ದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ಲಸಿಕೆಯ ಅಭಾವ ಹೆಚ್ಚಾಗಿದೆ. ಜಾಗತಿಕ ಮಟ್ಟದಲ್ಲಿ ಲಸಿಕೆಯ ಕೊರತೆಯ ಮಧ್ಯೆ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಮತ್ತೊಂದು ಅಧ್ಯಯನ ನಡೆಸಿದೆ. ಲಸಿಕೆಗಳ ಮಿಶ್ರಣದಿಂದ ಕೊರೊನಾ ವಿರುದ್ಧ ಹೋರಾಡಲು ಹೆಚ್ಚು ರಕ್ಷಣೆ ಸಿಗುತ್ತೆ ಎಂದು ಆಕ್ಸ್‌ಫರ್ಡ್ ವ್ಯಾಕ್ಸಿನ್ ಗ್ರೂಪ್ ಅಧ್ಯಯನ ನಡೆಸಿದೆ. ಅಸ್ಟ್ರಾಜೆನೆಕಾ ಮತ್ತು ಫಿಜರ್-ಬಯೋಟೆಕ್ ಲಸಿಕೆಗಳನ್ನು ಪರ್ಯಾಯ ಪ್ರಮಾಣವು ಕೊರೊನಾ ವೈರಸ್ ವಿರುದ್ಧ ಹೋರಾಡಲು ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ ಎಂಬುವುದು ಅಧ್ಯಯನದ ಮೂಲಕ ತಿಳಿದುಬಂದಿದೆ.
ಮೊದಲು ಆಸ್ಟ್ರಾಜನಿಕ ಕಂಪನಿಯ ಲಸಿಕೆ ಪಡೆಯಬೇಕು. ಬಳಿಕ ಫೈಜರ್ ಕಂಪನಿ ಲಸಿಕೆ ಪಡೆದರೆ ಕೊರೊನಾ ವಿರುದ್ಧ 9 ಪಟ್ಟು ಹೆಚ್ಚಿನ ಪ್ರತಿಕಾಯಗಳು ಸೃಷ್ಟಿಯಾಗುತ್ತವೆ ಎಂದು ಲಸಿಕೆಗಳ ಬಗ್ಗೆ ಪ್ರೊಫೆಸರ್ ಮ್ಯಾಥ್ಯೂ ಸ್ನಾಪೆ ತಿಳಿಸಿದ್ದಾರೆ. ಆಸ್ಟ್ರಾಜನಿಕ ಕಂಪನಿಯ 2 ಡೋಸ್ ಲಸಿಕೆಗಿಂತ 9 ಪಟ್ಟು ಹೆಚ್ಚು ಪ್ರತಿಕಾಯ ಸೃಷ್ಟಿಯಾಗುತ್ತೆ. ಮೊದಲು ಆಸ್ಟ್ರಾಜನಿಕ ಬಳಿಕ ಫೈಜರ್ ಲಸಿಕೆ ಪಡೆದರೆ ಪ್ರತಿಕಾಯ ಸೃಷ್ಟಿಯಾಗುತ್ತೆ. ಆದರೆ ಮೊದಲು ಫೈಜರ್ ಕಂಪನಿಯ ಲಸಿಕೆಯನ್ನು ಪಡೆದು ಬಳಿಕ ಆಸ್ಟ್ರಾಜನಿಕ ಲಸಿಕೆ ಪಡೆದರೆ 5 ಪಟ್ಟು ಪ್ರತಿಕಾಯ ಸೃಷ್ಟಿಯಾಗುತ್ತೆ. ಆಸ್ಟ್ರಾಜನಿಕ ಕಂಪನಿಯ 2 ಡೋಸ್ ಲಸಿಕೆ ಪಡೆದರೆ ಆಗ ಸೃಷ್ಟಿಯಾಗುವ ಪ್ರತಿಕಾಯಕ್ಕಿಂತ 5 ಪಟ್ಟು ಹೆಚ್ಚು ಸೃಷ್ಟಿಯಾಗುತ್ತೆ ಎಂದು ಆಕ್ಸ್‌ಫರ್ಡ್ ವ್ಯಾಕ್ಸಿನ್ ಗ್ರೂಪ್ ಅಧ್ಯಯನ ಹೇಳಿದೆ.
ಇನ್ನು ಕೊವಿಶೀಲ್ಡ್ ನಡುವಿನ ಅಂತರ ಹೆಚ್ಚಾದಷ್ಟು ಹೆಚ್ಚು ರಕ್ಷಣೆ ಇರುತ್ತೆ ಎಂದು ಆಕ್ಸ್‌ಫರ್ಡ್ ವಿವಿಯ ಮತ್ತೊಂದು ಅಧ್ಯಯನದಿಂದ ಮಾಹಿತಿ ಸಿಕ್ಕಿದೆ. 2 ಡೋಸ್‌ಗಳ ನಡುವೆ ಅಂತರ ಹೆಚ್ಚಾದಷ್ಟು ಹೆಚ್ಚು ರಕ್ಷಣೆ ಇರುತ್ತದೆ. ಕೊವಿಶೀಲ್ಡ್ 2 ಡೋಸ್ ನಡುವೆ ಅಂತರ 8-12 ವಾರದ ಅಂತರಕ್ಕಿಂತ 45 ವಾರ ಇದ್ದರೆ. 4 ಪಟ್ಟು ಹೆಚ್ಚು ಪ್ರತಿಕಾಯಗಳು ಸೃಷ್ಟಿಯಾಗುತ್ತದೆ. ಈ ಪ್ರತಿಕಾಯಗಳು ಒಂದು ವರ್ಷದವರೆಗೂ ಇರುತ್ತದೆ. 3ನೇ ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಂಡರೆ ಎರಡು ಪಟ್ಟು ಹೆಚ್ಚಿನ ಪ್ರತಿಕಾಯಗಳು ಸೃಷ್ಟಿಯಾಗುತ್ತದೆ. ಮನುಷ್ಯನ ದೇಹದ ಪ್ರತಿಕಾಯಗಳು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತವೆ. ಪ್ರತಿಕಾಯಗಳ ಪ್ರಮಾಣ ಹೆಚ್ಚಾದಷ್ಟು ಕೊರೊನಾ ವಿರುದ್ಧ ಹೆಚ್ಚಿನ ರಕ್ಷಣೆ ಸಿಗುತ್ತದೆ.