ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಬೆಂಗಳೂರು ಪೊಲೀಸರು ಜೌನ್ಪುರಕ್ಕೆ ತೆರಳಿದ್ದರು. ಆದರೆ ಅಷ್ಟರಲ್ಲಾಗಲೇ ಅತುಲ್ ಅತ್ತೆ ಮನೆಗೆ ಬೀಗ ಹಾಕಿಕೊಂಡು ಬೈಕ್ನಲ್ಲಿ ಪರಾರಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಬಳಿಕ ಪೊಲೀಸರು ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ಬರಿಗೈಯಲ್ಲಿ ವಾಪಸಾಗಿದ್ದಾರೆ.
ಅತುಲ್ ಸುಭಾಷ್ ಅವರ ಸಹೋದರ ನೀಡಿರುವ ದೂರಿನ ಮೇರೆಗೆ ಅತುಲ್ನ ಅತ್ತೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗಳೂರು ಪೊಲೀಸರ ತಂಡ ಗುರುವಾರ ಉತ್ತರ ಪ್ರದೇಶಕ್ಕೆ ತೆರಳಿತ್ತು, ಅತ್ತೆಯ ಫೋನ್ ಸ್ವಿಚ್ಡ್ ಆಫ್ ಆಗಿತ್ತು, ಮನೆಗೆ ಬೀಗ ಹಾಕಲಾಗಿತ್ತು.
ನಿಶಾ ಮತ್ತು ಅವರ ಮಗ ಅನುರಾಗ್ ಬುಧವಾರ ರಾತ್ರಿ ಬೈಕ್ನಲ್ಲಿ ಮನೆಯಿಂದ ಹೊರಟಿದ್ದರು ಎಂದು ಎಂದು ಜಾನ್‌ಪುರ್ ಕೊತ್ವಾಲಿ ಇನ್ಸ್‌ಪೆಕ್ಟರ್ ಮಿಥಿಲೇಶ್ ಕುಮಾರ್ ಮಿಶ್ರಾ ಹೇಳಿದ್ದಾರೆ. ಅಲ್ಲಿ ಮೊಕ್ಕಾಂ ಹೂಡಿದ್ದ ಕೆಲ ಪತ್ರಕರ್ತರು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳಿದಾಗ, ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಅನುರಾಗ್ ಉತ್ತರಿಸಿದ್ದರು.
ಮತ್ತಷ್ಟು ಓದಿ: ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್: ರಾಷ್ಟ್ರಪತಿ, ಸುಪ್ರೀಂ ಜಡ್ಜ್ಗೆ ಮೇಲ್ ಮಾಡಿದ್ದ ಟೆಕ್ಕಿ
ಸಿಂಘಾನಿಯಾ ಕುಟುಂಬ ಎರಡು ತಿಂಗಳ ಹಿಂದೆ ಇಲ್ಲಿ ವಾಸಿಸಲು ಬಂದಿತ್ತು. ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಮನೆಯ ಪ್ರವೇಶದ್ವಾರದಲ್ಲಿ ನೋಟಿಸ್ ಅಂಟಿಸಿದ್ದು, ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ನಿವಾಸಿಗಳನ್ನು ಕೇಳಿದ್ದಾರೆ.
ಬೆಂಗಳೂರು ಪೊಲೀಸ್‌ನ ಡಿಸಿಪಿ ಶಿವಕುಮಾರ್ ಗುಣಾರೆ ಮಾತನಾಡಿ, ನಾವು ಸ್ಥಳೀಯ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶಂಕಿತರ ಪತ್ತೆಗೆ ಅವರು ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ. ವಕೀಲ ದಿನೇಶ್ ಮಿಶ್ರಾ ಮಾತನಾಡಿ, ಅವರು ಮಾಸಿಕ 84,000 ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಮತ್ತು ಜುಲೈನಲ್ಲಿ ಜೌನ್‌ಪುರ್ ಕೌಟುಂಬಿಕ ನ್ಯಾಯಾಲಯವು ಅವರ ಮಗನಿಗೆ ತಿಂಗಳಿಗೆ 40,000 ರೂಪಾಯಿಗಳನ್ನು ನೀಡುವಂತೆ ಆದೇಶಿಸಿತ್ತು.
VIDEO | Bengaluru techie death case: Visuals from outside the residence of in-laws of Atul Subhash in Jaunpur, Uttar Pradesh.
(Full video available on PTI Videos – https://t.co/n147TvrpG7) pic.twitter.com/JGHuYuzCdF
— Press Trust of India (@PTI_News) December 11, 2024
ಅದು ಅವರಿಗೆ ಹೊರೆಯಾಗಿರಬಹುದು. ಅತುಲ್ ಅವರು 24 ಪುಟಗಳ ಸೂಸೈಡ್ ನೋಟ್ ಮತ್ತು 81 ನಿಮಿಷಗಳ ವೀಡಿಯೊವನ್ನು ಮಾಡಿಟ್ಟಿದ್ದರು. ಅತುಲ್ ಮತ್ತು ನಿಕಿತಾ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಭೇಟಿಯಾದರು ಮತ್ತು ಏಪ್ರಿಲ್ 26, 2019 ರಂದು ವಾರಾಣಸಿಯಲ್ಲಿ ವಿವಾಹವಾಗಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:45 am, Fri, 13 December 24