ದೆಹಲಿ: ಮುಂಬರುವ ಜುಲೈ 19ನೇ ತಾರೀಖಿನಿಂದ ಸಂಸತ್ ಅಧಿವೇಶನ ನಡೆಸಲು ಶಿಫಾರಸು ಮಾಡಲಾಗಿದೆ. ಜುಲೈ 19ರಿಂದ ಆಗಸ್ಟ್ 13ರ ವರೆಗೆ ಮುಂಗಾರು ಸಂಸತ್ ಅಧಿವೇಶನ ನಡೆಸುವ ಬಗ್ಗೆ ಸಂಸದೀಯ ವ್ಯವಹಾರಗಳ ಸಮಿತಿಯಿಂದ ಶಿಫಾರಸು ನೀಡಲಾಗಿದೆ. ಬಹುತೇಕ ಒಂದು ತಿಂಗಳ ಅವಧಿಯಲ್ಲಿ 20 ದಿನಗಳ ಕಾಲ ಸಂಸತ್ ಅಧಿವೇಶನ ನಡೆಯಲಿದೆ ಎಂದು ತಿಳಿಸಲಾಗಿದೆ.
ಮುಂಗಾರು ಸಂಸತ್ ಅಧಿವೇಶನವು ಸಾಮಾನ್ಯವಾಗಿ ಜುಲೈ ಮೂರನೇ ವಾರದಿಂದ ಆರಂಭವಾಗುತ್ತದೆ. ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಮುಂಚಿತವಾಗಿ ಅಂತ್ಯವಾಗುತ್ತದೆ. ಮುಂಗಾರು ಸಂಸತ್ ಅಧಿವೇಶನದ ಅವಧಿಯ ಬಗ್ಗೆ ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಶಿಫಾರಸು ಮಾಡಿರುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.
ಸಂಸತ್ ಭವನದಲ್ಲಿ ಕೂಡ ಕೊರೊನಾ ನಿಯಮಾವಳಿಗಳನ್ನು ಪಾಲಿಸಿ ಅಧಿವೇಶನ ನಡೆಸಲಾಗುವುದು ಎಂದು ತಿಳಿಸಲಾಗಿದೆ. ಹಾಗೂ ಅಧಿವೇಶನಕ್ಕೆ ಸಂಸತ್ ಭವನ ಪ್ರವೇಶಿಸುವ ಸದಸ್ಯರು ಕನಿಷ್ಠ ಒಂದು ಡೋಸ್ ಕೊರೊನಾ ಲಸಿಕೆ ಪಡೆದಿರುತ್ತಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬಿಗಿಯಾದ ಜೀನ್ಸ್ ಧರಿಸಿ ಬಂದ ಸಂಸದೆಯನ್ನು ಸಂಸತ್ತಿನಿಂದ ಹೊರಗೆ ಕಳಿಸಿದ ಸ್ಪೀಕರ್; ಕ್ಷಮೆಗೆ ಆಗ್ರಹಿಸಿ ಪ್ರತಿಭಟನೆ
ಲಾಕ್ಡೌನ್ ಮಧ್ಯೆಯೂ ಮುಂದುವರಿದ ಹೊಸ ಸಂಸತ್ ಭವನ ನಿರ್ಮಾಣ ಕಾಮಗಾರಿ; ಕಾರ್ಮಿಕರ ಅನುಕೂಲಕ್ಕಾಗಿ ಪೊಲೀಸರಿಗೆ ಪತ್ರ