ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಡಿಕೆಶಿಗೆ ತೇಜಸ್ವಿ ಸೂರ್ಯ ಮನವಿ
ಬೆಂಗಳೂರು ನಗರದಲ್ಲಿನ ರಸ್ತೆಗಳು, ವಸತಿ ಪ್ರದೇಶಗಳಲ್ಲಿನ ಸಣ್ಣ ಲೈನ್‌ಗಳು ವಾಹನ ನಿರ್ವಹಣೆಯ ಸಾಮರ್ಥ್ಯವನ್ನು ಮೀರಿವೆ. ಹೆಚ್ಚಿನ ಹೊಸ ರಸ್ತೆಗಳನ್ನು ನಿರ್ಮಾಣ ಮಾಡಲು ಈಗ ಸ್ಥಳದ ಅಭಾವವಿದೆ. ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಸಾರಿಗೆ ಆಯ್ಕೆಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರವು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದ ಸಂಸದ ತೇಜಸ್ವಿ ಸೂರ್ಯ.
ಬೆಂಗಳೂರು ಆಗಸ್ಟ್ 21: ಬಿಜೆಪಿ ನಾಯಕ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಬುಧವಾರ ಬೆಂಗಳೂರಿನ ಟ್ರಾಫಿಕ್ ಪರಿಸ್ಥಿತಿ (Bengaluru Traffic)ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಶೋಚನೀಯ ಸ್ಥಿತಿಯನ್ನು ಟೀಕಿಸಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ “ಬೆಂಗಳೂರಿನ ಟ್ರಾಫಿಕ್ ದೃಶ್ಯವು ಪ್ರತಿ ದಿನವೂ ಮತ್ತಷ್ಟು ಯಾತನಾಮಯವಾಗಿರುತ್ತದೆ. ಸಾಧಾರಣವಾಗಿ ಭಾನುವಾರ ಸ್ವಲ್ಪ ಕಡಿಮೆಯಿದ್ದರೆ ವಾರದ ಇತರ ದಿನಗಳಲ್ಲಿ ದುಸ್ವಪ್ನದಂತಿರುತ್ತವೆ ಎಂದಿದ್ದಾರೆ.
ಭಾರತದ ಐಟಿ ಹಬ್‌ನಲ್ಲಿ ಸಾವಿರಾರು ಹೊಸ ಖಾಸಗಿ ವಾಹನಗಳು ರಸ್ತೆಗಿಳಿಯುತ್ತಿರುವುದೇ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಉಲ್ಬಣಗೊಳಿಸುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು ಆರೋಪಿಸಿದ್ದಾರೆ. “ಬೆಂಗಳೂರು ನಗರದಲ್ಲಿನ ರಸ್ತೆಗಳು, ವಸತಿ ಪ್ರದೇಶಗಳಲ್ಲಿನ ಸಣ್ಣ ಲೈನ್‌ಗಳು ವಾಹನ ನಿರ್ವಹಣೆಯ ಸಾಮರ್ಥ್ಯವನ್ನು ಮೀರಿವೆ. ಹೆಚ್ಚಿನ ಹೊಸ ರಸ್ತೆಗಳನ್ನು ನಿರ್ಮಾಣ ಮಾಡಲು ಈಗ ಸ್ಥಳದ ಅಭಾವವಿದೆ. ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಸಾರಿಗೆ ಆಯ್ಕೆಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರವು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸೂರ್ಯ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.
ತೇಜಸ್ವಿ ಸೂರ್ಯ ಪೋಸ್ಟ್
Wrote to DCM @DKShivakumar & urged him to convene a meeting on implementing short & long term solutions on improving Bengaluru’s Urban Mobility.
Bengaluru is crying for all of us to rise to the occasion together and this is a test of all of our commitment to the city. https://t.co/kFNH7yTNxG pic.twitter.com/ejBA1kC7ob
— Tejasvi Surya (@Tejasvi_Surya) August 21, 2024
ಜನಸಂದಣಿ ಇರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಾಹನಗಳನ್ನು ಪರಿಗಣಿಸಿ ಸಾರ್ವಜನಿಕ ಸಾರಿಗೆ ಆಯ್ಕೆಗಳಿಗೆ ಬದಲಾಯಿಸುವುದು ಸೂಕ್ತ ಪರ್ಯಾಯವಲ್ಲ. ಮೆಟ್ರೋ ನಿಲ್ದಾಣಗಳಲ್ಲಿ ಅವ್ಯವಸ್ಥೆ ಹೆಚ್ಚಿದ್ದು, ಪೀಕ್ ಅವರ್‌ನಲ್ಲಿ ರೈಲುಗಳು ಕೂಡ ತುಂಬಿ ತುಳುಕುತ್ತಿದ್ದು, ಉಸಿರುಗಟ್ಟಿಸುವಂತಾಗಿದೆ.
“ಹೆಚ್ಚು ದರ ಕೇಳುವ ಉಬರ್ ಓಲಾ ಟ್ಯಾಕ್ಸಿಗಳು ವಿಶ್ವಾಸಾರ್ಹವಲ್ಲ.ಅವರು ನಾವು ಹೇಳಿದ ಕಡೆ ಬರುವುದಿಲ್ಲ. ನಮ್ಮ ಫುಟ್‌ಪಾತ್‌ಗಳು ಪಾದಚಾರಿ ಸ್ನೇಹಿಯಾಗಿಲ್ಲ ಮತ್ತು ಹೆಚ್ಚಿನ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದಾರೆ. ‘ಜೀವನದ ಗುಣಮಟ್ಟ ದಿನೇ ದಿನೇ ಹದಗೆಡುತ್ತಿದೆ’ ಎಂದ ತೇಜಸ್ವಿ ಸೂರ್ಯ, ಹೊಂಡ ಮತ್ತು ಅವೈಜ್ಞಾನಿಕ ಹಂಪ್‌ಗಳನ್ನು ಹೊಂದಿರುವ ನಗರದಾದ್ಯಂತ ರಸ್ತೆಗಳ ದಯನೀಯ ಸ್ಥಿತಿಯನ್ನು ಎತ್ತಿ ತೋರಿಸಿದ್ದಾರೆ. “ಬಿಬಿಎಂಪಿ ಮತ್ತು ಅದರ ಅಧಿಕಾರಿಗಳು ವಸತಿ ಪ್ರದೇಶಗಳಲ್ಲಿನ ಎಲ್ಲಾ ವಾಣಿಜ್ಯ ಬೆಳವಣಿಗೆಗಳತ್ತ ಕಣ್ಣು ಮುಚ್ಚುತ್ತಾರೆ, ಇದು ಟ್ರಾಫಿಕ್ ದಟ್ಟಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ” ಎಂದು ಸಂಸದ ಹೇಳಿದ್ದಾರೆ.
ಚುನಾಯಿತ ಪ್ರತಿನಿಧಿಗಳು ಮತ್ತು ಸಂಚಾರ ನಿರ್ವಹಣಾ ತಜ್ಞರೊಂದಿಗೆ ತುರ್ತಾಗಿ ಸಭೆ ಕರೆದು ಪರಿಹಾರದ ಬಗ್ಗೆ ಚರ್ಚಿಸುವಂತೆ ಅವರು ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ