Rahul Gandhi: ಕಾಶ್ಮೀರ ತಲುಪಿದ ಭಾರತ್ ಜೋಡೋ ಯಾತ್ರೆ; ತುಂತುರು ಮಳೆಗೆ ಜಾಕೆಟ್ ಧರಿಸಿ ನಡೆದ ರಾಹುಲ್ ಗಾಂಧಿ

| Updated By: ರಶ್ಮಿ ಕಲ್ಲಕಟ್ಟ

Updated on: Jan 20, 2023 | 1:36 PM

Bharat Jodo Yatra ಶುಕ್ರವಾರ ಬೆಳಗ್ಗೆ ಕಥುವಾದ ಹತ್ಲಿ ಮೋರ್ಹ್‌ನಿಂದ ಪುನರಾರಂಭಗೊಂಡ ಯಾತ್ರೆಗೆ ಭಾರೀ ಭದ್ರತೆಯನ್ನು ಒದಗಿಸಲಾಗಿದ್ದು, ಪೊಲೀಸರು ಮತ್ತು ಅರೆಸೇನಾ ಪಡೆಗಳು ರಾಹುಲ್ ಗಾಧಿ ಮತ್ತು ಅವರ ಸಹ-ಪ್ರಯಾಣಿಕರನ್ನು ಸುತ್ತುವರಿದಿವೆ. ಜಾಮರ್‌ಗಳನ್ನೂ ಹಾಕಲಾಗಿದೆ

Rahul Gandhi: ಕಾಶ್ಮೀರ ತಲುಪಿದ ಭಾರತ್ ಜೋಡೋ ಯಾತ್ರೆ; ತುಂತುರು ಮಳೆಗೆ ಜಾಕೆಟ್ ಧರಿಸಿ ನಡೆದ ರಾಹುಲ್ ಗಾಂಧಿ
ಕಾಶ್ಮೀರದಲ್ಲಿ ರಾಹುಲ್ ಗಾಂಧಿ
Follow us on

ಶ್ರೀನಗರ: ರಾಹುಲ್ ಗಾಂಧಿ (Rahul Gandhi) ನೇತೃತ್ವ ವಹಿಸಿರುವ ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ಯಾತ್ರೆ’ (Bharat Jodo Yatra) ಪಂಜಾಬ್‌ನಿಂದ ಕಾಶ್ಮೀರ (Kashmir) ತಲುಪಿದ್ದು ಯಾತ್ರೆಯ ಕೊನೆಯ ಹಂತವನ್ನು ಪ್ರವೇಶಿಸಿದೆ. ಚಳಿಗಾಲದಲ್ಲಿ ಉತ್ತರ ಭಾರತದಾದ್ಯಂತ ಕೇವಲ ಟೀ ಶರ್ಟ್ ಧರಿಸಿ ಮೆರವಣಿಗೆ ನಡೆಸಿದ್ದ ರಾಹುಲ್ ಗಾಂಧಿ, ಇಂದು ಮೊದಲ ಬಾರಿಗೆ ಜಾಕೆಟ್‌ನಲ್ಲಿ ಕಾಣಿಸಿಕೊಂಡರು. ಜಮ್ಮುವಿನ ಹಲವಾರು ಭಾಗಗಳಲ್ಲಿ ಬೆಳಿಗ್ಗೆಯಿಂದ ತುಂತುರು ಮಳೆಯಾಗಿದ್ದರಿಂದ ರಾಹುಲ್ ಗಾಂಧಿ ರೈನ್ ಕೋಟ್ ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಂತರ ಅವರು ಜಾಕೆಟ್ ತೆಗೆದು, ಬಿಳಿ ಟೀ ಶರ್ಟ್ ತೊಟ್ಟು ನಡೆಯುತ್ತಿರುವುದು ಕಂಡು ಬಂತು.ಇದುವರೆಗಿನ 125 ದಿನಗಳ ಪಯಣದಲ್ಲಿ 3,400 ಕಿಲೋಮೀಟರ್‌ಗಳ ಕಾಲ ರಾಹುಲ್ ಗಾಂಧಿ ಸಾಧಾರಾಣವಾಗಿ ಬಿಳಿ ಟಿಶರ್ಟ್, ಜೀನ್ಸ್ ಧರಿಸಿ ನಡೆಯುತ್ತಿರುವುದು ಅನೇಕರಿಗೆ ಕುತೂಹಲ ಹುಟ್ಟಿಸಿತ್ತು.

52 ವರ್ಷದ ಕಾಂಗ್ರೆಸ್ ನಾಯಕ ಜನವರಿ 25 ರಂದು ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಲ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಎರಡು ದಿನಗಳ ನಂತರ ಅಂದರೆ ಜನವರಿ 27 ರಂದು ಅನಂತನಾಗ್ ಮೂಲಕ ಶ್ರೀನಗರವನ್ನು ಪ್ರವೇಶಿಸಲು ನಿರ್ಧರಿಸಲಾಗಿದೆ.

ಶುಕ್ರವಾರ ಬೆಳಗ್ಗೆ ಕಥುವಾದ ಹತ್ಲಿ ಮೋರ್ಹ್‌ನಿಂದ ಪುನರಾರಂಭಗೊಂಡ ಯಾತ್ರೆಗೆ ಭಾರೀ ಭದ್ರತೆಯನ್ನು ಒದಗಿಸಲಾಗಿದ್ದು, ಪೊಲೀಸರು ಮತ್ತು ಅರೆಸೇನಾ ಪಡೆಗಳು ರಾಹುಲ್ ಗಾಧಿ ಮತ್ತು ಅವರ ಸಹ-ಪ್ರಯಾಣಿಕರನ್ನು ಸುತ್ತುವರಿದಿವೆ. ಜಾಮರ್‌ಗಳನ್ನೂ ಹಾಕಲಾಗಿದೆ. ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಕೆಲವು ಪ್ರದೇಶಗಳಲ್ಲಿ ನಡೆಯದಂತೆ ಭದ್ರತಾ ಏಜೆನ್ಸಿಗಳು ರಾಹುಲ್ ಗಾಂಧಿಗೆ ಈ ಹಿಂದೆ ಸಲಹೆ ನೀಡಿದ್ದವು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: Google: ಸಿಸಿಐ ಸೂಚನೆ ಪಾಲಿಸುತ್ತೇವೆ; ಸುಪ್ರೀಂ ಕೋರ್ಟ್​ಗೆ ಗೂಗಲ್

ರಾಹುಲ್ ಜಮ್ಮುವಿಗೆ ಪ್ರವೇಶಿಸಿದಾಗ, ಉನ್ನತ ಕಾಶ್ಮೀರಿ ನಾಯಕ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಬರಮಾಡಿಕೊಳ್ಳಲು ಲಖನ್‌ಪುರಕ್ಕೆ ಪ್ರಯಾಣಿಸಿದ್ದಾರೆ. ಗಾಂಧಿ ಅವರು ತಮ್ಮ ಪೂರ್ವಜರು ಕಾಶ್ಮೀರದವರು. ಈ ಹಿಂದಿನ ರಾಜ್ಯದ ನಿವಾಸಿಗಳ “ನೋವು ಮತ್ತು ಸಂಕಟ” ನನಗೆ ಗೊತ್ತು ಎಂದು ಜನರನ್ನುದ್ದೇಶಿಸಿ ಮಾತನಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಪಂಜಾಬ್‌ನ ಮಾಧೋಪುರದಲ್ಲಿ ರಾಹುಲ್ ಗಾಂಧಿಗೆ ಹಾಡು ಮತ್ತು ನೃತ್ಯದೊಂದಿಗೆ ಭವ್ಯವಾದ ಸ್ವಾಗತವನ್ನು ನೀಡಲಾಯಿತು. ಕೊನೆಯ ಹಂತಕ್ಕೆ ಪ್ರವೇಶಿಸುವ ಯಾತ್ರೆಯನ್ನು ಸ್ವೀಕರಿಸಲು ನೂರಾರು ಜನರು ಜಮಾಯಿಸಿದ್ದರು. ಜನವರಿ 30 ರಂದು ಶ್ರೀನಗರದಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ.

ರಾತ್ರಿ ಚಡ್ವಾಲ್‌ನಲ್ಲಿ ಯಾತ್ರೆ ನಿಲ್ಲಲಿದೆ. ನಾಳೆ ಬೆಳಗ್ಗೆ ಹೀರಾನಗರದಿಂದ ದುಗ್ಗರ್ ಹವೇಲಿಗೆ ಹೊರಟು ಜನವರಿ 22ರಂದು ವಿಜಯಪುರದಿಂದ ಸತ್ವಾರಿಗೆ ತೆರಳಲಿದೆ.

ಕಾಶ್ಮೀರದಲ್ಲಿ ರಾಹುಲ್ ಜತೆಯಾದ ಶಿವಸೇನಾ  ಸಂಸದ ಸಂಜಯ್ ರಾವುತ್

ಭಾರತ್ ಜೋಡೋ ಯಾತ್ರೆಯ ಜಮ್ಮು ಮತ್ತು ಕಾಶ್ಮೀರಕ್ಕೆ ತಲುಪಿದ್ದು ಅಲ್ಲಿ ಶಿವಸೇನಾ ಸಂಸದ ಸಂಜಯ್ ರಾವುತ್ (Sanjay Raut) ಶುಕ್ರವಾರ ಕಥುವಾ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ್ದಾರೆ.. ಸುದ್ದಿಗಾರರೊಂದಿಗೆ ಮಾತನಾಡಿದ  ರಾವುತ್, “ಕಾಶ್ಮೀರಕ್ಕೆ ಭಾರತ್ ಜೋಡೋ ಯಾತ್ರೆ ಬರುವುದು ಒಂದು ದೊಡ್ಡ ವಿಷಯ, ವಾಸ್ತವವಾಗಿ, ರಾಷ್ಟ್ರವನ್ನು ಒಗ್ಗೂಡಿಸಲು ಯಾತ್ರೆ ಇಲ್ಲಿಂದ ಪ್ರಾರಂಭವಾಗಬೇಕಿತ್ತು. ನಾವು ಬಯಸಿದ್ದರಿಂದ ರಾಷ್ಟ್ರವನ್ನು ಒಗ್ಗೂಡಿಸಲುಶಿವಸೇನಾದ ಕಡೆಯಿಂದ ನಾನು ಬಂದಿದ್ದೇನೆ ಎಂದು ಹೇಳಿದ್ದಾರೆ.

“ನಾನು ರಾಜಕೀಯ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ ಆದರೆ ಪ್ರಸ್ತುತ ದೇಶದ ಸನ್ನಿವೇಶಗಳು ಮತ್ತು ವಾತಾವರಣ ಬದಲಾಗುತ್ತಿದೆ ಮತ್ತು ಈ ಎಲ್ಲದರ ನಡುವೆ, ರಾಷ್ಟ್ರದ ಎಲ್ಲಾ ಕಷ್ಟಗಳ ವಿರುದ್ಧ ಧ್ವನಿ ಎತ್ತುವ ನಾಯಕನಾಗಿ ನಾನು ರಾಹುಲ್ ಗಾಂಧಿಯನ್ನು ನೋಡುತ್ತೇನೆ” ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ