AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bilkis Bano: ಇನ್ನು ನಾನು ಅಸಹಾಯಕಿ; ಅಪರಾಧಿಗಳ ಬಿಡುಗಡೆ ಬಗ್ಗೆ ಅತ್ಯಾಚಾರ ಸಂತ್ರಸ್ತೆ ಬಿಲ್ಕಿಸ್ ಬಾನೊ ಪ್ರತಿಕ್ರಿಯೆ

Gujart Communal Riots: ಸರ್ಕಾರದ ನಿರ್ಧಾರದಿಂದ ತೀವ್ರ ಮಾನಸಿಕ ಆಘಾತ ಅನುಭವಿಸಿದ್ದೇನೆ, ಮೋಸಹೋದ ಅನುಭವವಾಗುತ್ತಿದೆ ಎಂದು ಬಿಲ್ಕಿಸ್ ಬಾನು ಬೇಸರ ವ್ಯಕ್ತಪಡಿಸಿದ್ದಾರೆ.

Bilkis Bano: ಇನ್ನು ನಾನು ಅಸಹಾಯಕಿ; ಅಪರಾಧಿಗಳ ಬಿಡುಗಡೆ ಬಗ್ಗೆ ಅತ್ಯಾಚಾರ ಸಂತ್ರಸ್ತೆ ಬಿಲ್ಕಿಸ್ ಬಾನೊ ಪ್ರತಿಕ್ರಿಯೆ
ಬಿಲ್ಕಿಸ್ ಬಾನು (ಸಂಗ್ರಹ ಚಿತ್ರ)
TV9 Web
| Edited By: |

Updated on:Aug 18, 2022 | 8:26 AM

Share

ಅಹಮದಾಬಾದ್: ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ಕ್ರಮದ ಬಗ್ಗೆ 2002ರ ಗುಜರಾತ್ ಕೋಮು ಸಂಘರ್ಷದಲ್ಲಿ (Gujarat Communal Riots) 11 ಜನರಿಂದ ಸಾಮೂಹಿಕ ಅತ್ಯಾಚಾರಕ್ಕೆ (Gang Rape) ಒಳಗಾಗಿ ಬದುಕುಳಿದ ಸಂತ್ರಸ್ತೆ ಬಿಲ್ಕಿಸ್ ಬಾನು (Bilkis Bano) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸರ್ಕಾರದ ನಿರ್ಧಾರವು ನ್ಯಾಯಾಂಗ ವ್ಯವಸ್ಥೆಯ ಬಗೆಗಿನ ನನ್ನ ನಂಬಿಕೆಯನ್ನೇ ಅಲುಗಾಡಿಸಿದೆ. ತೀವ್ರ ಮಾನಸಿಕ ಆಘಾತ ಅನುಭವಿಸಿದ್ದೇನೆ, ಮೋಸಹೋದ ಅನುಭವವಾಗುತ್ತಿದೆ. ಏನು ಹೇಳಬೇಕು ಎಂದೇ ತೋಚುತ್ತಿಲ್ಲ, ಪದಗಳು ಸಿಗುತ್ತಿಲ್ಲ ಎಂದು ಬಿಲ್ಕಿಸ್ ಬಾನು ಬೇಸರ ವ್ಯಕ್ತಪಡಿಸಿದ್ದಾರೆ.

ಯಾವುದೇ ಮಹಿಳೆಗೆ ಸಿಕ್ಕಿದ್ದ ನ್ಯಾಯ ಹೀಗೆ ಅಂತ್ಯವಾಗುವುದು ಸಾಧ್ಯವೇ? ನಮ್ಮ ದೇಶದ ಅತ್ಯುನ್ನತ ನ್ಯಾಯಾಲಯಗಳನ್ನು ನಾನು ನಂಬಿದ್ದೆ, ನಮ್ಮ ವ್ಯವಸ್ಥೆಯನ್ನು ನಂಬಿದ್ದೆ, ನನಗೆ ಆಗಿದ್ದ ಆಘಾತದಿಂದ ನಿಧಾನವಾಗಿ ಹೊರಗೆ ಬರುತ್ತಿದ್ದೆ. ನನ್ನ ದುಃಖ, ನನ್ನ ಹೋರಾಟ, ನಾನು ನ್ಯಾಯಾಲಯಗಳಿಗೆ ಅಲೆದದ್ದು ಕೇವಲ ನನಗಾಗಿ ಅಲ್ಲ. ನ್ಯಾಯಾಲಯಗಳಲ್ಲಿ ನ್ಯಾಯ ಸಿಗುತ್ತದೆ ಎಂದು ಹೋರಾಡುತ್ತಿರುವ ಎಲ್ಲ ಮಹಿಳೆಯರ ಪರವಾಗಿ ಹೋರಾಡುತ್ತಿದ್ದೇನೆ ಎಂದುಕೊಂಡಿದ್ದೆ. ಆದರೆ ಈಗ ಏನಾಯಿತು’ ಎಂದು ತಮ್ಮ ಮೇಲೆ ಅತ್ಯಾಚಾರ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂದು 18 ವರ್ಷಗಳ ಸುದೀರ್ಘ ಹೋರಾಟ ನಡೆಸಿದ ಬಿಲ್ಕಿಸ್ ಬಾನು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಇಷ್ಟು ದೊಡ್ಡ ಮಟ್ಟದ ಅನ್ಯಾಯದ ನಿರ್ಧಾರ ತೆಗೆದುಕೊಳ್ಳುವ ಮೊದಲು ಯಾರೂ ನನ್ನ ಸುರಕ್ಷೆಯ ಬಗ್ಗೆ ವಿಚಾರಿಸಲಿಲ್ಲ. ಗುಜರಾತ್ ಸರ್ಕಾರಕ್ಕೆ ನನ್ನ ವಿನಂತಿ ಇಷ್ಟೇ. ಯಾವುದೇ ಭಯ ಇಲ್ಲದೇ, ಶಾಂತಿಯಿಂದ ಬದುಕುವ ನನ್ನ ಹಕ್ಕನ್ನು ಮರಳಿ ಕೊಡಿ’ ಎಂದು ಅವರು ಸರ್ಕಾರದ ನಿರ್ಧಾರದ ಬಗ್ಗೆ ಬೇಸರ ಹೊರಹಾಕಿದರು.

ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ ನಂತರ ಬಿಲ್ಕಿಸ್ ಬಾನು ಅವರ ಸುರಕ್ಷೆ ದೊಡ್ಡ ಸವಾಲಾಗುತ್ತದೆ. ಅತ್ಯಾಚಾರಿಗಳು ಜೈಲಿನಲ್ಲಿದ್ದಾಗಲೇ ಬಿಲ್ಕಿಸ್ ಬಾನು ಹಲವು ಬಾರಿ ಮನೆ ಬದಲಿಸಬೇಕಾಯಿತು. ಬಚ್ಚಿಟ್ಟುಕೊಂಡು ಬದುಕಬೇಕಾಯಿತು. ಇದೀಗ ಏಕಾಏಕಿ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವುದರಿಂದ ಸುರಕ್ಷೆ ಮತ್ತು ಕಾನೂನು ಹೋರಾಟದ ಮುಂದಿನ ಹೆಜ್ಜೆ ಬಗ್ಗೆ ಯಾವ ಹೆಜ್ಜೆ ಇರಿಸಬೇಕು ಎಂಬ ಗೊಂದಲ ಅವರನ್ನು ಕಾಡುತ್ತಿದೆ.

ಗುಜರಾತ್ ಹಿಂಸಾಚಾರದ ವೇಳೆ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದು, ಅವರ ಕುಟುಂಬದ 7 ಮಂದಿಯ ಕೊಲೆಯಾಗಿತ್ತು. ಆಗ ಅವರಿಗೆ ಕೇವಲ 21 ವರ್ಷ ವಯಸ್ಸು. ಈ ಅವಧಿಯಲ್ಲಿ ಬಿಲ್ಕಿಸ್ ಬಾನು 5 ತಿಂಗಳ ಗರ್ಭಿಣಿಯಾಗಿದ್ದರು. ಅವರ ಮೂರು ವರ್ಷದ ಮಗಳನ್ನೂ ದುಷ್ಕರ್ಮಿಗಳು ಕೊಂದಿದ್ದರು. ಮುಂಬೈನ ಸಿಬಿಐ ಕೋರ್ಟ್​ ಜನವರಿ 21, 2008ರಂದು ಈ ಪ್ರಕರಣಕ್ಕೆ ಸಂಬಂಧಿಸಿದ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರದ ದಿನಗಳಲ್ಲಿ ಬಾಂಬೆ ಹೈಕೋರ್ಟ್​ ಈ ತೀರ್ಪನ್ನು ಎತ್ತಿಹಿಡಿದಿತ್ತು.

ಭಾರತವು ಸ್ವಾತಂತ್ರ್ಯ ಗಳಿಸಿ 75 ವರ್ಷಗಳಾದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡುವ ಅಪರಾಧಿಗಳ ಪಟ್ಟಿಯಲ್ಲಿ ಈ ಅಪರಾಧಿಗಳ ಹೆಸರನ್ನೂ ಗುಜರಾತ್ ಸರ್ಕಾರ ಸೇರಿಸಿತ್ತು. ಬಿಜೆಪಿ ನಿರ್ಧಾರ ಸ್ವಾಗತಿಸಿದ್ದ ಹಿಂದುತ್ವಪರ ಸಂಘಟನೆಗಳ ನಾಯಕರು ಸಿಹಿ ಹಂಚಿ, ಹಾರ ಹಾಕಿ ಸ್ವಾಗತಿಸಿದ್ದರು.

Published On - 8:26 am, Thu, 18 August 22

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್