TRP ಸಮರದಲ್ಲಿ ಅಲ್ಪವಿರಾಮ: ಪ್ರತಿ ವಾರದ ರೇಟಿಂಗ್​ ಸೂಚ್ಯಂಕಕ್ಕೆ ಬ್ರೇಕ್​

|

Updated on: Oct 15, 2020 | 6:08 PM

ದೆಹಲಿ: TRPಯಿಂದ, TRPಗಾಗಿ, TRPಗೋಸ್ಕರ ಎಂದು 24X7 ನೇರ ಹಣಾಹಣಿಯಲ್ಲಿದ್ದ ಹಲವಾರು ಸುದ್ದಿ ವಾಹಿನಿಗಳ TRP ಸಮರಕ್ಕೆ ಇದೀಗ ತಾತ್ಕಾಲಿಕ ಬ್ರೇಕ್​ ಬಿದ್ದಿದೆ. ಟೆಲಿವಿಷನ್​ ರೇಟಿಂಗ್​ ಪಾಯಿಂಟ್​ ಅಥವಾ ಟಿಆರ್​ಪಿ ಎಂದೇ ಹೆಸರುವಾಸಿಯಾಗಿರುವ ಈ ಸೂಚ್ಯಂಕವನ್ನು ದೇಶದ ಪ್ರತಿ ಭಾಷೆಯ ಸುದ್ದಿವಾಹಿನಿ ಮತ್ತು ಮನರಂಜನಾ ವಾಹಿನಿಗಳಿಗೆ ಪ್ರತಿ ವಾರ ನೀಡಲಾಗುತ್ತಿತ್ತು. ಆದರೆ, ಇದೀಗ TRP ಶ್ರೇಣಿ ನೀಡುತ್ತಿದ್ದ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (BARC) ಇನ್ನು 8 ರಿಂದ 12 ವಾರಗಳ ಕಾಲ ಈ ಸೂಚ್ಯಂಕವನ್ನು ದೇಶದ […]

TRP ಸಮರದಲ್ಲಿ ಅಲ್ಪವಿರಾಮ: ಪ್ರತಿ ವಾರದ ರೇಟಿಂಗ್​ ಸೂಚ್ಯಂಕಕ್ಕೆ ಬ್ರೇಕ್​
Follow us on

ದೆಹಲಿ: TRPಯಿಂದ, TRPಗಾಗಿ, TRPಗೋಸ್ಕರ ಎಂದು 24X7 ನೇರ ಹಣಾಹಣಿಯಲ್ಲಿದ್ದ ಹಲವಾರು ಸುದ್ದಿ ವಾಹಿನಿಗಳ TRP ಸಮರಕ್ಕೆ ಇದೀಗ ತಾತ್ಕಾಲಿಕ ಬ್ರೇಕ್​ ಬಿದ್ದಿದೆ. ಟೆಲಿವಿಷನ್​ ರೇಟಿಂಗ್​ ಪಾಯಿಂಟ್​ ಅಥವಾ ಟಿಆರ್​ಪಿ ಎಂದೇ ಹೆಸರುವಾಸಿಯಾಗಿರುವ ಈ ಸೂಚ್ಯಂಕವನ್ನು ದೇಶದ ಪ್ರತಿ ಭಾಷೆಯ ಸುದ್ದಿವಾಹಿನಿ ಮತ್ತು ಮನರಂಜನಾ ವಾಹಿನಿಗಳಿಗೆ ಪ್ರತಿ ವಾರ ನೀಡಲಾಗುತ್ತಿತ್ತು.

ಆದರೆ, ಇದೀಗ TRP ಶ್ರೇಣಿ ನೀಡುತ್ತಿದ್ದ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (BARC) ಇನ್ನು 8 ರಿಂದ 12 ವಾರಗಳ ಕಾಲ ಈ ಸೂಚ್ಯಂಕವನ್ನು ದೇಶದ ಎಲ್ಲಾ ಸುದ್ದಿವಾಹಿನಿಗಳಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೆಲವು ದಿನಗಳ ಹಿಂದೆ ಭಾರಿ ವಿವಾದ ಸೃಷ್ಟಿಸಿದ ಟಿಆರ್​ಪಿ ಹಗರಣದ ಹಿನ್ನೆಲೆಯಲ್ಲಿ BARC ಸಂಸ್ಥೆ ಇಂದು ಈ ನಿರ್ಧಾರ ಕೈಗೊಂಡಿದೆ. TRP ಸ್ಥಗಿತಗೊಂಡಿರುವ ಈ ವೇಳೆಯಲ್ಲಿ ಸಂಸ್ಥೆಯು TRP ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸದೃಢಗೊಳಿಸುವತ್ತ ತನ್ನ ಗಮನ ಹರಿಸುತ್ತದೆ ಎಂದು BARC ತಿಳಿಸಿದೆ.

ಜೊತೆಗೆ, ಮತ್ತೆಂದೂ ಈ ರೀತಿಯ ಹಗರಣ ಆಗದಂತೆ ಕ್ರಮ ಕೈಗೊಳ್ಳುತ್ತದೆ ಎಂದೂ ಸಹ ಹೇಳಿದೆ. ಸದ್ಯ ದೇಶದ ಎಲ್ಲಾ ಭಾಷೆಯ ಸುದ್ದಿವಾಹಿನಿಗಳಿಗೆ ಈ ಕ್ರಮ ಅನ್ವಯಿಸುತ್ತದೆ. ಹಾಗಾಗಿ ಸದ್ಯಕ್ಕೆ ಪ್ರತಿ ವಾರದ ರೇಟಿಂಗ್​ ಸೂಚ್ಯಂಕಕ್ಕೆ TRP ಬ್ರೇಕ್​ ಬಿದ್ದಿದೆ. ನ್ಯಾಷನಲ್​ ಬ್ರಾಡ್​ಕಾಸ್ಟರ್ಸ್​ ಅಸೋಸಿಯೇಷನ್​ ಸಂಸ್ಥೆಯು BARC ಈ ನಿರ್ಧಾರವನ್ನು ಸ್ವಾಗತಿಸಿದೆ. ತಾವು ಈ ನಿರ್ಧಾರಕ್ಕೆ ಬದ್ಧರಿದ್ದೇವೆ ಎಂದು ತಿಳಿಸಿದೆ.

Published On - 5:59 pm, Thu, 15 October 20