ಅಟ್ಟಾರಿ ಗಡಿಯಲ್ಲಿ ಹಾರಲಿದೆ ದೇಶದ ಅತ್ಯುನ್ನತ ತ್ರಿವರ್ಣ ಧ್ವಜ; ಅಮೃತಸರ ತಲುಪಿದ ಗಡ್ಕರಿ
Nitin Gadkari: ಈ ಧ್ವಜ ಸ್ತಂಭವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಿದೆ. ಗೋಲ್ಡನ್ ಗೇಟ್ ಮುಂಭಾಗದಲ್ಲಿ 360 ಅಡಿ ಎತ್ತರವಿರುವ ಹಳೆಯ ಧ್ವಜಸ್ತಂಭದಿಂದ 100 ಮೀಟರ್ ದೂರದಲ್ಲಿ ಈ ಧ್ವಜ ಸ್ತಂಭವನ್ನು ಸ್ಥಾಪಿಸಲಾಗಿದೆ. ನೆಲದಿಂದ 4 ಅಡಿ ಎತ್ತರದ ಬೇಸ್ ಮಾಡಲಾಗಿದ್ದು, ಅದರ ಮೇಲೆ ಈ ಧ್ವಜ ಸ್ತಂಭವನ್ನು ಸ್ಥಾಪಿಸಲಾಗಿದೆ.
ಅಮೃತಸರ ಅಕ್ಟೋಬರ್ 19: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಇಂದು(ಗುರುವಾರ) ಅಮೃತಸರ(Amritsar) ಪ್ರವಾಸದಲ್ಲಿದ್ದಾರೆ. ಅವರು ಬೆಳಿಗ್ಗೆ 11:30 ರ ಸುಮಾರಿಗೆ ದರ್ಬಾರ್ ಸಾಹಿಬ್‌ಗೆ ಆಗಮಿಸಿ ನಮನ ಸಲ್ಲಿಸಿದ್ದಾರೆ. ಈ ಭೇಟಿಯಲ್ಲಿ ನಿತಿನ್ ಗಡ್ಕರಿ ಅವರು ದೆಹಲಿ ಕತ್ರಾ ಎಕ್ಸ್‌ಪ್ರೆಸ್‌ವೇಯನ್ನು ಪರಿಶೀಲಿಸಲಿದ್ದಾರೆ. ಇದೇ ವೇಳೆ ಅಟ್ಟಾರಿ ಗಡಿಯಲ್ಲಿ (Attari border) ನೂತನವಾಗಿ ನಿರ್ಮಿಸಿರುವ ತ್ರಿವರ್ಣ ಧ್ವಜದ ಸ್ತಂಭವನ್ನು ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ. ಈ ತ್ರಿವರ್ಣ ಧ್ವಜಾರೋಹಣದೊಂದಿಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ‘ಝಂಡಾ ಊಂಚಾ ರಹೇ ಹಮಾರಾ’ ಹಾಡುತ್ತಾರೆ. ಅಟ್ಟಾರಿ ಗಡಿಯಲ್ಲಿ ಇಂದು ಹಾರಿಸಲಾದ ತ್ರಿವರ್ಣ ಧ್ವಜವು ದೇಶದ ಅತಿ ಎತ್ತರದ ಧ್ವಜವಾಗಿದೆ.
ಅಷ್ಟೇ ಅಲ್ಲ, ನೆರೆಯ ಪಾಕಿಸ್ತಾನಕ್ಕೆ ಹೋಲಿಸಿದರೆ ಅಟ್ಟಾರಿ ಗಡಿಯಲ್ಲಿ ಅಳವಡಿಸಿರುವ ತ್ರಿವರ್ಣ ಧ್ವಜದ ಎತ್ತರವನ್ನು ಭಾರತ 18 ಅಡಿಗಳಷ್ಟು ಹೆಚ್ಚಿಸಿದೆ. ಈ ಹಿಂದೆ ಭಾರತದ ತ್ರಿವರ್ಣ ಧ್ವಜದ ಎತ್ತರ 360 ಅಡಿಯಾಗಿದ್ದರೆ, ಪಾಕಿಸ್ತಾನದ ಧ್ವಜ ಸ್ತಂಭದ ಎತ್ತರ 400 ಅಡಿ ಇತ್ತು. ಭಾರತದ 418 ಅಡಿ ಎತ್ತರದ ಧ್ವಜಸ್ತಂಭವು ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಘಾಟನೆಗೆ ಕಾಯುತ್ತಿದೆ.
#amritsar दरबार साहिब में नतमस्तक हुए केंद्रीय मंत्री @nitin_gadkari . @KuldeepSinghAAP #Atari #wagha #indopak pic.twitter.com/sPaUm4uDRE
— TV9 Punjab-Himachal Pradesh-J&K (@TV9Punjab) October 19, 2023
3.5 ಕೋಟಿ ಖರ್ಚು
ಈ ಧ್ವಜ ಸ್ತಂಭವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಿದೆ. ಗೋಲ್ಡನ್ ಗೇಟ್ ಮುಂಭಾಗದಲ್ಲಿ 360 ಅಡಿ ಎತ್ತರವಿರುವ ಹಳೆಯ ಧ್ವಜಸ್ತಂಭದಿಂದ 100 ಮೀಟರ್ ದೂರದಲ್ಲಿ ಈ ಧ್ವಜ ಸ್ತಂಭವನ್ನು ಸ್ಥಾಪಿಸಲಾಗಿದೆ. ನೆಲದಿಂದ 4 ಅಡಿ ಎತ್ತರದ ಬೇಸ್ ಮಾಡಲಾಗಿದ್ದು, ಅದರ ಮೇಲೆ ಈ ಧ್ವಜ ಸ್ತಂಭವನ್ನು ಸ್ಥಾಪಿಸಲಾಗಿದೆ.
ಪಾಕಿಸ್ತಾನ 400 ಅಡಿ ಎತ್ತರದ ಧ್ವಜವನ್ನು ನೆಟ್ಟಿತ್ತು
ಭಾರತವು 2017 ರಲ್ಲಿ 360 ಅಡಿ ಎತ್ತರದ ಧ್ವಜಸ್ತಂಭವನ್ನು ಸ್ಥಾಪಿಸಿದ ನಂತರ, ಅದೇ ವರ್ಷದಲ್ಲಿ ಪಾಕಿಸ್ತಾನವು ತನ್ನ ಗಡಿಯಲ್ಲಿ 400 ಅಡಿ ಎತ್ತರದ ಧ್ವಜಸ್ತಂಭವನ್ನು ಸ್ಥಾಪಿಸಿತು. ಪಾಕಿಸ್ತಾನದ ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಸಾಕಷ್ಟು ವಿವಾದಗಳು ನಡೆದಿದ್ದವು.
ಪಾಕಿಸ್ತಾನದ ಧ್ವಜ ಸ್ತಂಭದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಲಾಗಿದ್ದು, ಭಾರತದ ಗಡಿಯೊಳಗೆ ಪಾಕಿಸ್ತಾನವು ಹಲವಾರು ಕಿಲೋಮೀಟರ್‌ಗಳವರೆಗೆ ಮೇಲ್ವಿಚಾರಣೆ ಮಾಡಬಹುದು. ಪ್ರಸ್ತುತ, NHAI ಹೊಸ ಧ್ವಜ ಸ್ತಂಭದ ಉದ್ಘಾಟನೆಗೆ ಸುಮಾರು ಐದು ರಾಷ್ಟ್ರಧ್ವಜಗಳನ್ನು ಇರಿಸಿದೆ. ಇದರ ಉದ್ದ ಮತ್ತು ಅಗಲ 120×80 ಅಡಿ.
ದೇಶದ ಅತಿ ಎತ್ತರದ ಧ್ವಜ
ಇದುವರೆಗೆ ದೇಶದ ಅತ್ಯುನ್ನತ ಧ್ವಜವನ್ನು ಕರ್ನಾಟಕದ ಬೆಳಗಾವಿಯಲ್ಲಿ ಹಾರಿಸಲಾಗುತ್ತಿದೆ. ಇದರ ಎತ್ತರ 110 ಮೀಟರ್ ಅಂದರೆ 360.8 ಅಡಿ, ಇದು ಅಟ್ಟಾರಿ ಗಡಿಯಲ್ಲಿ ಹಾರಿಸಲಾದ ತ್ರಿವರ್ಣ ಧ್ವಜಕ್ಕಿಂತ ಕೇವಲ 0.8 ಅಡಿ ಹೆಚ್ಚು. ಆದರೆ ನೂತನ ಧ್ವಜ ಸ್ತಂಭ ಉದ್ಘಾಟನೆ ಬಳಿಕ ಅಟ್ಟಾರಿ ಗಡಿಯಲ್ಲಿ ದೇಶದ ಅತ್ಯುನ್ನತ ತ್ರಿವರ್ಣ ಧ್ವಜ ಹಾರಾಡಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:53 pm, Thu, 19 October 23