ಕೊವಿಡ್​ ಸೋಂಕು ಹಳ್ಳಿ ಪ್ರವೇಶಿಸದಂತೆ ಗಡಿಯಲ್ಲೇ ಕಾವಲು ಕಾಯುತ್ತಿರುವ ಮಹಿಳೆಯರು; ಶ್ರಮಕ್ಕೆ ಸಿಕ್ಕಿದೆ ಸಾರ್ಥಕತೆ

ಗ್ರಾಮದ ಎಲ್ಲ ಭಾಗಗಳ ಗಡಿಗಳನ್ನೂ ಬಾಂಬೂ ಬ್ಯಾರಿಕೇಡ್​ಗಳಿಂದ ಮುಚ್ಚಿ, ಅಲ್ಲೆಲ್ಲ ಕಾವಲು ನಿಂತಿದ್ದಾರೆ. ಮಾತ್ರವಲ್ಲ, ಪ್ರವೇಶವಿಲ್ಲ ಎಂಬ ಬೋರ್ಡ್​ನ್ನೂ ಕೂಡ ಹಾಕಿದ್ದಾರೆ.

ಕೊವಿಡ್​ ಸೋಂಕು ಹಳ್ಳಿ ಪ್ರವೇಶಿಸದಂತೆ ಗಡಿಯಲ್ಲೇ ಕಾವಲು ಕಾಯುತ್ತಿರುವ ಮಹಿಳೆಯರು; ಶ್ರಮಕ್ಕೆ ಸಿಕ್ಕಿದೆ ಸಾರ್ಥಕತೆ
ರಾಜ್ಯ ಹೆದ್ದಾರಿ ಬಳಿ ಕಾವಲು ಕಾಯುತ್ತಿರುವ ಮಹಿಳೆಯರು
Follow us
Lakshmi Hegde
|

Updated on: Apr 27, 2021 | 6:13 PM

ಬೇತುಲ್​: ಇಡೀ ದೇಶ ಕೊರೊನಾ ಎರಡನೇ ಅಲೆ ಅಬ್ಬರಕ್ಕೆ ತತ್ತರಿಸಿದೆ. ಬಹುತೇಕ ಹಳ್ಳಿಗಳಿಗೂ ವೈರಸ್ ವ್ಯಾಪಿಸುತ್ತಿದೆ. ಹೀಗಿರುವಾಗ ಮಧ್ಯಪ್ರದೇಶದ ಈ ಗ್ರಾಮದಲ್ಲಿ ಇದುವರೆಗೂ ಒಬ್ಬರೇ ಒಬ್ಬರಿಗೂ ಸೋಂಕು ತಗುಲಿಲ್ಲ. ಇದು ಕಾರಣವಾಗಿದ್ದು ಅಲ್ಲಿನ ಮಹಿಳೆಯರಿಂದ.. ಇಲ್ಲಿ ಕೊವಿಡ್ ಕಾಲಿಡದಂತೆ ಮಹಿಳೆಯರೇ ಸರ್ಪಗಾವಲು ಹಾಕಿದ್ದಾರೆ !

ಇದು ಆಂದ್ರಪ್ರದೇಶದ ಚಿಖಾಲರ್ ಎಂಬ ಗ್ರಾಮ. ಕಚ್ಚಾ ಲಿಕ್ಕರ್​ ಮಾರಾಟಕ್ಕೆ ಹೆಸರು ಮಾಡಿದೆ. ಇದು ಈ ಗ್ರಾಮಕ್ಕೆ ಅಂಟಿದ ಕಪ್ಪು ಚುಕ್ಕೆ ಎಂದರೂ ತಪ್ಪಾಗಲಾರದು. ಆದರೆ ಇದೀಗ ಚಿಖಾಲರ್ ಹಳ್ಳಿ ಒಂದು ಸಕಾರಾತ್ಮಕ ವಿಚಾರಕ್ಕೆ ಹೆಸರುವಾಸಿಯಾಗಿದೆ. ಅದು ಮತ್ತೇನಲ್ಲ, ಸಾಂಕ್ರಾಮಿಕ ರೋಗಕ್ಕೆ ಸೆಡ್ಡು ಹೊಡೆದು ನಿಂತ ಮಹಿಳೆಯರಿಂದ.. ಸೀರೆಯುಟ್ಟು, ಕೈಯಲ್ಲಿ ಉದ್ದನೆಯ ಕೋಲು ಹಿಡಿದ ಮಹಿಳೆಯರು ಗ್ರಾಮಕ್ಕೆ ಅಕ್ಷರಶಃ ಕಾವಲಾಗಿದ್ದಾರೆ. ಹೊರಗಿನಿಂದ ಯಾರನ್ನೂ ಬರಲು ಬಿಡುತ್ತಿಲ್ಲ. ಗ್ರಾಮದ ಎಲ್ಲ ಭಾಗಗಳ ಗಡಿಗಳನ್ನೂ ಬಾಂಬೂ ಬ್ಯಾರಿಕೇಡ್​ಗಳಿಂದ ಮುಚ್ಚಿ, ಅಲ್ಲೆಲ್ಲ ಕಾವಲು ನಿಂತಿದ್ದಾರೆ. ಮಾತ್ರವಲ್ಲ, ಪ್ರವೇಶವಿಲ್ಲ ಎಂಬ ಬೋರ್ಡ್​ನ್ನೂ ಕೂಡ ಹಾಕಿದ್ದಾರೆ. ಬರೀ ಇಷ್ಟೇ ಅಲ್ಲ, ಈ ಗ್ರಾಮದ ಬಳಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಹೋಗುವವರ ಬಗ್ಗೆಯೂ ನಿಗಾ ಇಡುತ್ತಿದ್ದಾರೆ. ಒಟ್ಟಿನಲ್ಲಿ ತಮ್ಮ ಗ್ರಾಮಕ್ಕೆ ಹೊರಗಿನವರನ್ನು ಯಾರನ್ನೂ ಬಿಟ್ಟುಕೊಳ್ಳುತ್ತಿಲ್ಲ.

ಇನ್ನು ಅವರ ಶ್ರಮಕ್ಕೆ ಸಾರ್ಥಕತೆ ಸಿಕ್ಕಿದೆ ಎಂಬಂತೆ ಇದುವರೆಗೂ ಒಂದೇ ಒಂದು ಕೊರೊನಾ ಸೋಂಕಿನ ಪ್ರಕರಣ ದಾಖಲಾಗಿಲ್ಲ. ಇವರು ಹೊರಗಿನವರಿಗೆ ನಿರ್ಬಂಧ ವಿಧಿಸಿದ್ದಲ್ಲದೆ, ಹಳ್ಳಿಯವರು ಕೂಡ ಹೊರಹೋಗದಂತೆ ತಡೆಯುತ್ತಿದ್ದಾರೆ. ಅಷ್ಟೇ ಅಲ್ಲ, ಇಡೀ ಗ್ರಾಮದ ಜನರು ತಮಗೆ ತಾವೇ ನಿರ್ಬಂಧ ವಹಿಸಿಕೊಂಡಿದ್ದಾರೆ.

ಜನರು ಹಳ್ಳಿಯೊಳಗೆ ಪ್ರವೇಶಿಸದಂತೆ ತಡೆಯಲು ಹಾಕಿರುವ ಬೋರ್ಡ್​ಗಳು

ಇದನ್ನೂ ಓದಿ:ಸರಿಯಾಗಿ ಕೆಲಸ ಮಾಡದಿದ್ದರೆ ಅಧಿಕಾರ ವಹಿಸಿಕೊಳ್ಳಲು ಕೇಂದ್ರಕ್ಕೆ ಸೂಚಿಸಬೇಕಾಗುತ್ತೆ: ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ಚಾಟಿ

ಕಂದಾಯ, ಗೃಹ, ಒಳಾಡಳಿತ, ಆರೋಗ್ಯ ಮತ್ತು ವೈದ್ಯಕೀಯ ಇಲಾಖೆ ಸಿಬ್ಬಂದಿಗೆ ಶೇ 100 ಹಾಜರಾತಿ ಕಡ್ಡಾಯ

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು