ಟಿವಿ9 ನೆಟ್ವರ್ಕ್ ಲೀಡರ್ಸ್ ಆಫ್ ರೋಡ್ ಟ್ರಾನ್ಸ್​ಪೋರ್ಟ್; ಬೆಂಗಳೂರಿನಲ್ಲಿ ಇಂದು ಸಮಾವೇಶ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Oct 27, 2023 | 1:11 PM

TV9 Network The Leaders of Road Transport Conclave: ಎರಡನೇ ಸೀಸನ್​ನ ‘ದಿ ಲೀಡರ್ಸ್ ಆಫ್ ರೋಡ್ ಟ್ರಾನ್ಸ್​ಪೋರ್ಟ್’ ಸಮಾವೇಶ ಇಂದು ಅಕ್ಟೋಬರ್ 27ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ಎರಡನೇ ಹಂತದ ಈ ಕಾಂಕ್ಲೇವ್ ಸೀರೀಸ್ ಶುರುವಾಗುತ್ತದೆ. ಬಹಳ ಸುಸ್ಥಿರವಾದ, ತಂತ್ರಜ್ಞಾನ ಬೆಂಬಲಿತವಾದ, ನಾವೀನ್ಯವಾದ ಮತ್ತು ಸುರಕ್ಷಿತವಾದ ರಸ್ತೆ ಸಾರಿಗೆ ವ್ಯವಸ್ಥೆಯನ್ನು ಹೇಗೆ ರೂಪಿಸಬಹುದು ಎಂದು ಈ ಸರಣಿ ಕಾರ್ಯಕ್ರಮಗಳಲ್ಲಿ ಚರ್ಚಿಸಲಾಗುತ್ತದೆ.

ಟಿವಿ9 ನೆಟ್ವರ್ಕ್ ಲೀಡರ್ಸ್ ಆಫ್ ರೋಡ್ ಟ್ರಾನ್ಸ್​ಪೋರ್ಟ್; ಬೆಂಗಳೂರಿನಲ್ಲಿ ಇಂದು ಸಮಾವೇಶ
ಟಿವಿ9 ನೆಟ್ವರ್ಕ್ ಲೀಡರ್ಸ್ ಆಫ್ ರೋಡ್ ಟ್ರಾನ್ಸ್​ಪೋರ್ಟ್
Follow us on

ಬೆಂಗಳೂರು, ಅಕ್ಟೋಬರ್ 27: ಎರಡನೇ ಸೀಸನ್​ನ ‘ದಿ ಲೀಡರ್ಸ್ ಆಫ್ ರೋಡ್ ಟ್ರಾನ್ಸ್​ಪೋರ್ಟ್’ ಸಮಾವೇಶ ಇಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಭಾರತದ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಲಯದ ಪ್ರಮುಖ ಸಂಗತಿಗಳನ್ನು ಈ ಕಾರ್ಯಕ್ರಮದಲ್ಲಿ ಚರ್ಚಿಸಲಾಗುತ್ತದೆ. ಈ ಕ್ಷೇತ್ರದ ಸಾಧನೆಗಳು ಮತ್ತು ಯಶೋಗಾಥೆಗಳನ್ನು ಗುರುತಿಸಿ ಸಂಭ್ರಮಾಚರಿಸಲಾಗುತ್ತದೆ.

ರಸ್ತೆ ಸುರಕ್ಷತೆ, ತಂತ್ರಜ್ಞಾನ, ನಾವೀನ್ಯತೆ ಮತ್ತು ಸುಸ್ಥಿರತೆ ಇತ್ಯಾದಿ ಅಂಶಗಳಿರುವ ಸ್ಮಾರ್ಟ್ ಮೊಬಿಲಿಟಿ ಇಕೋಸಿಸ್ಟಂ ಅನ್ನು ರೂಪಿಸಲು ಬೇಕಾದ ಅವಶ್ಯಕ ಸಂಗತಿಗಳನ್ನು ಬೆಳಕಿಗೆ ತರುವ ಪ್ರಯತ್ನವಾಗಲಿದೆ. ಇದು ಈ ಅಭಿಯಾನದ ಮೊದಲ ಹಂತವಾಗಿದೆ. ರಸ್ತೆ ಸಾರಿಗೆ ನಾಯಕರ ಸಮಾವೇಶವು ಈ ಹಂತದಲ್ಲಿದೆ. ಟ್ರಾನ್ಸ್​ಪೋರ್ಟರ್​ಗಳು ಮೊದಲಾದ ಸಂಬಂಧಿತರು ಪ್ಯಾನಲ್ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನ 12 ಜಿಲ್ಲೆಗಳಲ್ಲಿ ಅ. 29ರಿಂದ ಈಶಾನ್ಯ ಮಾನ್ಸೂನ್ ಅಬ್ಬರ

ಈ ಸೀಸನ್​ನ ಲೀಡರ್ಸ್ ಅಫ್ ರೋಡ್ ಟ್ರಾನ್ಸ್​ಪೋರ್ಟ್ ಕೂಟ ಒಟ್ಟು ನಾಲ್ಕು ಕಡೆ ನಡೆಯಲಿದೆ. ದೆಹಲಿ, ಜೈಪುರ, ಮುಂಬೈ ಮತ್ತು ಬೆಂಗಳೂರಿನಲ್ಲಿ ಹಂತ ಹಂತವಾಗಿ ಈ ಕಾಂಕ್ಲೇವ್ ನಡೆಯುತ್ತಿದೆ. ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ತಂದಿರುವ ಕಾಂಟಿನೆಂಟಲ್ ಕಂಪನಿಯ ಪ್ರತಿನಿಧಿಗಳು ಪ್ಯಾನಲ್ ಡಿಸ್ಕಶನ್​ನ ಭಾಗವಾಗಿರಲಿದ್ದಾರೆ.

ಬೆಂಗಳೂರಿನಲ್ಲಿ ಇಂದು ಅಕ್ಟೋಬರ್ 27ರಂದು ಎರಡನೇ ಹಂತದ ಈ ಕಾಂಕ್ಲೇವ್ ಸೀರೀಸ್ ಆರಂಭವಾಗುತ್ತಿದೆ. ಬಹಳ ಸುಸ್ಥಿರವಾದ, ತಂತ್ರಜ್ಞಾನ ಬೆಂಬಲಿತವಾದ, ನಾವೀನ್ಯವಾದ ಮತ್ತು ಸುರಕ್ಷಿತವಾದ ರಸ್ತೆ ಸಾರಿಗೆ ವ್ಯವಸ್ಥೆಯನ್ನು ಹೇಗೆ ರೂಪಿಸಬಹುದು ಎಂದು ಈ ಸರಣಿ ಕಾರ್ಯಕ್ರಮಗಳಲ್ಲಿ ಚರ್ಚಿಸಲಾಗುತ್ತದೆ. ಕಳೆದ ವರ್ಷ ನಡೆದ ಮೊದಲ ಸೀಸನ್​ನ ಸಮಾವೇಶ ಭರ್ಜರಿ ಯಶಸ್ವಿಯಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:27 am, Fri, 27 October 23