ದೆಹಲಿ: ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡುವುದಕ್ಕಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಐಟಿ ನಿಯಮಗಳಿಗೆ ವಿರುದ್ಧವಾಗಿರುವ 8 YouTube ಚಾನಲ್‌ಗಳನ್ನು ನಿರ್ಬಂಧಿಸಿದೆ. ಐಟಿ ನಿಯಮಗಳು, 2021 ರ ಅಡಿಯಲ್ಲಿ 7 ಭಾರತೀಯ ಮತ್ತು 1 ಪಾಕಿಸ್ತಾನ ಮೂಲದ YouTube ಸುದ್ದಿ ಚಾನಲ್‌ಗಳನ್ನು ನಿರ್ಬಂಧಿಸಲಾಗಿದೆ
ನಿರ್ಬಂಧಿಸಲಾದ ಯೂಟ್ಯೂಬ್ ಚಾನೆಲ್‌ಗಳು 114 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿವೆ ಮತ್ತು 85 ಲಕ್ಷ 73 ಸಾವಿರ ಚಂದಾದಾರರು ಹೊಂದಿದೆ. ಯೂಟ್ಯೂಬ್‌ನಲ್ಲಿ ನಿರ್ಬಂಧಿಸಲಾದ ಚಾನೆಲ್‌ಗಳಿಂದ ನಕಲಿ ಭಾರತ-ವಿರೋಧಿ ವಿಷಯವನ್ನು ಹಣಗಳಿಸಲಾಗುತ್ತಿದೆ ಎಂದು ಹೇಳಿಲಾಗಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಐಟಿ ನಿಯಮಗಳು, 2021 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಎಂಟು (8) ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳು, ಒಂದು (1) ಫೇಸ್‌ಬುಕ್ ಖಾತೆ ಮತ್ತು ಎರಡು ಫೇಸ್‌ಬುಕ್ ಪೋಸ್ಟ್‌ಗಳನ್ನು ನಿರ್ಬಂಧಿಸಲು ಆ.16 ರಂದು ಆದೇಶಗಳನ್ನು ಹೊರಡಿಸಿದೆ. ನಿರ್ಬಂಧಿಸಲಾದ ಯೂಟ್ಯೂಬ್ ಚಾನೆಲ್‌ಗಳು 114 ಕೋಟಿಗೂ ಹೆಚ್ಚು ಸಂಚಿತ ವೀಕ್ಷಕರನ್ನು ಹೊಂದಿದ್ದು, 85 ಲಕ್ಷಕ್ಕೂ ಹೆಚ್ಚು ಬಳಕೆದಾರರಿಂದ ಚಂದಾದಾರರಾಗಿದ್ದಾರೆ.
ಈ ಕೆಲವು ಯೂಟ್ಯೂಬ್ ಚಾನೆಲ್‌ಗಳು ಪ್ರಕಟಿಸಿದ ವಿಷಯದ ಉದ್ದೇಶವು ಭಾರತದಲ್ಲಿನ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷವನ್ನು ಹರಡುವುದಾಗಿದೆ. ಆ ಕಾರಣದಿಂದ ನಿರ್ಬಂಧಿಸಲಾದ YouTube ಚಾನಲ್‌ಗಳ ವಿವಿಧ ವೀಡಿಯೊಗಳಲ್ಲಿ ತಪ್ಪು ಮಾಹಿತಿ ಮತ್ತು ಐಟಿ ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ಈ ಚಾನಲ್‌ಗಳನ್ನು ಬ್ಯಾನ್ ಮಾಡಲು ನಿರ್ಧರಿಸಿದೆ. ಭಾರತ ಸರ್ಕಾರವು ಧಾರ್ಮಿಕ ವಿಚಾರಗಳಿಗೆ ಧಕ್ಕೆ ತಂದಿದೆ ಎಂದು ಸುಳ್ಳು ಸುದ್ದಿಯನ್ನು ಹಂಚಿಕೊಂಡಿದೆ. ಭಾರತದಲ್ಲಿ ಧಾರ್ಮಿಕ ಹಬ್ಬಗಳ ಆಚರಣೆಗಳನ್ನು ಇತ್ಯಾದಿಗಳನ್ನು ಭಾರತ ಸರ್ಕಾರ ನಿಷೇಧಿಸಿದೆ. ಇಂತಹ ವಿಷಯವು ದೇಶದಲ್ಲಿ ಕೋಮು ಸೌಹಾರ್ದತೆಗಳಿಗೆ ಧಕ್ಕೆ ಉಂಟುಮಾಡುವ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ವಿಷಯಗಳನ್ನು ಈ ಚಾಲನ್ನಲ್ಲಿ ಪ್ರಸಾರ ಮಾಡಲಾಗಿದೆ ಎಂದು ಹೇಳಿದೆ.
ಈ ಯೂಟ್ಯೂಬ್ ಚಾನೆಲ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಗಳು, ಜಮ್ಮು ಮತ್ತು ಕಾಶ್ಮೀರ ಮುಂತಾದ ವಿವಿಧ ವಿಷಯಗಳ ಕುರಿತು ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡಲು ಬಳಸಲಾಗುತ್ತಿತ್ತು. ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ರಾಜ್ಯಗಳೊಂದಿಗೆ ಭಾರತದ ಸ್ನೇಹ ಸಂಬಂಧಗಳ ವಿಚಾರವಾಗಿ ಅಪಪ್ರಚಾರ ಮಾಡಲಾಗುತ್ತಿದೆ ವಿಚಾರವನ್ನು ಸೂಕ್ಷ್ಮವಾಆಗಿ ಗಮನಿಸಲಾಗಿದೆ.
ಸಚಿವಾಲಯವು ನಿರ್ಬಂಧಿಸಿದ ವಿಷಯವು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಜ್ಯದ ಭದ್ರತೆ, ವಿದೇಶಿ ರಾಜ್ಯಗಳೊಂದಿಗೆ ಭಾರತದ ಸ್ನೇಹ ಸಂಬಂಧಗಳು ಮತ್ತು ದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಕಾರಕವಾಗಿದೆ ಎಂದು ಕಂಡುಬಂದಿದೆ. ಅದರಂತೆ, ವಿಷಯವು ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 69A ವ್ಯಾಪ್ತಿಯೊಳಗೆ ಒಳಗೊಂಡಿದೆ.
Published On - 11:44 am, Thu, 18 August 22