
ನವದೆಹಲಿ, ಆಗಸ್ಟ್ 1: ಚುನಾವಣಾ ಆಯೋಗವು ಮತ ಕಳ್ಳತನದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ನಮ್ಮ ಬಳಿ ಪುರಾವೆಗಳಿವೆ. ಇಂತಹ ಅಕ್ರಮದಲ್ಲಿ ಚುನಾವಣಾ ಆಯೋಗದಲ್ಲಿ ಭಾಗಿಯಾಗಿರುವ ಯಾರನ್ನೂ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಸ್ಫೋಟಕ ಹೇಳಿಕೆ ನೀಡಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, “ಪ್ರತಿದಿನ ಮಾಡಲಾಗುವ ಇಂತಹ ಆಧಾರರಹಿತ ಆರೋಪಗಳನ್ನು ಚುನಾವಣಾ ಆಯೋಗ (Election Commission) ನಿರ್ಲಕ್ಷಿಸುತ್ತದೆ. ಪದೇ ಪದೇ ಬೆದರಿಕೆಗಳ ಹೊರತಾಗಿಯೂ ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡುತ್ತಿರುವ ಎಲ್ಲಾ ಚುನಾವಣಾ ಅಧಿಕಾರಿಗಳಿಗೆ ಕೂಡ ಇಂತಹ ಹೇಳಿಕೆಯನ್ನು ನಿರ್ಲಕ್ಷಿಸುವಂತೆ ಸೂಚಿಸುತ್ತದೆ” ಎಂದು ತಿಳಿಸಿದೆ.
ಭಾರತೀಯ ಚುನಾವಣಾ ಆಯೋಗ (ECI) ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮತದಾರರ ವಂಚನೆಯ ಗಂಭೀರ ಆರೋಪವನ್ನು ದೃಢವಾಗಿ ತಿರಸ್ಕರಿಸಿದೆ. ಆ ಆರೋಪ “ಆಧಾರರಹಿತ” ಮತ್ತು “ಬೇಜವಾಬ್ದಾರಿಯುವತವಾದುದು” ಎಂದು ಆಯೋಗ ಟೀಕಿಸಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮತ ಕಳ್ಳತನಕ್ಕೆ ಇಸಿಐ ನೇರವಾಗಿ ಸಹಕರಿಸುತ್ತಿದೆ ಎಂದು ಆರೋಪಿಸಿದ್ದರು. ಇತ್ತೀಚೆಗೆ ಬಿಹಾರದಲ್ಲಿ ನಡೆಸಲಾದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಉಲ್ಲೇಖಿಸಿದ ಅವರು, ಚುನಾವಣಾ ಆಯೋಗದ ಕ್ರಮಗಳು ಆಡಳಿತಾರೂಢ ಬಿಜೆಪಿಯ ಪರವಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಚುನಾವಣಾ ಆಯೋಗ ಮತ ಕಳ್ಳತನದಲ್ಲಿ ಭಾಗಿ; ಬಿಹಾರ ಚುನಾವಣೆಗೂ ಮುನ್ನ ಆಟಂ ಬಾಂಬ್ ಹಾಕಿದ ರಾಹುಲ್ ಗಾಂಧಿ!
Election Commission of India’s further response to Lok Sabha LoP Rahul Gandhi –
“1. ECI sends a mail to him on 12 June 2025. He does not come.
2. ECI sends him a letter on 12 June 2025, he does not respond.
3. He has never sent any letter to ECI on any issue, whatsoever.
4.… pic.twitter.com/8JRTica7Qk— ANI (@ANI) August 1, 2025
ವಿರೋಧ ಪಕ್ಷದ ಸ್ವತಂತ್ರ ತನಿಖೆಯು ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (BJP) ಲಾಭವಾಗುವಂತೆ ಭಾರತದ ಚುನಾವಣಾ ಆಯೋಗವು ಬೃಹತ್ “ಮತ ಕಳ್ಳತನ”ದಲ್ಲಿ ಭಾಗಿಯಾಗಿದೆ ಎಂದು ಬಹಿರಂಗಪಡಿಸಿದೆ ಎಂದು ವಿಶೇಷ ತೀವ್ರ ಪರಿಷ್ಕರಣೆ (SIR) ಬಗ್ಗೆ ಹೆಚ್ಚುತ್ತಿರುವ ಗದ್ದಲದ ನಡುವೆ ಇಂದು ಕಾಂಗ್ರೆಸ್‌ನ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದರು. “ಮತಗಳನ್ನು ಕದಿಯಲಾಗುತ್ತಿದೆ. ಚುನಾವಣಾ ಆಯೋಗವು ಈ ಮತ ಕಳ್ಳತನದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ನಮ್ಮ ಬಳಿ ಸ್ಪಷ್ಟ ಪುರಾವೆಗಳಿವೆ. ನಾನು ಈ ಹೇಳಿಕೆಯನ್ನು ಸುಮ್ಮನೆ ಹೇಳುತ್ತಿಲ್ಲ. ನಮ್ಮಲ್ಲಿ ಶೇ. 100ರಷ್ಟು ಪುರಾವೆಗಳಿವೆ. ನಾವು ಅದನ್ನು ಸಾರ್ವಜನಿಕಗೊಳಿಸಿದ ನಂತರ ಚುನಾವಣಾ ಆಯೋಗಕ್ಕೆ ಬಚ್ಚಿಟ್ಟುಕೊಳ್ಳಲು ಎಲ್ಲೂ ಸ್ಥಳವಿರುವುದಿಲ್ಲ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:20 pm, Fri, 1 August 25