯ ಸಮಿತಿ ಅಧ್ಯಕ್ಷ ಯೋಗಾನಂದ್, ನಾಳೆಯ ಕರ್ನಾಟಕ ಬಂದ್‌ಗೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದೇವೆ. ನಾಳೆಯ ಕರ್ನಾಟಕ ಬಂದ್‌ಗೆ ಬೆಂಬಲ ನೀಡದಿರಲು ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
-
ಶಾಸಕರ ಭವನದ ‘ಮಲ್ಲಿಗೆ ಹೋಟೆಲ್’ ಮೇಲೆ ಆಹಾರ ಇಲಾಖೆ ದಾಳಿ
ಬೆಂಗಳೂರಿನ ಎಲ್ ಹೆಚ್ (ಶಾಸಕರ ಭವನ) ಆವರಣದಲ್ಲಿರುವ ಮಲ್ಲಿಗೆ ಹೋಟೆಲ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರೇಡ್ ವೇಳೆ ಹೋಟೆಲ್‌ನಲ್ಲಿ ತೀವ್ರ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ಕಿಚನ್‌ನಲ್ಲಿ ಜಿರಳೆಗಳು ಪತ್ತೆಯಾಗಿವೆ. ಅಧಿಕಾರಿಗಳು ಹೋಟೆಲ್ ನಿರ್ವಹಣೆ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.
-
ಕರ್ನಾಟಕ ಬಂದ್‌ಗೆ ಪೋಷಕರ ಸಂಘಟನೆ ಬೆಂಬಲವಿಲ್ಲ: ಯೋಗಾನಂದ್
ನಾಳೆಯ ಕರ್ನಾಟಕ ಬಂದ್ ಪ್ರಕ್ರಿಯೆಗೆ ಯಾವುದೇ ಬೆಂಬಲ ನೀಡದಿರಲು ಕರ್ನಾಟಕ ಪೋಷಕರ ಸಂಘಟನೆ ತೀರ್ಮಾನಿಸಿದೆ. ಈ ಹಿಂದೆ ಘೋಷಿಸಿದ್ದ ಬೆಂಬಲವನ್ನು ಅಧಿಕೃತವಾಗಿ ವಾಪಸ್ ಪಡೆದಿರುವುದಾಗಿ ಪೋಷಕರ ಸಮನ್ವಯ ಸಮಿತಿ ಅಧ್ಯಕ್ಷ ಯೋಗಾನಂದ್ ಸ್ಪಷ್ಟಪಡಿಸಿದ್ದಾರೆ.
-
ಕೆಪಿಎಸ್ ಪರೀಕ್ಷಾ ನಿಯಂತ್ರಣ ಅಧಿಕಾರಿ ವರ್ಗಾವಣೆ
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅಕ್ರಮ ಆರೋಪ ಹಿನ್ನೆಲೆ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಣ ಅಧಿಕಾರಿ ದಿಗ್ವಿಜಯ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಜಾಗ ತೋರಿಸದೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ. KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರಿಗೆ KPSC ಪರೀಕ್ಷಾ ನಿಯಂತ್ರಕ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. KPSC ಜಂಟಿ ಪರೀಕ್ಷಾ ನಿಯಂತ್ರಕರಾಗಿ ಐಎಎಸ್ ಅಧಿಕಾರಿ ಲವೀಶ್ ಓರ್ಡಿಯಾ ನೇಮಕ ಮಾಡಲಾಗಿದೆ. ಲವೀಶ್ ಓರ್ಡಿಯಾ ಸದ್ಯ ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದು, ತಕ್ಷಣಕ್ಕೆ ಜಾರಿಗೆ ಬರುಬಂತೆ ಕೆಪಿಎಸ್ಸಿ JCE ಆಗಿ ಅವರನ್ನು ನೇಮಿಸಲಾಗಿದೆ. ಜೊತೆಗೆ ಎರಡೂ ಹುದ್ದೆಗಳನ್ನೂ ಪೌರಾಡಳಿತ ನಿರ್ದೇಶಕರ ಹುದ್ದೆಗೆ ಸಮನಾಗಿ ಪರಿಗಣನೆ ಎಂದು ಉಲ್ಲೇಖಿಸಿ ಸರ್ಕಾರ ಆದೇಶಿಸಿದೆ.
-
ಆರೋಗ್ಯ ಸೌಧದ ಕ್ಯಾಂಟೀನ್ ಮೇಲೆ ಆಹಾರ ಇಲಾಖೆ ದಿಢೀರ್ ದಾಳಿ
ಆರೋಗ್ಯ ಸೌಧದ ಕ್ಯಾಂಟೀನ್ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ, ಸ್ವಚ್ಛತೆ ಹಾಗೂ ಆಹಾರದ ಗುಣಮಟ್ಟ ಪರಿಶೀಲಿಸಿದ್ದಾರೆ. ಅಡುಗೆಮನೆ, ಸ್ಟೋರೇಜ್ ಮತ್ತು ಫ್ರಿಡ್ಜ್‌ಗಳನ್ನು ತಪಾಸಣೆ ಮಾಡಲಾಗಿದ್ದು, ಕಚ್ಚಾ ವಸ್ತುಗಳು ಹಾಗೂ ಎಣ್ಣೆಯ ಸ್ಯಾಂಪಲ್ ಸಂಗ್ರಹಿಸಲಾಗಿದೆ. ನಿಯಮ ಉಲ್ಲಂಘನೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
-
ನಾಳೆಯಿಂದ 10 ದಿನಗಳ ಕಾಲ ವಿಧಾನ ಪರಿಷತ್ ಅಧಿವೇಶನ
ಬೆಂಗಳೂರಿನಲ್ಲಿ ನಾಳೆಯಿಂದ 10 ದಿನಗಳ ಕಾಲ ಪರಿಷತ್ ಅಧಿವೇಶನ ನಡೆಯಲಿದ್ದು, ಆ.14ರಂದು ಸಭಾಪತಿ ಆಯ್ಕೆ ನಡೆಯಲಿದೆ ಎಂದು ಹಂಗಾಮಿ ಸಭಾಪತಿ ಪುಟ್ಟಣ್ಣ ತಿಳಿಸಿದ್ದಾರೆ. ಎಲ್ಲಾ ಗಂಭೀರ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ ಅವರು, ಹೊರಟ್ಟಿ ರಾಜೀನಾಮೆ ಕುರಿತಾದ ಒತ್ತಡದ ಆರೋಪಗಳನ್ನು ತಳ್ಳಿಹಾಕಿದ್ದಾರೆ.
-
ಕಂದಾಯ ಇಲಾಖೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ಹಾಗೂ ಮೂಡಬಿದ್ರೆ ತಾಲೂಕು ಕಂದಾಯ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಮಂಗಳೂರು, ಉಡುಪಿ ಮತ್ತು ಕಾರವಾರದ ಅಧಿಕಾರಿಗಳ ಜಂಟಿ ತಂಡಗಳು ಈ ದಿಢೀರ್ ಪರಿಶೀಲನೆ ಕೈಗೊಂಡಿದ್ದು, ದಾಖಲೆಗಳ ತಪಾಸಣೆ ನಡೆಸುತ್ತಿದ್ದಾರೆ.
-
ನಾಳಿನ ಕರ್ನಾಟಕ ಬಂದ್‌ಗೆ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಬೆಂಬಲವಿಲ್ಲ
ವಾಟಾಳ್ ನಾಗರಾಜ್ ಕರೆ ನೀಡಿರುವ ನಾಳಿನ ಕರ್ನಾಟಕ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಸ್ಪಷ್ಟ ಬೆಂಬಲವಿಲ್ಲ ಎಂದು ತಿಳಿಸಿದ್ದಾರೆ. ವಾಟಾಳ್ ಅವರ ಇತರ ಹೋರಾಟಗಳಿಗೆ ಬೆಂಬಲವಿದ್ದರೂ, ಇಂದಿನ ಪರಿಸ್ಥಿತಿಯಲ್ಲಿ ಬಂದ್ ಮಾಡುವುದು ಕಷ್ಟಕರವಾಗಿರುವುದರಿಂದ ನಾಳಿನ ಬಂದ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
-
ಪ್ರಜ್ವಲ್ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ; ಇಬ್ಬರ ವಿರುದ್ಧ ಎಫ್‌ಐಆರ್
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ನೀಲಿ ಬಣ್ಣದ ಆಂಡ್ರಾಯ್ಡ್ ಮೊಬೈಲ್ ಪತ್ತೆಯಾಗಿದೆ. ಮೊಬೈಲ್‌ನಲ್ಲಿ ವಾಟ್ಸಾಪ್, ಇನ್‌ಸ್ಟಾಗ್ರಾಮ್ ಹಾಗೂ ಒಟಿಟಿ ಆ್ಯಪ್‌ಗಳು ಸಿಕ್ಕಿದ್ದು, ವಕೀಲರು ಮತ್ತು ಮನೆಗೆ ಮಾತನಾಡಲು ಬಳಸುತ್ತಿರುವುದಾಗಿ ಸಹಕೈದಿ ಪ್ರತಾಪ್ ರೈ ತಿಳಿಸಿದ್ದಾನೆ. ಈ ಸಂಬಂಧ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
-
ಚಾಕಲೇಟ್ ಹೆಸರಿನಲ್ಲಿ ಗಾಂಜಾ ದಂಧೆ, ಯುಪಿ ಮೂಲದ ಆರೋಪಿ ಬಂಧನ
ಬೆಳಗಾವಿ ನಗರದ ಉದ್ಯಮಬಾಗದಲ್ಲಿ ಖಾಸಗಿ ಕಾಲೇಜು ಎದುರು ಸಿಹಿ ಚಾಕಲೇಟ್‌ನಲ್ಲಿ ಗಾಂಜಾ ಬೆರೆಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಭೋಲು ಪ್ರಜಾಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 5 ಗ್ರಾಂ ಗಾಂಜಾ ಮಿಶ್ರಿತ ಚಾಕಲೇಟ್‌ಗೆ ರೂ. 50ರಂತೆ ಮಾರಲಾಗುತ್ತಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 7 ಕೆಜಿ ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್‌ಗಳು, ಮೊಬೈಲ್ ಹಾಗೂ ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ. ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ಡಿಸಿ ಕಚೇರಿ ಮುಂದೆ ನಕಲಿ ದಾಖಲೆ ಪ್ರಶ್ನಿಸಿ ದೂರು ನೀಡಿದವರ ಮೇಲೆ ಹಲ್ಲೆ
ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ರಾಜೀವ್ ಗಾಂಧಿ ಬಡಾವಣೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರಿಗೆ ಶೈಲಾ ಹಾಗೂ ಚಂದ್ರಮಾನ್ ದೂರು ನೀಡಿದ್ದರು. ಇದರ ಕೋಪದಿಂದ ಕಟ್ಟಡ ನಿರ್ಮಿಸುತ್ತಿರುವ ಶಾಂತಾ ಎಂಬ ಮಹಿಳೆ, ಪೊಲೀಸರ ಎದುರಲ್ಲೇ ದೂರುದಾರರ ಮೇಲೆ ಹಲ್ಲೆ ನಡೆಸಿ ಕಪಾಳಮೋಕ್ಷ ಮಾಡಿದ್ದು, ಈ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
13 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ, ಹಾಸ್ಟೆಲ್ ಮುಖ್ಯಸ್ಥನ ಬಂಧನ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಹಾಸ್ಟೇಲ್‌ನಲ್ಲಿ 13 ವರ್ಷದ ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮುಖ್ಯಸ್ಥ ಜಾನ್ ಶಾಮೈಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ತನ್ನ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ ಬಳಿಕ ದೂರು ದಾಖಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
-
ಬೀದರ್ ಮೂಲದ ಕೂಲಿ ಕಾರ್ಮಿಕರ ದುರ್ಮರಣ: ಸಚಿವ ಈಶ್ವರ ಖಂಡ್ರೆ ಭೇಟಿ
ತೆಲಂಗಾಣದಲ್ಲಿ ನಡೆದ ಅಪಘಾತದಲ್ಲಿ ಬೀದರ್‌ನ 6 ಕೂಲಿ ಕಾರ್ಮಿಕರು ಮೃತಪಟ್ಟಿರುವುದು ಅತ್ಯಂತ ದುಃಖಕರ. ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಲಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಸಂತ್ರಸ್ತರ ಬೆನ್ನೆಲುಬಾಗಿ ಸರ್ಕಾರ ನಿಲ್ಲಲಿದೆ.
-
ಅಯೋಧ್ಯೆ ರಾಮಮಂದಿರ ಸಿಇಒ ಹುದ್ದೆ
‘ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್ ಸಿಇಒ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಬಂದ 5200 ಅರ್ಜಿಗಳಲ್ಲಿ 18 ಅಭ್ಯರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿಗಳೂ ಸೇರಿದಂತೆ ಅಭ್ಯರ್ಥಿಗಳಿಗೆ ಜನಿವಾರ ಧರಿಸುವಿಕೆ, ಶಿಕಾ, ಸಸ್ಯಾಹಾರ, ಮದ್ಯಪಾನ ನಿಷೇಧ, ರಾಮಭಕ್ತಿ ಹಾಗೂ ಸಾಂಪ್ರದಾಯಿಕ ಉಡುಗೆಯಂತಹ ಧಾರ್ಮಿಕ ಆಚರಣೆ ಮತ್ತು ಜೀವನಶೈಲಿಯ ಕುರಿತು ಕಠಿಣ ಪ್ರಶ್ನೆಗಳನ್ನು ಗೂಗಲ್ ಫಾರ್ಮ್ ಮೂಲಕ ಕೇಳಲಾಗಿದೆ. ಟ್ರಸ್ಟ್‌ನ ಪಾರದರ್ಶಕ ಆಡಳಿತಕ್ಕಾಗಿ ಈ ಹುದ್ದೆಯನ್ನು ಸೃಷ್ಟಿಸಲಾಗಿದ್ದು, ಸೆಪ್ಟೆಂಬರ್ 2ರೊಳಗೆ ಮೂರು ಹೆಸರುಗಳನ್ನು ಅಂತಿಮ ಶಿಫಾರಸು ಮಾಡಲಾಗುತ್ತದೆ. ಮತ್ತಷ್ಟು ಓದಿ
-
ಯುವಕರು ದೇಶದ ವರ್ತಮಾನದ ದೊಡ್ಡ ಶಕ್ತಿ ಎಂದ ಪ್ರಧಾನಿ ಮೋದಿ
ಅಂತರರಾಷ್ಟ್ರೀಯ ಯುವ ದಿನದ ಹಿನ್ನೆಲೆಯಲ್ಲಿ ದೇಶದ ಯುವಜನತೆಯನ್ನು ಉದ್ದೇಶಿಸಿ ಸಂದೇಶ ಹಂಚಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, “ಯುವ ಸ್ನೇಹಿತರು ದೇಶದ ಭವಿಷ್ಯ ಮಾತ್ರವಲ್ಲ, ಇಂದಿನ ಭಾರತದ ಅತ್ಯಂತ ದೊಡ್ಡ ಶಕ್ತಿ” ಎಂದು ಶ್ಲಾಘಿಸಿದ್ದಾರೆ. ಅಲ್ಲದೆ, ಸಂಸ್ಕೃತ ಶ್ಲೋಕದ ಮೂಲಕ ದೃಷ್ಟಿ, ಮಾತು ಮತ್ತು ಕಾಯಕದ ಮಹತ್ವವನ್ನು ಯುವ ಸಮೂಹಕ್ಕೆ ತಿಳಿಸಿದ್ದಾರೆ. ಮತ್ತಷ್ಟು ಓದಿ
-
ಪ್ರಜ್ವಲ್ ರೇವಣ್ಣ ಜೈಲು ಮೊಬೈಲ್ ಪ್ರಕರಣ: ಅಸಿಸ್ಟೆಂಟ್ ಸೂಪರಿಂಡೆಂಟ್ ಸಸ್ಪೆಂಡ್
ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಆಂಡ್ರಾಯ್ಡ್ ಮೊಬೈಲ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯಲೋಪದ ಹಿನ್ನೆಲೆ ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ಜೈಲು ಎಸ್‌ಪಿ ಅನ್ಶುಕುಮಾರ್‌ಗೆ ಡಿಜಿಪಿ ಅಲೋಕ್ ಕುಮಾರ್ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.
Published On - Aug 12,2026 10:03 AM




