ಆಕ್ಸ್‌ಫರ್ಡ್ ವಿವಿಯಿಂದ ಹೊಸ ಅಧ್ಯಯನ; ಕೊವಿಶೀಲ್ಡ್ 2 ಡೋಸ್ ನಡುವೆ ಅಂತರ ಹೆಚ್ಚಿದಷ್ಟು ಹೆಚ್ಚು ರಕ್ಷಣೆ

ಮೊದಲು ಆಸ್ಟ್ರಾಜನಿಕ ಕಂಪನಿಯ ಲಸಿಕೆ ಪಡೆಯಬೇಕು. ಬಳಿಕ ಫೈಜರ್ ಕಂಪನಿ ಲಸಿಕೆ ಪಡೆದರೆ ಕೊರೊನಾ ವಿರುದ್ಧ 9 ಪಟ್ಟು ಹೆಚ್ಚಿನ ಪ್ರತಿಕಾಯಗಳು ಸೃಷ್ಟಿಯಾಗುತ್ತವೆ ಎಂದು ಲಸಿಕೆಗಳ ಬಗ್ಗೆ ಪ್ರೊಫೆಸರ್ ಮ್ಯಾಥ್ಯೂ ಸ್ನಾಪೆ ತಿಳಿಸಿದ್ದಾರೆ.

ಆಕ್ಸ್‌ಫರ್ಡ್ ವಿವಿಯಿಂದ ಹೊಸ ಅಧ್ಯಯನ; ಕೊವಿಶೀಲ್ಡ್ 2 ಡೋಸ್ ನಡುವೆ ಅಂತರ ಹೆಚ್ಚಿದಷ್ಟು ಹೆಚ್ಚು ರಕ್ಷಣೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 29, 2021 | 2:41 PM

ದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ಲಸಿಕೆಯ ಅಭಾವ ಹೆಚ್ಚಾಗಿದೆ. ಜಾಗತಿಕ ಮಟ್ಟದಲ್ಲಿ ಲಸಿಕೆಯ ಕೊರತೆಯ ಮಧ್ಯೆ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಮತ್ತೊಂದು ಅಧ್ಯಯನ ನಡೆಸಿದೆ. ಲಸಿಕೆಗಳ ಮಿಶ್ರಣದಿಂದ ಕೊರೊನಾ ವಿರುದ್ಧ ಹೋರಾಡಲು ಹೆಚ್ಚು ರಕ್ಷಣೆ ಸಿಗುತ್ತೆ ಎಂದು ಆಕ್ಸ್‌ಫರ್ಡ್ ವ್ಯಾಕ್ಸಿನ್ ಗ್ರೂಪ್‌ ಅಧ್ಯಯನ ನಡೆಸಿದೆ. ಅಸ್ಟ್ರಾಜೆನೆಕಾ ಮತ್ತು ಫಿಜರ್-ಬಯೋಟೆಕ್ ಲಸಿಕೆಗಳನ್ನು ಪರ್ಯಾಯ ಪ್ರಮಾಣವು ಕೊರೊನಾ ವೈರಸ್ ವಿರುದ್ಧ ಹೋರಾಡಲು ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ ಎಂಬುವುದು ಅಧ್ಯಯನದ ಮೂಲಕ ತಿಳಿದುಬಂದಿದೆ.

ಮೊದಲು ಆಸ್ಟ್ರಾಜನಿಕ ಕಂಪನಿಯ ಲಸಿಕೆ ಪಡೆಯಬೇಕು. ಬಳಿಕ ಫೈಜರ್ ಕಂಪನಿ ಲಸಿಕೆ ಪಡೆದರೆ ಕೊರೊನಾ ವಿರುದ್ಧ 9 ಪಟ್ಟು ಹೆಚ್ಚಿನ ಪ್ರತಿಕಾಯಗಳು ಸೃಷ್ಟಿಯಾಗುತ್ತವೆ ಎಂದು ಲಸಿಕೆಗಳ ಬಗ್ಗೆ ಪ್ರೊಫೆಸರ್ ಮ್ಯಾಥ್ಯೂ ಸ್ನಾಪೆ ತಿಳಿಸಿದ್ದಾರೆ. ಆಸ್ಟ್ರಾಜನಿಕ ಕಂಪನಿಯ 2 ಡೋಸ್‌ ಲಸಿಕೆಗಿಂತ 9 ಪಟ್ಟು ಹೆಚ್ಚು ಪ್ರತಿಕಾಯ ಸೃಷ್ಟಿಯಾಗುತ್ತೆ. ಮೊದಲು ಆಸ್ಟ್ರಾಜನಿಕ ಬಳಿಕ ಫೈಜರ್ ಲಸಿಕೆ ಪಡೆದರೆ ಪ್ರತಿಕಾಯ ಸೃಷ್ಟಿಯಾಗುತ್ತೆ. ಆದರೆ ಮೊದಲು ಫೈಜರ್ ಕಂಪನಿಯ ಲಸಿಕೆಯನ್ನು ಪಡೆದು ಬಳಿಕ ಆಸ್ಟ್ರಾಜನಿಕ ಲಸಿಕೆ ಪಡೆದರೆ 5 ಪಟ್ಟು ಪ್ರತಿಕಾಯ ಸೃಷ್ಟಿಯಾಗುತ್ತೆ. ಆಸ್ಟ್ರಾಜನಿಕ ಕಂಪನಿಯ 2 ಡೋಸ್ ಲಸಿಕೆ ಪಡೆದರೆ ಆಗ ಸೃಷ್ಟಿಯಾಗುವ ಪ್ರತಿಕಾಯಕ್ಕಿಂತ 5 ಪಟ್ಟು ಹೆಚ್ಚು ಸೃಷ್ಟಿಯಾಗುತ್ತೆ ಎಂದು ಆಕ್ಸ್‌ಫರ್ಡ್ ವ್ಯಾಕ್ಸಿನ್ ಗ್ರೂಪ್ ಅಧ್ಯಯನ ಹೇಳಿದೆ.

ಇನ್ನು ಕೊವಿಶೀಲ್ಡ್ ನಡುವಿನ ಅಂತರ ಹೆಚ್ಚಾದಷ್ಟು ಹೆಚ್ಚು ರಕ್ಷಣೆ ಇರುತ್ತೆ ಎಂದು ಆಕ್ಸ್‌ಫರ್ಡ್ ವಿವಿಯ ಮತ್ತೊಂದು ಅಧ್ಯಯನದಿಂದ ಮಾಹಿತಿ ಸಿಕ್ಕಿದೆ. 2 ಡೋಸ್‌ಗಳ ನಡುವೆ ಅಂತರ ಹೆಚ್ಚಾದಷ್ಟು ಹೆಚ್ಚು ರಕ್ಷಣೆ ಇರುತ್ತದೆ. ಕೊವಿಶೀಲ್ಡ್ 2 ಡೋಸ್ ನಡುವೆ ಅಂತರ 8-12 ವಾರದ ಅಂತರಕ್ಕಿಂತ 45 ವಾರ ಇದ್ದರೆ. 4 ಪಟ್ಟು ಹೆಚ್ಚು ಪ್ರತಿಕಾಯಗಳು ಸೃಷ್ಟಿಯಾಗುತ್ತದೆ. ಈ ಪ್ರತಿಕಾಯಗಳು ಒಂದು ವರ್ಷದವರೆಗೂ ಇರುತ್ತದೆ. 3ನೇ ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಂಡರೆ ಎರಡು ಪಟ್ಟು ಹೆಚ್ಚಿನ ಪ್ರತಿಕಾಯಗಳು ಸೃಷ್ಟಿಯಾಗುತ್ತದೆ. ಮನುಷ್ಯನ ದೇಹದ ಪ್ರತಿಕಾಯಗಳು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತವೆ. ಪ್ರತಿಕಾಯಗಳ ಪ್ರಮಾಣ ಹೆಚ್ಚಾದಷ್ಟು ಕೊರೊನಾ ವಿರುದ್ಧ ಹೆಚ್ಚಿನ ರಕ್ಷಣೆ ಸಿಗುತ್ತದೆ.

ಇದನ್ನೂ ಓದಿ: ಭಾರತದ ಕೊವ್ಯಾಕ್ಸಿನ್​ ಲಸಿಕೆ ಹೆಸರಲ್ಲಿ ಅತಿದೊಡ್ಡ ಹಗರಣ ನಡೆಸಿದ ಆರೋಪ; ಬ್ರೆಜಿಲ್​ ಅಧ್ಯಕ್ಷರ ಕುರ್ಚಿಯನ್ನೇ ಅಲುಗಾಡಿಸುತ್ತಿದೆ ಕೊರೊನಾ ಲಸಿಕೆ

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ