AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

COVAXIN ಲಸಿಕೆ ರಾಜ್ಯ ಸರ್ಕಾರಗಳಿಗೆ ರೂ. 600ಕ್ಕೆ, ಖಾಸಗಿ ಆಸ್ಪತ್ರೆಗಳಿಗೆ ರೂ. 1200

ಭಾರತದ ಮೊದಲ ದೇಶೀ ಕೊರೊನಾ ಲಸಿಕೆಯಾದ ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್​ ಅನ್ನು ರಾಜ್ಯ ಸರ್ಕಾರಗಳಿಗೆ ರೂ. 600ಕ್ಕೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ರೂ. 1200ಕ್ಕೆ ನೀಡಲಾಗುವುದು ಎಂದು ಹೇಳಿಕೆ ನೀಡಲಾಗಿದೆ.

COVAXIN ಲಸಿಕೆ ರಾಜ್ಯ ಸರ್ಕಾರಗಳಿಗೆ ರೂ. 600ಕ್ಕೆ, ಖಾಸಗಿ ಆಸ್ಪತ್ರೆಗಳಿಗೆ ರೂ. 1200
ಪ್ರಾತಿನಿಧಿಕ ಚಿತ್ರ
Srinivas Mata
|

Updated on: Apr 24, 2021 | 11:12 PM

Share

ನವದೆಹಲಿ: ಭಾರತ್ ಬಯೋಟೆಕ್​ನಿಂದ ಪ್ರಮುಖ ಘೋಷಣೆ ಮಾಡಲಾಗಿದೆ. ಭಾರತ ಸೇರಿದಂತೆ ಇಡೀ ವಿಶ್ವದಲ್ಲೇ ಕೊರೊನಾ ಅಲೆಯು ತೀವ್ರವಾಗಿರುವ ಹಿನ್ನೆಲೆಯಲ್ಲಿ ಕೋವ್ಯಾಕ್ಸಿನ್​ (COVAXIN) ಅನ್ನು ರಾಜ್ಯ ಸರ್ಕಾರಗಳಿಗೆ ರೂ. 600ಕ್ಕೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ರೂ. 1200ಕ್ಕೆ ಮತ್ತು ರಫ್ತು ಮಾಡುವುದಾದರೆ 15ರಿಂದ 20 ಡಾಲರ್​ಗೆ ಎಂದು ಭಾರತ ಸರ್ಕಾರದ ನಿರ್ದೇಶನದ ಅನುಸಾರವಾಗಿ ದರ ಘೋಷಣೆ ಮಾಡಲಾಗಿದೆ. ಒಂದು ಡೋಸ್​ಗೆ 150 ರೂಪಾಯಿ ತಗುಲುತ್ತದೆ. ಇದನ್ನು ಭಾರತ ಸರ್ಕಾರದಿಂದ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಅಂದಹಾಗೆ ಕೋವ್ಯಾಕ್ಸಿನ್ ಎಂಬುದು ಭಾರತದ ಮೊದಲ ದೇಶೀ ಕೋವಿಡ್​-19 ಲಸಿಕೆಯಾಗಿದೆ. ಇನ್ನು ಇದೇ ವೇಳೆ ಕಂಪೆನಿಯು ಹೇಳಿಕೆ ನೀಡಿದ್ದು, ಉತ್ಪಾದನೆ ಮಾಡುವ ಲಸಿಕೆಯ ಶೇಕಡಾ 50ರಷ್ಟನ್ನು ಕೇಂದ್ರ ಸರ್ಕಾರಕ್ಕೆ ಪೂರೈಸುವುದಕ್ಕೆ ಮೀಸಲಿರಿಸುವುದಾಗಿ ಹೇಳಿದೆ.

ಕೋವ್ಯಾಕ್ಸಿನ್ ವೈಶಿಷ್ಟ್ಯಗಳೇನು ಎಂಬ ಬಗ್ಗೆ ಕೂಡ ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. * ಕೋವ್ಯಾಕ್ಸಿನ್ ವಯಲ್ ಒಮ್ಮೆ ತೆರೆದರೆ ಅದನ್ನು 2ರಿಂದ 8 ಡಿಗ್ರಿ ತಾಪಮಾನದಲ್ಲಿ 28 ದಿನಗಳ ಕಾಲ ಸುರಕ್ಷಿತವಾಗಿ ಇಡಬಹುದು.

* ಮೂರನೇ ಹಂತದ ಅಧ್ಯಯನದ ವೇಳೆಯಲ್ಲಿ ಒಟ್ಟಾರೆಯಾಗಿ ಕೋವಿಡ್-19 ವಿರುದ್ಧ ಶೇ 78 ಪರಿಣಾಮಕಾರಿ ಮತ್ತು ಗಂಭೀರ ಕಾಯಿಲೆ ವಿರುದ್ಧ ಶೇ 100ರಷ್ಟು ಪರಿಣಾಮಕಾರಿ ಎಂದು ತಿಳಿದುಬಂದಿದೆ. ಆಸ್ಪತ್ರೆಗೆ ಸೇರಬೇಕಾದ ಅಗತ್ಯವನ್ನು ಕಡಿಮೆ ಮಾಡುತ್ತದೆ.

* ಈಗಾಗಲೇ ಸಾಬೀತಾದ, ಪರೀಕ್ಷಿಸಲಾದ, ವೆರೋ- ಸೆಲ್ ತಂತ್ರಜ್ಞಾನ, ಹೋಲ್ ವಿರಿಯನ್, ಇನ್​ಆಕ್ಟಿವೇಟೆಡ್ ಲಸಿಕೆ.

ಇದರ ಜತೆಗೆ ಇನ್ನೂ ಕೆಲವು ಮಾಹಿತಿಗಳೊಂದಿಗೆ ಭಾರತ್ ಬಯೋಟೆಕ್ ಅದ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಕೃಷ್ಣ ಎಂ ಎಳ್ಳ ಅವರು ಸಾರ್ವಜನಿಕರ ಬೆಂಬಲವನ್ನು ಕೋರಿದ್ದಾರೆ.

ಇದನ್ನೂ ಓದಿ: ಮೇ 1 ರ ನಂತರ ಕೊವಿಶೀಲ್ಡ್​ ದರ ಬದಲು, ಕೇಂದ್ರಕ್ಕೆ ರೂ 150, ರಾಜ್ಯಗಳಿಗೆ ರೂ 400, ಖಾಸಗಿ ಆಸ್ಪತ್ರೆಗಳಿಗೆ ರೂ 600 ಕ್ಕೆ ಲಸಿಕೆ ಮಾರಾಟ

(Bharat Biotech’s Covaxin for state governments Rs 600 and for private hospitals Rs 1200)

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ