Sign In

By signing in or creating an account, you agree with Associated Broadcasting Company's Terms & Conditions and Privacy Policy.

Central Vista Project: ಕೇಂದ್ರದ ವಿಸ್ಟಾ ಯೋಜನೆಗೆ ತಡೆ ಸಂಬಂಧ ನಾವು ಹಸ್ತಕ್ಷೇಪ ಮಾಡುವುದಿಲ್ಲ..ದೆಹಲಿ ಹೈಕೋರ್ಟ್​ ಆದೇಶಕ್ಕೆ ಒಪ್ಪಿಗೆ: ಸುಪ್ರೀಂಕೋರ್ಟ್​

ಅರ್ಜಿದಾರರು ಕೊವಿಡ್​ 19 ಕಾರಣದಿಂದ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಹೇಳಿದ್ದಾರೆ. ಆದರೆ ಇಲ್ಲಿ ಅರ್ಜಿದಾರರು ಒಂದೇ ಒಂದು ಆಯ್ದ ಯೋಜನೆಗೆ ಸವಾಲು ಹಾಕಿದ್ದಾರೆ ಎಂದು ಹೈಕೋರ್ಟ್ ತನ್ನ ತೀರ್ಪಿನ ವೇಳೆ ಉಲ್ಲೇಖಿಸಿತ್ತು.

Central Vista Project: ಕೇಂದ್ರದ ವಿಸ್ಟಾ ಯೋಜನೆಗೆ ತಡೆ ಸಂಬಂಧ ನಾವು ಹಸ್ತಕ್ಷೇಪ ಮಾಡುವುದಿಲ್ಲ..ದೆಹಲಿ ಹೈಕೋರ್ಟ್​ ಆದೇಶಕ್ಕೆ ಒಪ್ಪಿಗೆ: ಸುಪ್ರೀಂಕೋರ್ಟ್​
ಸುಪ್ರೀಂ​ ಕೋರ್ಟ್
Follow us
TV9 Web
| Updated By: Lakshmi Hegde

Updated on:Jun 29, 2021 | 1:30 PM

ದೆಹಲಿ: ಕೇಂದ್ರ ವಿಸ್ಟಾ ಯೋಜನೆಯಡಿ ನಡೆಯುತ್ತಿರುವ ನೂತನ ಪಾರ್ಲಿಮೆಂಟ್​ ಕಟ್ಟಡ ನಿರ್ಮಾಣ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ತಾತ್ಕಾಲಿಕ ತಡೆ ನೀಡುವಂತೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ದೆಹಲಿ ಹೈಕೋರ್ಟ್​​ನ ವಿಭಾಗೀಯ ಪೀಠ ಮೇ 31ರಂದು ವಜಾಗೊಳಿಸಿತ್ತು. ಇದೀಗ ಸುಪ್ರೀಂಕೋರ್ಟ್​ ಕೂಡ ಹೈಕೋರ್ಟ್​​ನ ತೀರ್ಪಿನಲ್ಲಿ ನಾವು ಹಸ್ತಕ್ಷೇಪ ತೋರುವುದಿಲ್ಲ. ದೆಹಲಿ ಹೈಕೋರ್ಟ್ ತೀರ್ಪನ್ನು ಒಪ್ಪುತ್ತೇವೆ ಎಂದಿದೆ. ದೆಹಲಿ ಹೈಕೋರ್ಟ್​ ಅರ್ಜಿಗಳನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ, ಹಲವು ಅರ್ಜಿದಾರರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ಸರ್ವೋಚ್ಛ ನ್ಯಾಯಾಲಯ ಅದರ ವಿಚಾರಣೆಯನ್ನು ನಿರಾಕರಿಸಿದೆ.

ಅರ್ಜಿದಾರರು ಕೊವಿಡ್​ 19 ಕಾರಣದಿಂದ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಹೇಳಿದ್ದಾರೆ. ಆದರೆ ಇಲ್ಲಿ ಅರ್ಜಿದಾರರು ಒಂದೇ ಒಂದು ಆಯ್ದ ಯೋಜನೆಗೆ ಸವಾಲು ಹಾಕಿದ್ದಾರೆ ಎಂದು ಹೈಕೋರ್ಟ್ ತನ್ನ ತೀರ್ಪಿನ ವೇಳೆ ಉಲ್ಲೇಖಿಸಿದ್ದ ಅಂಶವನ್ನೇ ಸುಪ್ರೀಂಕೋರ್ಟ್ ಕೂಡ ಒತ್ತಿಹೇಳಿದ್ದು, ಹೈಕೋರ್ಟ್​ನ ದೃಷ್ಟಿಕೋನ ಸರಿಯಾಗಿಯೇ ಇದೆ ಎಂದು ಹೇಳಿದೆ. ಸಾರ್ವಜನಿಕವಾಗಿ ನಾವು ತುಂಬ ಉತ್ಸಾಹಭರಿತರಾಗಿದ್ದು, ಉಳಿದ ಯೋಜನೆಗಳ ಬಗ್ಗೆಯೂ ನಾವು ಕಳವಳಹೊಂದಿದ್ದೇವೆ ಎಂಬುದನ್ನು ಸಾಬೀತು ಪಡಿಸುವ ಸ್ಥಿತಿಯಲ್ಲಿ ಅರ್ಜಿದಾರರು ಇಲ್ಲ. ನಾವು ಹೈಕೋರ್ಟ್​ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಅಲ್ಲದೆ, ವಿಸ್ಟಾ ಯೋಜನೆ ಗುತ್ತಿಗೆದಾರ ಕೊವಿಡ್​ 19 ಪ್ರೋಟೋಕಾಲ್​ಗಳನ್ನು ಪಾಲಿಸುತ್ತಲೇ ಕೆಲಸ ನಡೆಸುತ್ತಿದ್ದರೂ, ಅರ್ಜಿದಾರರು ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಿದ್ದು ಗಮನಕ್ಕೆ ಬಂದಿದ್ದಾಗಿ ಕೋರ್ಟ್​ ಹೇಳಿದೆ.

ಕೊವಿಡ್​ ಎರಡನೇ ಅಲೆಯ ಉಲ್ಬಣದ ಮಧ್ಯೆಯೂ ಕೇಂದ್ರ ಸರ್ಕಾರ ವಿಸ್ಟಾ ಯೋಜನೆಯನ್ನು ಮುಂದುವರಿಸಿದ್ದರ ಬಗ್ಗೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಬೇಕು ಎಂದು ಹಲವರು ಹೈಕೋರ್ಟ್​ಗೆ ಪಿಐಎಲ್​ ಸಲ್ಲಿಸಿದ್ದವು. ವಿಚಾರಣೆ ನಡೆಸಿ್ದ ಮುಖ್ಯ ನ್ಯಾಯಾಧೀಶ ಡಿ.ಎನ್​.ಪಟೇಲ್​ ಮತ್ತು ಜಸ್ಟೀಸ್​​ ಜ್ಯೋತಿ ಸಿಂಗ್​ ಅವರ ದ್ವಿಸದಸ್ಯ ಪೀಠ, ಅರ್ಜಿಗಳನ್ನು ವಜಾಗೊಳಿಸಿದ್ದರು.

ಇದನ್ನೂ ಓದಿ: MS Dhoni: ಧೋನಿಯ ಹೆಲ್ಮೆಟ್​ಗೆ ರಾಷ್ಟ್ರಧ್ವಜವನ್ನು ಹೊಂದುವ ಭಾಗ್ಯ ಸಿಗಲಿಲ್ಲ; ಇದರ ಹಿಂದಿನ ಅಸಲಿ ಕಾರಣ ಗೊತ್ತಾ?

Supreme Court refuses to interfere with Delhi High Court order about Central Vista Project

Published On - 1:29 pm, Tue, 29 June 21

ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್