ಕೊವಾಕ್ಸಿನ್ ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ ತೆಗೆದುಕೊಂಡರೆ ದೀರ್ಘಕಾಲೀನ ರೋಗನಿರೋಧಕ ಶಕ್ತಿ ಬೆಳೆಯುತ್ತದೆಯೋ ಎಂಬುದನ್ನು ಕಂಡುಹಿಡಿಯುವ ಉದ್ದೇಶ ಹೊಂದಿರುವ ಪ್ರಯೋಗಕ್ಕೆ ಇಂದು ದೇಶದ ಹಲವೆಡೆ ಚಾಲನೆ ನೀಡಲಾಗಿದೆ ಮತ್ತು ಅದರ ಭಾಗವಾಗಿ ಚೆನ್ನೈನ ಎಸ್ಆರ್ಎಮ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿಯೂ ಮೂವರಿಗೆ ಕೊವ್ಯಾಕ್ಸಿನ್ ಕೊರೊನಾ ಲಸಿಕೆಯ ಮೂರನೇ ಡೋಸ್ನ್ನು ನೀಡಲಾಗಿದೆ. ಈ ಕಾರ್ಯಕ್ರಮದಡಿ ಹೈದರಾಬಾದ್, ಚೆನ್ನೈ, ಹೈದರಾಬಾದ್ ಮತ್ತು ಪಾಟ್ನಾದಲ್ಲಿ 190 ಜನ ಈ ಲಸಿಕೆಯ ಮೂರನೇ ಡೋಸನ್ನು ಪಡೆಯುತ್ತಾರೆ ಮತ್ತು ಮುಂದಿನ ಆರು ತಿಂಗಳು ಅವರ ರೋಗನಿರೋಧಕ ಶಕ್ತಿಯ ಪ್ರಮಾಣವನ್ನು ಅಧ್ಯಯನ ಮಾಡಲಾಗುವುದು.
ಈ ಅಧ್ಯಯನದ ಪ್ರಧಾನ ಸಂಶೋಧಕ ಡಾ. ಸತ್ಯಜಿತ್ ಮಹಾಪಾತ್ರ ಮಾತನಾಡಿ, ಇದು ಈಗಾಗಲೇ ಕೈಗೊಂಡಿರುವ ಪ್ರಯೋಗದ ಭಾಗವಾಗಿ 18-55 ವರ್ಷದೊಳಗಿನವರು ಈಗಾಗಲೇ ಎರಡು ಬಾರಿ ಕೊವ್ಯಾಕ್ಸಿನ್ ಲಸಿಕೆ ತಗೆದುಕೊಂಡಿದ್ದಾರೆ. ಎರಡನೇ ಲಸಿಕೆ ತೆಗೆದುಕೊಂಡು ಆರು ತಿಂಗಳ ಬಿಡುವಿನ ಅಂತರದಲ್ಲಿ ಈಗ ಅವರಿಗೆ ಮತ್ತೆ ಮೂರನೇ ಬಾರಿಗೆ ಲಸಿಕೆ ನೀಡಲಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಇವರನ್ನು ಪರೀಕ್ಷಿಸಲಾಗುತ್ತದೆ ಮತ್ತು ಅವರ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೇಗೆ ಬೆಳೆಯುತ್ತದೆ ಎಂಬುದನ್ನು ಅಧ್ಯಯನ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಹೈದರಾಬಾದ್ನ ಭಾರತ್ ಬಯೋಟೆಕ್ ಸಂಸ್ಥೆಯು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಜೊತೆಗೂಡಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಡಾ. ಮಹಾಪಾತ್ರ ಹೇಳುವಂತೆ, ಎರಡನೇ ಹಂತದ ಈ ಅಧ್ಯಯನದಲ್ಲಿ ಜೀವಕೋಶ ದೀರ್ಘಕಾಲೀನ ನೆನಪನ್ನು ಇಟ್ಟಕೊಂಡು ರೋಗ ನಿರೋಧಕ ಶಕ್ತಿಯನ್ನು ಹೊಂದುತ್ತದೆಯೋ, ಪ್ಲಾಸ್ಮಾ ಜೀವಕೋಶವು ರೋಗನಿರೋಧಕ ಶಕ್ತಿಯನ್ನು ನೆನಪಿನಲ್ಲಿಟ್ಟುಕೊಳ್ಳುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆಯೋ ಎಂಬುದನ್ನು ಅಧ್ಯಯನ ಮಾಡಲಾಗುವುದು. ಒಮ್ಮೆ ರೋಗ ನಿರೋಧಕ ಶಕ್ತಿ ತುಂಬಾ ಅಭಿವೃದ್ಧಿ ಆಗುವ ಲಕ್ಷಣ ಕಂಡುಬಂದಲ್ಲಿ ಬೂಸ್ಟರ್ ಡೋಸ್ ಕೊಡುವ ಬಗ್ಗೆ ಪರಾಮರ್ಶೆ ಮಾಡಲಾಗುವುದು ಎಂದು ಅವರು ಹೇಳಿದರು.
ಇಲ್ಲೀವರೆಗಿನ ಅಧ್ಯಯನದ ಪ್ರಕಾರ ಕೊವಾಕ್ಸಿನ್ 78 ಪ್ರತಿಶತ ಪರಿಣಾಮಕಾರಿಯಾಗಿದ್ದು. ಮೂರನೇ ಹಂತದ ಪ್ರಯೋಗದ ನಂತರ ಈ ಲಸಿಕೆಯ ಪರಿಣಾಮದ ಕುರಿತಾಗಿ ಮತ್ತೆ ಅಧ್ಯಯನದ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದರು.
(Bharat Biotech has launched life long immunity study after giving booster dose of Covaxin to seven people in Chennai)
ಇದನ್ನೂ ಓದಿ: ಲಸಿಕೆ ರಾಜ್ಯ ಸರ್ಕಾರಗಳಿಗೆ ರೂ. 600ಕ್ಕೆ, ಖಾಸಗಿ ಆಸ್ಪತ್ರೆಗಳಿಗೆ ರೂ. 1200
ಇದನ್ನೂ ಓದಿ: ಕೋಲಾರದಲ್ಲಿ ಕೊವ್ಯಾಕ್ಸಿನ್ ಘಟಕ! ಹೈದರಾಬಾದ್ ಘಟಕಕ್ಕಿಂತ 5 ಪಟ್ಟು ಹೆಚ್ಚು ಲಸಿಕೆ ತಯಾರಿ