ತಮಿಳುನಾಡಿನ 12 ಜಿಲ್ಲೆಗಳಲ್ಲಿ ಅ. 29ರಿಂದ ಈಶಾನ್ಯ ಮಾನ್ಸೂನ್ ಅಬ್ಬರ
Tamil Nadu Rains: ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಭಾನುವಾರದಿಂದ ಸಕ್ರಿಯಗೊಳ್ಳುವ ನಿರೀಕ್ಷೆಯಿದೆ. ಮುಂದಿನ ಕೆಲವು ದಿನಗಳಲ್ಲಿ ತಮಿಳುನಾಡು ರಾಜ್ಯದಾದ್ಯಂತ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತದೆ. ದಕ್ಷಿಣ ತಮಿಳುನಾಡಿನಲ್ಲಿ ಚಂಡಮಾರುತ ಉಂಟಾಗಲಿದೆ.
ಚೆನ್ನೈ: ಹಮೂನ್ ಚಂಡಮಾರುತದ ಆರ್ಭಟ ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡಿದೆ. ಇದರ ನಡುವೆ ಅಕ್ಟೋಬರ್ 29ರಿಂದ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ. ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಭಾನುವಾರದಿಂದ ಸಕ್ರಿಯಗೊಳ್ಳುವ ನಿರೀಕ್ಷೆಯಿದೆ. ಮುಂದಿನ ಕೆಲವು ದಿನಗಳಲ್ಲಿ ತಮಿಳುನಾಡು ರಾಜ್ಯದಾದ್ಯಂತ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತದೆ. ದಕ್ಷಿಣ ತಮಿಳುನಾಡಿನಲ್ಲಿ ಚಂಡಮಾರುತ ಉಂಟಾಗಲಿದ್ದು, ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು, ಪೆರಂಬಲೂರ್, ಅರಿಯಲೂರ್, ಮೈಲಾಡುತುರೈ, ತಂಜಾವೂರು, ತಿರುವರೂರು, ನಾಗಪಟ್ಟಿಣಂ, ಪುದುಕ್ಕೊಟ್ಟೈನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ತಿಳಿಸಿದೆ. ತಿರುಚಿರಾಪಳ್ಳಿ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ ಅಕ್ಟೋಬರ್ 29ರಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಅದೇ ರೀತಿ ಕೊಯಮತ್ತೂರು, ನೀಲಗಿರಿ, ಮೈಲಾಡುತುರೈ, ತಂಜಾವೂರು, ತಿರುವರೂರ್, ನಾಗಪಟ್ಟಣಂ, ಪುದುಕೊಟ್ಟೈ, ತಿರುಚಿರಾಪಳ್ಳಿ, ದಿಂಡಿಗಲ್, ಅರಿಯಲೂರ್, ಪೆರಂಬಲೂರು, ಸೇಲಂ, ನಾಮಕ್ಕಲ್, ವಿರುದುನಗರ, ತೂತುಕುಡಿ, ಮಧುರೈ ಮತ್ತು ಥೇಣಿ ಜಿಲ್ಲೆಗಳಲ್ಲಿ ಅಕ್ಟೋಬರ್ 30ರಂದು ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ತಿಂಗಳಿನಲ್ಲಿ ಮುಂಗಾರು ಕ್ಷೀಣಿಸಿತ್ತು. ಈ ಬಾರಿ ತಮಿಳುನಾಡಿನಲ್ಲಿ ಶೇ. 41ರಷ್ಟು ಮಳೆಯ ಕೊರತೆ ದಾಖಲಾಗಿದೆ. ದಕ್ಷಿಣದ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲೂ ಮಳೆ ಬಹಳ ಕಡಿಮೆಯಾಗಿತ್ತು.
ಇದನ್ನೂ ಓದಿ: Karnataka Rain: ರಾಜ್ಯಾದ್ಯಂತ ಒಣಹವೆ, ಅಕ್ಟೋಬರ್ 29ರಿಂದ ಎರಡು ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಕನ್ಯಾಕುಮಾರಿಯಲ್ಲಿ ಅಕ್ಟೋಬರ್‌ನಲ್ಲಿ ಶೇ. 144ರಷ್ಟು ಅಧಿಕ ಮಳೆಯಾಗಿದೆ. ಈ ಬಾರಿಯ ದುರ್ಬಲ ಮಾನ್ಸೂನ್‌ಗೆ ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತ ಕಾರಣವೆಂದು ಹೇಳಲಾಗಿದೆ. ಕನ್ಯಾಕುಮಾರಿಯಲ್ಲಿ ದಾಖಲೆಯ ಮಳೆಯಾಗಿದ್ದರೂ ಉಳಿದೆಡೆ ಮಳೆಯ ಕೊರತೆಯಾಗಿದೆ. ತಮಿಳುನಾಡಿನಾದ್ಯಂತ ಈವರೆಗೆ ಮುಂಗಾರು ಮಳೆಯಲ್ಲಿ ಶೇ. 41ರಷ್ಟು ಕೊರತೆಯಾಗಿದೆ.
ಇಂದು ತಮಿಳುನಾಡು, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಸಿಕ್ಕಿಂ, ಕೇರಳ, ಆಂಧ್ರಪ್ರದೇಶ, ಅಂಡಮಾನ್-ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪಗಳಲ್ಲಿ ಗುಡುಗು ಸಹಿತ ಚದುರಿದ ಮಳೆ ಸುರಿಯುವ ನಿರೀಕ್ಷೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ