Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ-ಮೀರತ್ ಆರ್​ಆರ್​ಟಿಎಸ್ ಕಾರಿಡಾರ್​ಗೆ ನಾಳೆ ಪ್ರಧಾನಿ ಮೋದಿ ಚಾಲನೆ

ಭಾರತದಲ್ಲಿ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ಆರಂಭದ ಅಂಗವಾಗಿ ಪಿಎಂ ನರೇಂದ್ರ ಮೋದಿ ಸಾಹಿಬಾಬಾದ್‌ನಿಂದ ದುಹೈ ಡಿಪೋಗೆ ಸಂಪರ್ಕಿಸುವ ರಾಪಿಡ್‌ಎಕ್ಸ್ ರೈಲು ಸಂಚಾರಕ್ಕೆ ಶುಕ್ರವಾರ ಹಸಿರು ನಿಶಾನೆ ತೋರಲಿದ್ದಾರೆ.

ದೆಹಲಿ-ಮೀರತ್ ಆರ್​ಆರ್​ಟಿಎಸ್ ಕಾರಿಡಾರ್​ಗೆ ನಾಳೆ ಪ್ರಧಾನಿ ಮೋದಿ ಚಾಲನೆ
ರಾಪಿಡ್‌ಎಕ್ಸ್ ರೈಲು
Follow us
ಸುಷ್ಮಾ ಚಕ್ರೆ
|

Updated on:Oct 19, 2023 | 2:41 PM

ನವದೆಹಲಿ: ಭಾರತದ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಕಾರಿಡಾರ್​ ಶುಕ್ರವಾರ (ಅ. 20) ಉದ್ಘಾಟನೆಗೊಳ್ಳಲಿದೆ. ಭಾರತದ ಮೊದಲ ಇಂಟರ್‌ಸಿಟಿ ರ‍್ಯಾಪಿಡ್ ರೈಲಾದ ‘ರ‍್ಯಾಪಿಡ್‌ಎಕ್ಸ್’ಗೆ (RAPIDX) ಮೋದಿ ಚಾಲನೆ ನೀಡಲಿದ್ದಾರೆ. ಶುಕ್ರವಾರ ಬೆಳಗ್ಗೆ 11.15ಕ್ಕೆ ದೆಹಲಿ-ಮೀರತ್ ಆರ್‌ಆರ್‌ಟಿಎಸ್ ಕಾರಿಡಾರ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಇದಾದ ಬಳಿಕ ದೆಹಲಿ-ಗಾಜಿಯಾಬಾದ್-ಮೀರತ್ ಆರ್‌ಆರ್‌ಟಿಎಸ್ ಕಾರಿಡಾರ್‌ನ ಮೊದಲ 17 ಕಿ.ಮೀ ದೂರದ ವಿಭಾಗವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಭಾರತದಲ್ಲಿ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ಆರಂಭದ ಅಂಗವಾಗಿ ಪಿಎಂ ಮೋದಿ ಸಾಹಿಬಾಬಾದ್‌ನಿಂದ ದುಹೈ ಡಿಪೋಗೆ ಸಂಪರ್ಕಿಸುವ ರಾಪಿಡ್‌ಎಕ್ಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಮೊದಲ ಹಂತದಲ್ಲಿ ಈ ರೈಲು ಸಾಹಿಬಾಬಾದ್, ಗಾಜಿಯಾಬಾದ್ ಗುಲ್ಧರ್, ದುಹೈ ಮತ್ತು ದುಹೈ ಡಿಪೋ ಸೇರಿದಂತೆ 5 ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಲಿವೆ. ಎನ್‌ಸಿಆರ್‌ನಲ್ಲಿ ಒಟ್ಟು 8 ಆರ್‌ಆರ್‌ಟಿಎಸ್ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

ದೆಹಲಿ-ಗಾಜಿಯಾಬಾದ್-ಮೀರತ್ ಆರ್ ಆರ್ ಟಿಎಸ್ ಕಾರಿಡಾರ್‌ನ 17 ಕಿಮೀ ಆದ್ಯತೆಯ ಮಾರ್ಗವು ಉದ್ಘಾಟನೆಗೊಳ್ಳಲಿದ್ದು, ಅದು ಸಾಹಿಬಾಬಾದ್‌ನಿಂದ ‘ದುಹೈ ಡಿಪೋ’ಗೆ ಗಾಜಿಯಾಬಾದ್, ಗುಲ್ಧಾರ್ ಮತ್ತು ದುಹೈ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. ದೆಹಲಿ-ಘಾಜಿಯಾಬಾದ್-ಮೀರತ್ ಕಾರಿಡಾರ್‌ಗೆ ಪ್ರಧಾನ ಮಂತ್ರಿ ಮೋದಿ 2019ರ ಮಾರ್ಚ್ 8ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.

ಇದನ್ನೂ ಓದಿ: ನರೇಂದ್ರ ಮೋದಿ ಬುದ್ಧಿವಂತ ವ್ಯಕ್ತಿ ಎಂದು ಹೊಗಳಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಈ ಬಗ್ಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್​ಗಳನ್ನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಗರ ಚಲನಶೀಲತೆಯ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಬಿಆರ್​ಟಿಎಸ್​​ನಿಂದ ಆರ್​ಆರ್​ಟಿಎಸ್​ಗೆ ನಮ್ಮ ದೇಶ ಮೇಲ್ದರ್ಜೆಗೇರುತ್ತಿದೆ. ಬಡವರು ಮತ್ತು ಜನಸಾಮಾನ್ಯರಿಗೆ ಸಂಚರಿಸಲು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ಇಂತಹ ನಾಯಕನನ್ನು ಜಗತ್ತು ಇದುವರೆಗೂ ಕಂಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಬಿಆರ್‌ಟಿಎಸ್ ಎಂಬ ವಿಶಿಷ್ಟ ಪರಿಕಲ್ಪನೆಯ ಬಳಕೆಯನ್ನು ಪ್ರಾರಂಭಿಸಿದರು. ಇಂದು, ಗುಜರಾತ್‌ನ BRTS ನಗರ ಸಾರಿಗೆಯನ್ನು ಯಶಸ್ವಿಯಾಗಲು ಮತ್ತು ಸಾಮಾನ್ಯ ಜನರಿಗೆ ಸುಲಭವಾಗಿ ಬದುಕಲು ಹೇಗೆ ಪ್ಲಾನ್ ಮಾಡಬೇಕು ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಈಗ ಭಾರತದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು 150 ಕಿಮೀ ದೂರದಲ್ಲಿರುವ ಪಟ್ಟಣಗಳು ಮತ್ತು ನಗರಗಳನ್ನು ಸಂಪರ್ಕಿಸಲು RRTSನ ಮತ್ತೊಂದು ಪರಿಕಲ್ಪನೆಯನ್ನು ಪ್ರಾರಂಭಿಸುತ್ತಿದ್ದಾರೆ. ಈ ಯೋಜನೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾಗುತ್ತಿದೆ ಎಂದು ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಬುಧವಾರ ಒಂದೇ ದಿನ 7 ಲಕ್ಷ ಜನ ಪ್ರಯಾಣ

ಈ ಹೊಸ ಯೋಜನೆಯ ಸಾಧನ ಮತ್ತು ತಂತ್ರಜ್ಞಾನ ಆತ್ಮನಿರ್ಭರ್ ಮಾತ್ರವಲ್ಲ, ಇದು ಸಾಮಾನ್ಯ ಜನರ ಸೌಕರ್ಯ ಮತ್ತು ಉತ್ಪಾದಕತೆಗೆ ಬಹಳ ಮುಖ್ಯವಾಗಿದೆ. ಇದು ಭಾರತದ ನಗರ ಚಲನಶೀಲತೆಗೆ ಹೊಸ ದಿಕ್ಕನ್ನು ಸೂಚಿಸುತ್ತದೆ. ಜನರ ಜೀವನವನ್ನು ಸುಧಾರಿಸಲು ಅನನ್ಯ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸಲು ಇದು ಜಗತ್ತಿಗೆ ಪ್ರಧಾನಿ ಮೋದಿಯವರ ನಾಯಕತ್ವದ ಪಾಠವಾಗಿದೆ ಎಂದು ಬಣ್ಣಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Thu, 19 October 23