Bank holidays: ಏಪ್ರಿಲ್ 13ರಿಂದ 16ರ ತನಕ ನಾಲ್ಕು ದಿನ ದೇಶದ ವಿವಿಧೆಡೆ ಬ್ಯಾಂಕ್ಗಳು ರಜಾ
ಏಪ್ರಿಲ್ 13ರಿಂದ 16ರ ತನಕ ನಾಲ್ಕು ದಿನಗಳ ಕಾಲ ದೇಶದ ವಿವಿಧೆಡೆ ಬ್ಯಾಂಕ್ಗಳಿಗೆ ರಜಾ ಇರುತ್ತದೆ. ಬ್ಯಾಂಕ್ಗಳ ರಜಾ ದಿನಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬದಲಾಗುತ್ತದೆ.
ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರಜಾ ಕ್ಯಾಲೆಂಡರ್ ಪ್ರಕಾರ, ವಿವಿಧ ಹಬ್ಬಗಳು ಮತ್ತು ಆಚರಣೆ ಹಿನ್ನೆಲೆಯಲ್ಲಿ ಏಪ್ರಿಲ್ 13, 2021ರಿಂದ ಏಪ್ರಿಲ್ 16ನೇ ತಾರೀಕಿನ ತನಕ ದೇಶದ ಹಲವು ಭಾಗಗಳಲ್ಲಿ ಬ್ಯಾಂಕ್ಗಳು ಮುಚ್ಚಿರುತ್ತವೆ. ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಕಾಯ್ದೆ ಅಡಿಯಲ್ಲಿ ಈ ರಜೆಗಳನ್ನು ಘೋಷಣೆ ಮಾಡಲಾಗಿದೆ. ಬ್ಯಾಂಕಿಂಗ್ ರಜಾ ದಿನಗಳು ಆಯಾ ರಾಜ್ಯಗಳಲ್ಲಿ ಆಚರಿಸುವ ಹಬ್ಬಗಳ ಮೇಲೆ ನಿರ್ಧಾರ ಆಗುತ್ತದೆ ಮತ್ತು ಒಂದು ರಾಜ್ಯಕ್ಕಿಂತ ಮತ್ತೊಂದಕ್ಕೆ ಇದು ಬದಲಾಗುತ್ತದೆ.
ಗುಧಿ ಪಡ್ವಾ, ತೆಲುಗು ಹೊಸ ವರ್ಷ, ಚಾಂದ್ರಮಾನ ಯುಗಾದಿ, ಚೈರೊಬಾ, ಮೊದಲ ನವರಾತ್ರ, ಬೈಸಾಖಿ ಹೀಗೆ ವಿವಿಧ ಹಬ್ಬಗಳ ಕಾರಣಗಳಿಗೆ ಏಪ್ರಿಲ್ 13ನೇ ತಾರೀಕಿನ ಮಂಗಳವಾರದಂದು ಹೈದರಾಬಾದ್, ಬೆಂಗಳೂರು, ಚೆನ್ನೈ, ಇಂಫಾಲ, ಜಮ್ಮು, ಮುಂಬೈ, ನಾಗ್ಪುರ್, ಪಣಜಿ ಹಾಗೂ ಶ್ರೀನಗರದಲ್ಲಿ ಬ್ಯಾಂಕ್ಗಳಿಗೆ ರಜಾ ಇರುತ್ತದೆ.
ಅಂಬೇಡ್ಕರ್ ಜಯಂತಿ, ತಮಿಳು ಹೊಸ ವರ್ಷದ ದಿನ, ಬಿಜು ಹಬ್ಬ, ಚೈರವೊಬಾ, ಬೊಹಗ್ ಬಿಹು ಹಬ್ಬಗಳಿದ್ದು, ಅಗರ್ತಲಾ, ಅಹ್ಮದಾಬಾದ್, ಬೆಲಾಪುರ್, ಬೆಂಗಳೂರು, ಭುವನೇಶ್ವರ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್ಟಕ್, ಗುವಾಹತಿ, ಹೈದರಾಬಾದ್, ಇಂಫಾಲ್, ಜೈಪುರ, ಜಮ್ಮು, ಕಾನ್ಪುರ್, ಕೊಚ್ಚಿ, ಕೋಲ್ಕತ್ತಾ, ಲಖನೌ, ಮುಂಬೈ, ನಾಗ್ಪುರ್, ನವದೆಹಲಿ, ಪಣಜಿ, ಪಾಟ್ನಾ, ರಾಂಚಿ, ಶ್ರೀನಗರ್, ತಿರುವನಂತಪುರಂನಲ್ಲಿ ಬ್ಯಾಂಕ್ಗಳಿಗೆ ಏಪ್ರಿಲ್ 14ರಂದು ರಜೆ ಇರುತ್ತದೆ.
ಏಪ್ರಿಲ್ 15ರಂದು ಹಿಮಾಚಲ ದಿನ, ಬಂಗಾಲಿ ಹೊಸ ವರ್ಷ, ಬೊಹಗ್ ಬಿಹು, ಸರ್ಹುಲ್ ಇದ್ದು, ಅಗರ್ತಲಾ, ಗುವಾಹತಿ, ಕೋಲ್ಕತ್ತಾ, ರಾಂಚಿ ಮತ್ತು ಶಿಮ್ಲಾದಲ್ಲಿ ಬ್ಯಾಂಕ್ಗಳು ರಜಾ ಇವೆ.
ಏಪ್ರಿಲ್ 16ನೇ ತಾರೀಕಿನಂದು ಬೊಹಗ್ ಬಿಹು ಇದ್ದು, ಗುವಾಹತಿಯಲ್ಲಿ ಬ್ಯಾಂಕ್ಗಳು ರಜಾ ಇವೆ. ಇವೆಲ್ಲವನ್ನೂ ಹೊರತುಪಡಿಸಿ, ಏಪ್ರಿಲ್ 21ನೇ ತಾರೀಕಿನಂದು ರಾಮನವಮಿ, ಏಪ್ರಿಲ್ 24ಕ್ಕೆ ಎರಡನೇ ಶನಿವಾರ ರಜಾ ಇದೆ.
ಇದನ್ನು ಓದಿ: ಐಸಿಐಸಿಐ ಬ್ಯಾಂಕ್ನಿಂದ iDelights Summer Bonanza; ಗ್ರಾಹಕರಿಗೆ ಬೇಸಿಗೆಯಲ್ಲಿ ಆಫರ್ಗಳ ಸುರಿಮಳೆ
(Bank holidays in various parts of India between April 13 to 16 because of festivals and celebrations.)
Published On - 3:21 pm, Mon, 12 April 21