ಯಾವುದೋ ನಂಬರಿಂದ ನಿಮ್ಮ ಖಾತೆಗೆ ಹಣ ಬಂದರೆ ಯಾಮಾರಬೇಡಿ; ವಂಚನೆಗೆ ಹ್ಯಾಕರ್​​ಗಳ ಹೊಸ ಪ್ಲಾನ್

|

Updated on: Oct 19, 2023 | 3:38 PM

ಬ್ಯಾಂಕಿಂಗ್ ವಂಚನೆಯ ಬಗ್ಗೆ ಬ್ಯಾಂಕ್‌ಗಳು ಮತ್ತು ಆರ್‌ಬಿಐ ಮೂಲಕವೂ ಗ್ರಾಹಕರಿಗೆ ಅರಿವು ಮೂಡಿಸಲಾಗುತ್ತಿದೆ. ಆದ್ದರಿಂದ ಆನ್‌ಲೈನ್‌ನಲ್ಲಿ ಯಾವುದಾದರೂ ವಂಚನೆ ಸಂಭವಿಸಿದರೆ ತಕ್ಷಣವೇ ಎಚ್ಚೆತ್ತುಕೊಂಡು, ಬ್ಯಾಂಕ್‌ಗೆ ಮಾಹಿತಿ ನೀಡಿ.

ಯಾವುದೋ ನಂಬರಿಂದ ನಿಮ್ಮ ಖಾತೆಗೆ ಹಣ ಬಂದರೆ ಯಾಮಾರಬೇಡಿ; ವಂಚನೆಗೆ ಹ್ಯಾಕರ್​​ಗಳ ಹೊಸ ಪ್ಲಾನ್
ಸೈಬರ್ ವಂಚನೆ
Image Credit source: iStock
Follow us on

ನವದೆಹಲಿ: ಇತ್ತೀಚೆಗೆ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ. ಜನರ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಅಕೌಂಟ್​ನಲ್ಲಿದ್ದ ಹಣವನ್ನು ದೋಚುವ ಹ್ಯಾಕರ್‌ಗಳು ಹೆಚ್ಚಾಗಿದ್ದಾರೆ. ಹ್ಯಾಕರ್​ಗಳು ಹೊಸ ಹೊಸ ವಿಧಾನಗಳ ಮೂಲಕ ಜನರನ್ನು ವಂಚಿಸುತ್ತಲೇ ಇದ್ದಾರೆ. ನಿಮ್ಮ ಫೋನ್‌ಗೆ OTP ಕಳುಹಿಸುವ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಕದಿಯುವುದು, ಹಣ ಪಾವತಿ ಮಾಡಲು QR ಅನ್ನು ಸ್ಕ್ಯಾನ್ ಮಾಡುವ ಮೂಲಕ ವಂಚನೆಗಳನ್ನು ಮಾಡಲಾಗುತ್ತಿದೆ.

ಬ್ಯಾಂಕಿಂಗ್ ವಂಚನೆಯ ಬಗ್ಗೆ ಬ್ಯಾಂಕ್‌ಗಳು ಮತ್ತು ಆರ್‌ಬಿಐ ಮೂಲಕವೂ ಗ್ರಾಹಕರಿಗೆ ಅರಿವು ಮೂಡಿಸಲಾಗುತ್ತಿದೆ. ಆದ್ದರಿಂದ ಆನ್‌ಲೈನ್‌ನಲ್ಲಿ ಯಾವುದಾದರೂ ವಂಚನೆ ಸಂಭವಿಸಿದರೆ ತಕ್ಷಣವೇ ಎಚ್ಚೆತ್ತುಕೊಂಡು, ಬ್ಯಾಂಕ್‌ಗೆ ಮಾಹಿತಿ ನೀಡಿ.

ಇದನ್ನೂ ಓದಿ: IMPS Money Transfer Rules: ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಇನ್ನೂ ಸುಲಭ; ಹೊಸ ಐಎಂಪಿಎಸ್ ವ್ಯವಸ್ಥೆ ಬಗ್ಗೆ ತಿಳಿಯಿರಿ

ಈಗ ವಂಚಕರು ಹೊಸ ಟ್ರಿಕ್ ಮೂಲಕ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಹ್ಯಾಕರ್​ಗಳು ಮೊದಲು ಯುಪಿಐ ಮೂಲಕ ಜನರಿಗೆ ಹಣ ಕಳುಹಿಸುತ್ತಾರೆ. ನಂತರ ಯಾರ ಖಾತೆಗೆ ಹಣ ಕಳುಹಿಸಲಾಗಿದೆಯೋ ಅವರಿಗೆ ಕರೆ ಮಾಡಿ ತಪ್ಪಾಗಿ ಹಣವನ್ನು ನಿಮ್ಮ ನಂಬರ್​ಗೆ ಕಳುಹಿಸಲಾಗಿದೆ ಎಂದು ಹೇಳುತ್ತಾರೆ. ಅವರು ಭಾವನಾತ್ಮಕವಾಗಿ ಜನರ ವಿಶ್ವಾಸವನ್ನು ಗಳಿಸುತ್ತಾರೆ. ಆಗ ಜನರು ಸೈಬರ್ ಕ್ರೈಂ ಮಾಡಿದವರ ಬಲೆಗೆ ಬೀಳುತ್ತಾರೆ. ಜನರು ಇವರ ಮಾತಿನಲ್ಲಿ ಸಿಕ್ಕಿಹಾಕಿಕೊಂಡು ಫೋನ್ ಮಾಡಿದವರ ನಂಬರ್‌ಗೆ ಹಣ ಕಳುಹಿಸುತ್ತಾರೆ. ನಂತರ ದುಷ್ಕರ್ಮಿಗಳು ಅವರ ಖಾತೆಯನ್ನು ಹ್ಯಾಕ್ ಮಾಡಿ ಖಾತೆಯಿಂದ ಹಣವನ್ನು ಹಿಂಪಡೆಯುತ್ತಾರೆ.

ಇದನ್ನೂ ಓದಿ: ಸೈಬರ್ ವಂಚನೆಗಳ ಕೇಂದ್ರವಾಗುತ್ತಿರುವ ಬೆಂಗಳೂರು, ಒಂಬತ್ತು ತಿಂಗಳಲ್ಲಿ 470 ಕೋಟಿ ರೂ. ದೋಚಿದ ವಂಚಕರು!

ಈ ರೀತಿಯ ವಂಚನೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಅಹಮದಾಬಾದ್ ಪೊಲೀಸರು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಯಾರಾದರೂ ತಪ್ಪಾಗಿ ನಿಮ್ಮ ಯುಪಿಐಗೆ ಹಣವನ್ನು ಕಳುಹಿಸಿದರೆ ಮತ್ತು ನಿಮಗೆ ಕರೆ ಮಾಡಿ ಯುಪಿಐ ಮೂಲಕ ಹಣವನ್ನು ಮರುಪಾವತಿ ಮಾಡಲು ಕೇಳಿದರೆ ನಿಮ್ಮ UPI ಮೂಲಕ ನೀವು ಯಾವುದೇ ಹಣವನ್ನು ಹಾಕಬಾರದು. ಅದರ ಬದಲಾಗಿ ನೀವು ಅವರನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದು ಅವರಿಗೆ ಹಣವನ್ನು ಹಿಂತಿರುಗಿಸಬೇಕು. ಇದರಿಂದ ನೀವು ಮೋಸ ಹೋಗುವುದಿಲ್ಲ. ನಿಮ್ಮ ಬ್ಯಾಂಕ್ ವಿವರಗಳು, OTP, ಪಾಸ್‌ವರ್ಡ್, ಪಿನ್ ಅಥವಾ ಕಾರ್ಡ್ ಸಂಖ್ಯೆಯನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡಬೇಡಿ ಎಂದು ಎಚ್ಚರಿಸಿದ್ದಾರೆ.

ಸೈಬರ್ ವಂಚನೆಯ ಸಂದರ್ಭದಲ್ಲಿ ನೀವು ಭಾರತ ಸರ್ಕಾರದ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಬೇಕು. ಯಾವುದೇ ರೀತಿಯ ಸೈಬರ್ ವಂಚನೆಯ ಸಂದರ್ಭದಲ್ಲಿ ನೀವು http://cybercrime.gov.in ನಲ್ಲಿ ದೂರು ಸಲ್ಲಿಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ