AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಶೀಲ್ಡ್ ಆಯ್ತು ಈಗ ಕೋವ್ಯಾಕ್ಸಿನ್‌ನಲ್ಲೂ ಸೈಡ್ ಎಫೆಕ್ಟ್‌ ಪತ್ತೆ: ಏನೇನು ಆಗುತ್ತೆ ಗೊತ್ತಾ?

Covaxin side-effects: ಇತ್ತೀಚೆಗೆ ಜಗತ್ತಿನಾದ್ಯಂತ ಕೋವಿಶೀಲ್ಡ್ ಲಸಿಕೆ ಸರಬರಾಜು ಮಾಡಿದ್ದ ಅಸ್ಟ್ರಾಝೆನೆಕಾ ಕಂಪನಿ ಸತ್ಯ ಒಪ್ಪಿಕೊಂಡಿತ್ತು. ಕೋವಿಶೀಲ್ಡ್ ಲಸಿಕೆಯಲ್ಲಿ ಟಿಟಿಎಸ್ ನಂತಹ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಕಡಿಮೆಯಾಗುವಂತಹ ಅಡ್ಡ ಪರಿಣಾಮ ಉಂಟು ಮಾಡುತ್ತದೆ ಎನ್ನುವುದನ್ನು ಲಂಡನ್ ಕೋರ್ಟ್​ ಮುಂದೆ ಒಪ್ಪಿಕೊಂಡಿತ್ತು. ಕೋವಿಶೀಲ್ಡ್ ಲಸಿಕೆಯ ಸೈಡ್ ಎಫೆಕ್ಟ್ ಆತಂಕ ಸೃಷ್ಟಿಸಿರುವಾಗಲೇ ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲೂ ಆರೋಗ್ಯ ಸಮಸ್ಯೆಯಾಗಿರುವ ಶಾಕಿಂಗ್ ​ ವರದಿ ಬಯಲಾಗಿದೆ.

ಕೋವಿಶೀಲ್ಡ್ ಆಯ್ತು ಈಗ ಕೋವ್ಯಾಕ್ಸಿನ್‌ನಲ್ಲೂ ಸೈಡ್ ಎಫೆಕ್ಟ್‌ ಪತ್ತೆ: ಏನೇನು ಆಗುತ್ತೆ ಗೊತ್ತಾ?
ಕೋವ್ಯಾಕ್ಸಿನ್
ರಮೇಶ್ ಬಿ. ಜವಳಗೇರಾ
|

Updated on:May 16, 2024 | 10:31 PM

Share

ನವದೆಹಲಿ, (ಮೇ 16): ಕೋವಿಶೀಲ್ಡ್ ಲಸಿಕೆಯ(covishield) ಸೈಡ್ ಎಫೆಕ್ಟ್ ಆತಂಕ ಸೃಷ್ಟಿಸಿರುವಾಗಲೇ ಭಾರತದ ಸ್ವದೇಶಿ ಕೊರೊನಾ ಲಸಿಕೆ ಕೋವ್ಯಾಕ್ಸಿನ್‌ (Covaxin) ಅಲ್ಲೂ ಸೈಡ್ ಎಫೆಕ್ಟ್ ಇರೋದು ದೃಢವಾಗಿದೆ. ಭಾರತ್ ಬಯೋಟೆಕ್ (Bharat Biotech) ಕಂಪನಿಯ ಕೋವ್ಯಾಕ್ಸಿನ್ ಲಸಿಕೆ ಪಡೆದ ಮೂರನೇ ಒಂದರಷ್ಟು ಜನರಲ್ಲಿ ಸೈಡ್ ಎಫೆಕ್ಟ್ ಇರುತ್ತದೆ ಎನ್ನುವ ಅಂಶ ಬಯಲಾಗಿದೆ. ಕೋವ್ಯಾಕ್ಸಿನ್​ ಪಡೆದ ಮೂರನೇ ಒಂದು ಭಾಗದಷ್ಟು ಜನರಲ್ಲಿ ವರ್ಷದ ಬಳಿಕ ಅಡ್ಡ ಪರಿಣಾಮ ಕಂಡುಬಂದಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯ(ಬಿಎಚ್​ಯು) (Banaras Hindu University) ಸಂಶೋಧಕರ ತಂಡ ನಡೆಸಿದ ಅಧ್ಯಯನದ ವರದಿಯಿಂದ ತಿಳಿದುಬಂದಿದೆ.

ಕೋವ್ಯಾಕ್ಸಿನ್ ಪಡೆದವರಲ್ಲಿ ಅಧ್ಯಯನಕ್ಕೊಳಪಡಿಸಿದ್ದ 926 ಮಂದಿಯ ಪೈಕಿ ಶೇ.50 ರಷ್ಟು ಜನರಲ್ಲಿ ಸೋಂಕು ಪತ್ತೆಯಾಗಿದೆ. ಉಸಿರಾಟದಲ್ಲಿ ಸೋಂಕು, ಗಂಟಲು ಕೆರೆತ, ಮೂಗು ಸೋರುವಿಕೆ ಕೆಮ್ಮು ಲಕ್ಷಣ ಕಂಡು ಬಂದಿದೆ. ಇನ್ನೂ ಶೇ.1ರಷ್ಟು ಪ್ರಕರಣಗಳಲ್ಲಿ ಪಾಶ್ವವಾಯು, ಗುಲ್ಲೈನ್ ಬರ್ರೆ ಸಿಂಡ್ರೋಮ್ (ನರ ಸಂಬಂಧಿತ ಆರೋಗ್ಯ ಸಮಸ್ಯೆ) ಕಂಡು ಬಂದಿದೆ ಎಂದು ಸ್ಟ್ರಿಂಜರ್ ನೇಚರ್ ಜರ್ನಲ್‌ ತನ್ನ ಅಧ್ಯಯನದ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: Covishield vaccine side-effects: ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರಿಗೆ ಶುರುವಾಯಿತು ಚಿಂತೆ? ತಜ್ಞರು ಹೇಳುವುದೇನು?

ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ಮೂರನೇ ಒಂದು ಭಾಗದಷ್ಟು ಜನರಲ್ಲಿ ಚರ್ಮ ಸಂಬಂಧಿತ ಸಮಸ್ಯೆ, ನರಗಳಿಗೆ ಸಂಬಂಧಿಸಿದ ಅಸ್ವಸ್ಥತೆ ಮತ್ತು ಸಾಮಾನ್ಯ ಅಸ್ವಸ್ಥತೆ ಕಂಡುಬಂದಿದೆ. ಈ ಮೂರು ಅಸ್ವಸ್ಥತೆಗಳು ಶೇ 30ರಷ್ಟು ಜನರಲ್ಲಿ ಕಂಡುಬಂದಿದೆ ಎಂದು 2022ರ ಜನವರಿಯಿಂದ 2023ರ ಆಗಸ್ಟ್‌ವರೆಗೆ ಕೋವ್ಯಾಕ್ಸಿನ್ ಪಡೆದವರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಗೊತ್ತಾಗಿದೆ. ಇನ್ನು 635 ಮಂದಿ ಹದಿ ಹರೆಯದವರು, 291 ಮಂದಿ ವಯಸ್ಕರನ್ನು ಈ ಅಧ್ಯಯನಕ್ಕೊಳಪಡಿಸಿದೆ.

ತಮ್ಮ ಸಂಸ್ಥೆ ಸಿದ್ಧಪಡಿಸಿರುವ ಜೋವಿಶೀಲ್ಡ್ ಲಸಿಕೆಯು ಅತ್ಯಂತ ವಿರಳ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್​ಲೆಟ್ ಕಡಿಮೆಯಾಗುವಂತೆಹ ಅಡ್ಡ ಪರಿಣಾಮ ಸೃಷ್ಟಿಸುತ್ತದೆ ಎಂದು ಬ್ರಿಟನ್ ಮೂಲದ ಅಸ್ಟ್ರಾಜೆನಿಕಾ ಕಂಪನಿ ಒಪ್ಪಿಕೊಂಡಿತ್ತು. ಇದರ ಬೆನ್ನಲ್ಲೇ ಭಾರತದಲ್ಲಿ ಹೆಚ್ಚು ಜನರಿಗೆ ನೀಡಲಾಗಿರುವ ಕೋವ್ಯಾಕ್ಸಿನ್​ ಲಸಿಕೆಯಿಂದಲೂ ಅಡ್ಡಪರಿಣಾಮ ಕುರಿತಂತೆ ಅಧ್ಯಯನದ ವರದಿ ಬಂದಿದ್ದು, ಮತ್ತುಷ್ಟ ಆತಂಕಕ್ಕೆ ಕಾರಣವಾಗಿದೆ.

ಕೊರೊನಾ ಕಾಲದಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟಿಕ್ ಕಂಪನಿ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆ ಮಾಡಿತ್ತು. ಕೋವ್ಯಾಕ್ಸಿನ್ ಲಸಿಕೆಗೆ ಅತ್ಯುತ್ತಮವಾದ ಸುರಕ್ಷತೆಯ ಟ್ರ್ಯಾಕ್ ರೆಕಾರ್ಡ್ ಇದೆ. ಈ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ ಎಂದು ಭಾರತ್ ಬಯೋಟೆಕ್‌ ಕಂಪನಿ ಹೇಳಿತ್ತು. ಆದರೆ ಇದೀಗ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ವರದಿ ಬೆಚ್ಚಿಬೀಳಿಸಿದೆ

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:15 pm, Thu, 16 May 24

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ